ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಕೆಪಿಕ್ ಸಂಸ್ಥೆಯಿಂದ ಸಮಗ್ರ ಶೀತಲ ಸರಪಳಿ ಘಟಕ ಉದ್ಘಾಟಿಸಿ ಮಾತನಾಡಿದ ಬಿ.ಸಿ.ಪಾಟೀಲ್, ರೈತರ ಬದುಕು ಹಸನಾಗಲು ಹಳೆ ಕೃಷಿ ಪದ್ಧತಿಯಿಂದ ಹೊರಬಂದು ನೂತನ ಕೃಷಿಯಲ್ಲಿರುವ ಅಂಶಗಳನ್ನು ಪಡೆದುಕೊಂಡು ಕೃಷಿ ಮಾಡಬೇಕೆಂದರು.
ತರಕಾರಿ, ಹಣ್ಣು, ಪುಷ್ಪ, ದ್ರಾಕ್ಷಿ, ನಿಂಬೆ, ಮಾವು ಮತ್ತಿತರ ರಫ್ತಿಗೆ ಅನುಕುಲವಾಗುವ ಸಂರಕ್ಷಣಾ ಘಟಕವು 8 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿದೆ. ಕಲಬುರ್ಗಿ, ಬೀದರ್ ಜಿಲ್ಲೆಯಲ್ಲಿ ಪ್ರಥಮ ಸಂಸ್ಕರಣ ಘಟಕ ಆಗಿದ್ದು ಫಸಲು ಬಂದಾಗ ಮಾರುಕಟ್ಟೆದರ ಇಲ್ಲದೆ ರಸ್ತೆಗಳ ಮೇಲೆ ಹಾಕುವುದು ಸೇರಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಶೀತಲ ಘಟಕ ರೈತರಿಗೆ ವರದಾನವಾಗಿ ಪರಿಣಮಿಸಲಿದೆ ಎಂದು ತಿಳಿಸಿದರು.
ಶಾಸಕ ರಾಜಶೇಖರ ಪಾಟೀಲ್ ಮಾತನಾಡಿ, ಬಯಲು ಪ್ರದೇಶವಾಗಿದ್ದು ಮಳೆಯನ್ನೇ ನಂಬಿ ಕೃಷಿ ಮಾಡುವ ಪದ್ಧತಿ ನಮ್ಮಲಿದೆ. ಸೂಕ್ತ ಬೆಂಬಲ ಬೆಲೆ ಸಿಗದಿದ್ದಲ್ಲಿ ರೈತರು ಕಷ್ಟದ ದಿನಗಳನ್ನು ನೋಡಬೇಕಾಗುತ್ತಿದೆ. ಇದಕ್ಕೆ ಪೂರಕವಾಗಿ ತೊಗರಿ ಪ್ರತಿ ಕ್ವಿಂಟಲ್‌ಗೆ 8 ಸಾವಿರ ನಿಗದಿ ಪಡಿಸಬೇಕು. ಅಲ್ಲದೆ ಕಡಲೆ, ಬಿಳಿ ಜೋಳ, ಉದ್ದು, ಹೆಸರು ಸೇರಿದಂತೆ ಮತ್ತಿತರ ಬೆಳೆಗಳಿಗೆ ಗರಿಷ್ಟಬೆಂಬಲ ಬೆಲೆ ನಿಗದಿಪಡಿಸಿ ರೈತರಿಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬಿಎಸ್‌ಎಸ್‌ಕೆ ಕಾರ್ಖಾನೆ ಪ್ರಾರಂಭಿಸಬೇಕು. ಈಗಾಗಲೆ ನಿರ್ಧಾರವಾದಂತೆ ಪ್ರತಿ ಟನ್ ಕಬ್ಬಿಗೆ 2400 ನೀಡಲು ಕಾರ್ಖಾನೆಗಳ ಕ್ರಮವಹಿಸಲು ಸೂಚಿಸಬೇಕು. ಅಲ್ಲದೆ ಸದಾ ದುಡಿಯುವ ರೈತರಿಗೆ ಅನುವು ಮಾಡಿಕೊಡಲು ದಿನದ 24 ಗಂಟೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಪ್ರಗತಿ ಸಾಧಿಸಿ ಹೆಚ್ಚು ಇಳುವರಿ ಪಡೆದ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆಪಿಕ್ ಸಂಸ್ಥೆಯ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ್, ಜಿಪಂ ಅಧ್ಯಕ್ಷ ನಿರ್ಮಲಾ ಮಾನೆಗೊಪಾಳೆ, ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಬಿಜೆಪಿ ಮುಖಂಡರಾದ ಸುಭಾಷ ಕಲ್ಲೂರ, ಸೂರ್ಯಕಾಂತ ನಾಗಮಾರಪಳ್ಳಿ, ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ್, ಉಪಾಧ್ಯಕ್ಷ ಸುಗಂಧ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮರಾವ ಸೇಡೊಳ, ಸದಸ್ಯ ಸುಶೀಲಾಬಾಯಿ ತುಂಬಾ, ಶ್ರಿಮಂತ ಪಾಟೀಲ್, ಚಿಟಗುಪ್ಪ ಅಧ್ಯಕ್ಷ ಮಾಥÜರ್‍ಂಡ, ಕೃಷಿಕ್ ಸಮಾಜ ಅಧ್ಯಕ್ಷ ವಿಶ್ವನಾಥ ಪಾಟೀಲ್, ಗ್ರಾಪಂ ಅಧ್ಯಕ್ಷ ಚೈತ್ರಾಂಜಲಿ, ಪುರಸಭೆ ಅಧ್ಯಕ್ಷ ಕಸ್ತೂರಿ ಉಪಸ್ಥಿತರಿದ್ದರು.