ಕೊಪ್ಪಳದಲ್ಲಿ ಮರಗಳು ಒಣಗುವುದನ್ನು ನೋಡಿ ಬೆಚ್ಚಿ ಬಿದ್ದ ಜನ..!

First Published Dec 4, 2020, 2:20 PM IST

ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.03)
: ಇದ್ದಕ್ಕಿದ್ದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿದೆ. ಕಳೆದೊಂದು ತಿಂಗಳಿಂದ ಅತೀ ಸಣ್ಣ ಮರವೂ ಸೇರಿದಂತೆ ದೊಡ್ಡ ದೊಡ್ಡ ಬೇವಿನ ಮರಗಳು ಏಕಾಏಕಿ ಒಣಗಲಾರಂಭಿಸಿದ್ದು, ಆತಂಕಕ್ಕೆ ಹುಟ್ಟಿಸಿದೆ.
 

ಇದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರವದವರಿಗೂ ಹೊಸ ಸಮಸ್ಯೆಯಾಗಿ ಕಾಣುತ್ತಿದೆ. ಮೊದಲ ಬಾರಿ ಇಂಥದ್ದೊಂದು ಸಮಸ್ಯೆಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಮಳೆಗಾಲ ಈಗಷ್ಟೇ ಮುಗಿದಿದ್ದು, ಆಗಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ಬೇವಿನ ಮರಗಳು ಮಾತ್ರ ಏಕಾಏಕಿ ಒಣಗಲಾರಂಭಿಸಿವೆ.
undefined
ಯಾವುದಾದರೂ ಒಂದು ಬೇವಿನ ಮರ ಅಥವಾ ಒಂದು ಏರಿಯಾ ಬೇವಿನ ಮರ ಒಣಗುತ್ತಿದ್ದರೆ ಏನೋ ಸಮಸ್ಯೆ ಇದೆ ಎನ್ನಬಹುದಿತ್ತು. ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿವೆ. ಕೆಲವೊಂದು ಈಗಾಗಲೇ ಸಂಪೂರ್ಣ ಒಣಗಿವೆ. ಈ ರೀತಿ ಬೇವಿನ ಮರಗಳು ಅಷ್ಟು ಸಂಪೂರ್ಣ ಒಣಗಿದರೆ ಪರಿಸರದ ಅಸಮತೋಲನ ಅಥವಾ ಏರುಪೇರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
undefined
ಬೇವಿನ ಮರ ಹೊರತುಪಡಿಸಿ ಬೇರೆ ಯಾವುದೇ ಮರಗಳು ಒಣಗುತ್ತಿಲ್ಲ. ಇದು ಯಾಕೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಹಿಂದೆ ಯಾವಾಗಲೂ ಈ ರೀತಿ ಬೇವಿನ ಮರಗಳು ಒಣಗಿದ ಉದಾಹರಣೆ ಇಲ್ಲ ಎನ್ನುತ್ತಾರೆ.
undefined
ಇದನ್ನು ಕೆಲವರು ಡೈ ಬ್ಯಾಕ್‌ ಡಿಸೀಜ್‌ ಎಂದು ಕರೆಯುತ್ತಿದ್ದಾರೆ. ಫಂಗಸ್‌ ರೋಗ ತರಹ ಬೇವಿನ ಮರಕ್ಕೆ ಬಂದಿದ್ದು, ವಿಪರೀತ ಹರಡುತ್ತಿದೆ. ಸೊರಗು ರೋಗ ಎನ್ನಲಾಗುತ್ತಿದೆ. ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿರುತ್ತದೆ. ಈ ರೋಗ ಆಗಾಗ ಬರುತ್ತದೆ. ಆದರೆ, ಈ ವರ್ಷ ಅತಿಯಾದ ತಂಪಿನಿಂದಾಗಿ ವಿಪರೀತವಾಗಿ ಹರಡುತ್ತಿದೆ ಎನ್ನುತ್ತಾರೆ ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ.
undefined
ಇದನ್ನು ನಿಯಂತ್ರಣ ಮಾಡಲು ತಾಮ್ರ ಆಧರಿತ ಶಿಲೀಂದ್ರ ನಾಶಕಗಳನ್ನು ಬಳಕೆ ಮಾಡಿ ಸಿಂಪರಣೆ ಮಾಡಬೇಕು ಅಥವಾ ಅದರದೆ ಗಿಡದ ತಪ್ಪಲವನ್ನು ಮಣ್ಣಿನಲ್ಲಿ ಬೆರೆಸಿ ಮರಕ್ಕೆ ಸವರಬೇಕು ಎನ್ನುತ್ತಾರೆ. ನಾವೆಂದೂ ಇಷ್ಟುದೊಡ್ಡ ಪ್ರಮಾಣದಲ್ಲಿ ಬೇವಿನ ಮರಗಳು ಒಣಗುವುದನ್ನು ನೋಡಿಲ್ಲ. ಈ ಬಗ್ಗೆ ಪರಿಶೀಲಿಸಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಕ್ಕೂ ತಿಳಿಸಿದ್ದೇವೆ ಎಂದು ಕೊಪ್ಪಳದ ಎಎಫ್‌ಒ ನಾಗರಾಜ ತಿಳಿಸಿದ್ದಾರೆ.
undefined
ಹವಾಮಾನದ ವೈಪರೀತ್ಯದಿಂದ ಹೀಗಾಗುತ್ತಿದೆ. ಕಲುಷಿತಗೊಂಡಿರುವ ಹವಾಮಾನವೇ ಇದಕ್ಕೆ ಕಾರಣವಾಗಿದೆ. ಈ ವರ್ಷ ಅತಿಯಾದ ಮಳೆಯಿಂದ ತಂಪು ಹೆಚ್ಚಾಗಿದ್ದರಿಂದ ಹರಡುವ ಪ್ರಮಾಣ ಅಧಿಕವಾಗಿದೆ ಎಂದು ಕೃಷಿ ವಿವಿ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದ್ದಾರೆ.
undefined
ಈಗಾಗಲೇ ಮರಗಳು ಒಣಗುತ್ತಿರುವುದನ್ನು ತಡೆಯಲು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದೇನೆ. ಪಟ್ಟಣ ಪಂಚಾಯಿತಿಗೂ ಮನವಿ ಮಾಡಿದ್ದೇನೆ. ಇವುಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಭಾಗ್ಯನಗರ ನ್ಯಾಯವಾದಿ ಪರಶುರಾಮ ತಿಳಿಸಿದ್ದಾರೆ.
undefined
ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ರೀತಿ ಬೇವಿನ ಮರಗಳು ಏಕಾಏಕಿ ಒಣಗಬಾರದು. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಲಾಗುವುದು ಎಂದು ಗಂಗಾವತಿ ಕೃಷಿ ವಿಸ್ತರಣಾ ಕೇಂದ್ರದ ಡಾ. ರವಿ ಹೇಳಿದ್ದಾರೆ.
undefined
click me!