ಮಕ್ಕಳಿಗೆ ಓದಿನ ಪ್ರೋತ್ಸಾಹ
ಮಕ್ಕಳ ಭವಿಷ್ಯ ಉಜ್ವಲವಾಗಿರಲು ಅವರನ್ನು ಸರಿಯಾಗಿ ಬೆಳೆಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ. ಇದಕ್ಕಾಗಿ ಪೋಷಕರು ಮಕ್ಕಳಿಗೆ ಓದು ಬರೆಯುವುದನ್ನು ಕಲಿಸುವುದಲ್ಲದೆ, ಅವರು ಚೆನ್ನಾಗಿ ಓದಲು ಪ್ರೋತ್ಸಾಹಿಸುತ್ತಾರೆ. ಇದಕ್ಕಾಗಿ ಪೇರೆಂಟ್ಸ್ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುವುದಲ್ಲದೆ, ಅವರಿಗೆ ಬೇಕಾದ ಎಲ್ಲವನ್ನೂ ಒದಗಿಸುತ್ತಾರೆ.
ಮಕ್ಕಳ ಓದಿಗೆ ಪ್ರೇರಣೆ
ಕೆಲವೊಮ್ಮೆ ಮಕ್ಕಳು ಆಟದಲ್ಲಿ ಮಗ್ನರಾಗಿ ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಪೇರೆಂಟ್ಸ್ ಒತ್ತಾಯಿಸಿದ್ರೂ ಸರಿಯಾಗಿ ಓದಲ್ಲ. ಹೀಗಾಗಿ ಕೆಲವೊಮ್ಮೆ ಪೇರೆಂಟ್ಸ್ ಮಕ್ಕಳನ್ನು ಬೈಯ್ಯುತ್ತಾರೆ ಅಥವಾ ಒತ್ತಡ ಹಾಕುತ್ತಾರೆ. ಆದ್ರೆ ಹೀಗೆ ಮಾಡಿದ್ರೂ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಲ್ಲ. ನಿಮ್ಮ ಮಕ್ಕಳೂ ಹೀಗೆ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ರೆ, ಅವರಲ್ಲಿ ಓದಿನ ಹುಚ್ಚು ಹುಟ್ಟಿಸಲು ಕೆಲವು ವಿಷಯಗಳನ್ನು ಮಾಡಬೇಕು. ಅದೇನು ಅಂತ ಈ ಪೋಸ್ಟ್ ನಲ್ಲಿ ತಿಳಿದುಕೊಳ್ಳೋಣ.
ಮಕ್ಕಳ ಓದಿಗೆ ಪ್ರೇರಣೆ
ಮೆಚ್ಚುಗೆ ಸೂಚಿಸಿ:
ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಮೊದಲು ಅವರು ಮಾಡುವ ಸಣ್ಣಪುಟ್ಟ ಕೆಲಸಗಳನ್ನೂ ಮೆಚ್ಚಿ. ಯಾಕಂದ್ರೆ ಪ್ರತಿಯೊಬ್ಬ ಮಗುವೂ ಪೇರೆಂಟ್ಸ್ ನಿಂದ ಇದನ್ನೇ ನಿರೀಕ್ಷಿಸುತ್ತದೆ. ನೀವು ಮಕ್ಕಳನ್ನು ಮೆಚ್ಚಿದರೆ ಅವರ ಮನಸ್ಸು ಗಟ್ಟಿಯಾಗಿ, ಉತ್ಸಾಹದಿಂದ ಓದಿನಲ್ಲಿ ಆಸಕ್ತಿ ತೋರಿಸಲು ಶುರುಮಾಡುತ್ತಾರೆ.
ಓದಿನ ಸಮಯ ನಿಗದಿಪಡಿಸಿ:
ನೀವು ಮಕ್ಕಳಿಗೆ ಒಂದು ರೂಢಿ ರೂಪಿಸಿ. ಆ ರೂಢಿಯ ಮೂಲಕ ನೀವು ಮಕ್ಕಳನ್ನು ಪ್ರೋತ್ಸಾಹಿಸಬಹುದು. ಮಕ್ಕಳ ಓದಿನ ಸಮಯ ನಿಗದಿಪಡಿಸಿದರೆ ಅವರು ಪ್ರತಿದಿನ ಅದನ್ನು ಪಾಲಿಸುವ ಮೂಲಕ ಅವರ ಪೂರ್ಣ ಗಮನ ಓದಿನ ಮೇಲೆ ಇರುತ್ತದೆ. ಮುಖ್ಯವಾಗಿ ಮಕ್ಕಳನ್ನು 45 ನಿಮಿಷಗಳಿಗಿಂತ ಹೆಚ್ಚು ಓದಲು ಬಿಡಬೇಡಿ.
ಮಕ್ಕಳ ಓದಿಗೆ ಪ್ರೇರಣೆ
ಬೇರೆಯವರ ಜೊತೆ ಹೋಲಿಸಬೇಡಿ!
ಹಲವು ಪೇರೆಂಟ್ಸ್ ಮಾಡುವ ತಪ್ಪು ಇದು. ಮಕ್ಕಳು ಚೆನ್ನಾಗಿ ಓದಬೇಕು ಅಂತ ಹಲವು ಪೇರೆಂಟ್ಸ್ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಅಥವಾ ಮಕ್ಕಳ ಫ್ರೆಂಡ್ಸ್ ಜೊತೆ ಹೋಲಿಸಿ ಮಾತಾಡ್ತಾರೆ. ಆದ್ರೆ ಇದು ತಪ್ಪು. ಪೇರೆಂಟ್ಸ್ ಮಾಡುವ ಈ ಕೆಲಸದಿಂದ ಮಕ್ಕಳು ಓದಿನಿಂದ ದೂರ ಓಡಿಹೋಗ್ತಾರೆ. ಹೀಗಾಗಿ ಪೇರೆಂಟ್ಸ್ ಈ ಅಭ್ಯಾಸ ಬಿಟ್ಟುಬಿಡಿ.
ಓದಿನ ಒತ್ತಡ ಹಾಕಬೇಡಿ!
ಮಕ್ಕಳನ್ನು ಚೆನ್ನಾಗಿ ಓದಲು ಪ್ರೋತ್ಸಾಹಿಸಬೇಕೇ ಹೊರತು ಅವರ ಮೇಲೆ ಓದಿನ ಒತ್ತಡ ಹಾಕಬಾರದು. ಇದು ಅವರ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಓದು ಒಂದು ಭಾರ ಅಂತ ಅನಿಸುತ್ತದೆ. ಹೀಗಾಗಿ, ಪೇರೆಂಟ್ಸ್ ಮಕ್ಕಳ ಮೇಲೆ ಓದಿನ ಒತ್ತಡ ಹಾಕಬೇಡಿ.
ಮಕ್ಕಳಿಗೆ ಉತ್ತಮ ಪ್ರದರ್ಶನಕ್ಕೆ ಪ್ರೇರಣೆ
ಯೋಗ & ಧ್ಯಾನ:
ಓದಿನಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಅವರನ್ನು ಯೋಗ ಮತ್ತು ಧ್ಯಾನದಲ್ಲಿ ತೊಡಗಿಸಿ. ಇದರಿಂದ ಅವರ ಮನಸ್ಸು ಶಾಂತವಾಗಿ ಮೆದುಳು ಚೆನ್ನಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ