ವಿಜಯನಗರ ಕಾಲದಲ್ಲಿ ಅರಸರು ತುಂಗಭದ್ರ ನದಿ ಮೂಲಕ ಕಾಲುವೆಯನ್ನು ನಿರ್ಮಿಸಿ ಹೊಲ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರು. ಅಂದಿನ ಕಾಲದಲ್ಲಿರುವ ಒಟ್ಟು 16 ಕಾಲುವೆ ಶಾಶ್ವತ ದುರಸ್ಥಿಗಾಗಿ 370 ಕೋಟಿ ರುಪಾಯಿ ಅನುದಾನ ಮಂಜೂರಿ ಮಾಡಿದೆ.
ಅದರಲ್ಲಿ ಒಂದಾಗಿರುವ ಸಣ್ಣಾಪುರದಿಂದ ಸಂಗಾಪುರ ಕೆರೆಯವರಿಗೂ ಕಾಲುವೆ ಮೂಲಕ ಸಮಪರ್ಕವಾಗಿ ನೀರು ಪೂರೈಸುವದಕ್ಕಾಗಿ ಕಳೆದ 20 ದಿನಗಳ ಹಿಂದೆ ಕಾಲುವೆ ದುರಸ್ಥಿ ಕಾಮಗಾರಿಯನ್ನು ನೀರಾವರಿ ಇಲಾಖೆಯವರು ಪ್ರಾರಂಭಿಸಿದ್ದರು. ಈಗ ಕಾಲುವೆಗೆ ನೀರು ಬಿಡುವ ಮೊದಲೆ ಮಳೆ ನೀರಿಗೆ ಕೊಚ್ಚಿ ಹೋಗಿದೆ.
ಬಸವನದುರ್ಗಾ ಮತ್ತು ಕೊರಮ್ಮ ಕ್ಯಾಂಪ್ ಬಳಿ ಇರುವ ವಿಜಯನಗರ ಕಾಲುವೆ ದುರಸ್ತಿ ಮಾಡಿದ ಮೂರೇ ದಿನಕ್ಕೆ ಮೂರಾಬಟ್ಟೆಯಾಗಿದೆ.
ಸಣ್ಣಾಪುರದಿಂದ ಸಂಗಾಪುರ ಕೆರೆಯವರಿಗೆ ಒಟ್ಟು 19.4 ಕಿ ಮೀ ಇದ್ದು. ಈ ಕಾಮಗಾರಿಗೆ 25 ಕೋಟಿ ರು. ಅನುದಾನ ನೀಡಿದೆ. ಈಗ ಕೇವಲ 2 ಕೀ ಮೀ ಕಾಮಗಾರಿ ಮಾಡಿದ ಮೂರೇ ದಿನದಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ಉಪ ಕಾಲುವೆ 44.45 ರ ಬಳಿ ಕಾಲುವೆಯ ಒಳಗೆ ಮಾಡಿದ ಸೀಮೆಂಟ್ ಲೈನಿಂಗ್ ಕಿತ್ತಿ ಹೋಗಿದ್ದು, ಕಾಲುವೆಯ ಒಳ ಮೈ ದುರಸ್ತಿ ಕಾರ್ಯ ಕೇವಲ 20 ದಿನಗಳ ಹಿಂದೆ ಪ್ರಾರಂಭ ಮಾಡಿದ್ದರು.
ಕಾಲುವೆಗೆ ನದಿ ನೀರು ಬರುವ ಮುನ್ನ ಮಳೆ ನೀರಿಗೆ ಕೊಚ್ಚಿ ಹೋಗಿದ್ದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಅನುಮಾನ ವ್ಯಕ್ತವಾಗುತ್ತದೆ ಎಂದು ರೈತರು ಅರೋಪಿಸಿದ್ದಾರೆ.
ವಿಜಯನಗರ ಕಾಲುವೆ ದುರಸ್ಥಿ ಕಾರ್ಯ ಮಾರ್ಚ್ ಜೂನ್ ತಿಂಗಳಲ್ಲಿ ಕೈಗೊಳ್ಳಿರಿ ಎಂದು ರೈತರು ಸಲಹೆ ನೀಡಿದ್ದರು ಸಹ ಸರಕಾರದ ಒತ್ತಡದಿಂದ ಜೂನ್ ತಿಂಗಳಲ್ಲಿ ಕಾಮಗಾರಿ ಕೈಗೊಂಡಿದ್ದು, ಇದಕ್ಕೆ ಕಳಪೆ ಕಾಮಗಾರಿ ಮತ್ತು ಮಳೆಯ ನೀರು ಬಂದು ಕೊಚ್ಚಿ ಹೋಗಲು ಕಾರಣವಾಗಿದೆ ಎಂದು ರೈತರ ದೂರು
19.4 ಕೀ ಮಿ ಕಾಮಗಾರಿ 25 ಕೋಟಿ ರುಪಾಯಿ ಖರ್ಚು ಮಾಡುವ ತವಕದಲ್ಲಿ ಕಳಪೆ ಕಾಮಗಾರಿ ನಡೆದಿರ ಬಹುದೆಂದು ರೈತರು ದೂರಿದ್ದು, ಮಳೆ ನೀರಿಗೆ ಹೀಗಾದರೆ ನಾಳೆ ಕಾಲುವಗೆ ನದಿ ಬಂದರೆ ಗತಿ ಏನು ಎಂದು ಪ್ರಶ್ನೆಸಿದ ರೈತರು
ಈಗಾಗಲೇ ರೈತರು ಬತ್ತ ನಾಟಿಗಾಗಿ ಸಸಿ ಮಡಿಗಳನ್ನು ಸಿದ್ದ ಪಡಿಸಿ ನೀರಿಗಾಗಿ ಕಾಯುತ್ತಿದ್ದಾರೆ. ಆದರೆ ಕಾಲುವೆ ಕೊಚ್ಚಿ ಹೋಗಿದ್ದರಿಂದ ಸಮರ್ಪಕ ನೀರು ಪೂರೈಕೆಯಾಗುವದರ ಬಗ್ಗೆ ಅನುಮಾನ ಇದೆ ಎಂದು ರೈತರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾಲುವೆ ದುರಸ್ಥಿ ಸಮಯದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ನಿರ್ಲಕ್ಯ ವಹಿಸಿದ್ದಾರೆ ಎಂದು ರೈತರ ಆರೋಪ