ಕಲ್ಲಂಗಡಿ ಹಣ್ಣಿನ ರಸ
ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಈ ಹಣ್ಣು ಹೆಚ್ಚಾಗಿ ಬೇಸಿಗೆಯಲ್ಲಿ ಮಾತ್ರ ಸಿಗುತ್ತದೆ. ಈ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಹೇರಳವಾಗಿವೆ. ಕ್ಯಾಲೋರಿಗಳು ಕಡಿಮೆ. ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿದರೆ ನೀವು ಹೈಡ್ರೇಟ್ ಆಗಿರುವುದಲ್ಲದೆ.. ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅನಾನಸ್ ರಸ
ಅನಾನಸ್ ಜ್ಯೂಸ್ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ಬ್ರೋಮೆಲೈನ್ ಹೇರಳವಾಗಿದೆ. ಇದು ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.
ದಾಳಿಂಬೆ ರಸ
ದಾಳಿಂಬೆ ನಮ್ಮ ಆರೋಗ್ಯಕ್ಕೆ ಮಾಡುವ ಒಳಿತು ಅಷ್ಟಿಷ್ಟಲ್ಲ. ಪ್ರತಿದಿನ ಒಂದು ದಾಳಿಂಬೆ ಹಣ್ಣನ್ನು ತಿಂದರೆ ದೇಹದಲ್ಲಿ ರಕ್ತ ಹೇರಳವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ದಾಳಿಂಬೆ ರಸವನ್ನು ಕುಡಿದರೆ ಹಸಿವು ಕಡಿಮೆಯಾಗುತ್ತದೆ. ಅಲ್ಲದೆ ಹೊಟ್ಟೆಯ ಕೊಬ್ಬು ಕೂಡ ಕರಗುತ್ತದೆ.
ನಿಂಬೆ ರಸ
ತೂಕ ಇಳಿಸಿಕೊಳ್ಳುವಲ್ಲಿ, ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ನಿಂಬೆ ರಸ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಪ್ರತಿದಿನ ನಿಂಬೆ ರಸವನ್ನು ಕುಡಿದರೆ ಅದು ಡಿಟಾಕ್ಸಿಫೈಯರ್ ಆಗಿ ಕೆಲಸ ಮಾಡಿ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
ದ್ರಾಕ್ಷಿ ಹಣ್ಣಿನ ರಸ
ದ್ರಾಕ್ಷಿ ರಸದಲ್ಲಿ ನಮ್ಮನ್ನು ಆರೋಗ್ಯವಾಗಿಡುವ ಅನೇಕ ಪೋಷಕಾಂಶಗಳಿವೆ. ಮುಖ್ಯವಾಗಿ ಈ ದ್ರಾಕ್ಷಿ ರಸದಲ್ಲಿ ನಮ್ಮ ದೇಹದಲ್ಲಿ ಕೊಬ್ಬನ್ನು ಕರಗಿಸುವ ಗುಣಗಳು ಹೇರಳವಾಗಿವೆ. ನೀವು ಈ ಜ್ಯೂಸ್ ಕುಡಿದರೂ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.