ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಾದನಗೇರಿ, ಬೇಲೆಕೇರಿ, ತದಡಿ, ಹೊಸ್ಕಟಾ, ಅಘನಾಶಿನಿ, ಬಾಡಾ, ಕಾಗಾಲ, ಕುಮಟಾ, ಹೊನ್ನಾವರ ಭಾಗಗಳ ಸಮುದ್ರ ಸಂಗಮ ಹಾಗೂ ಪಾರ್ಮಗಳಲ್ಲಿ ಬೆಳೆಸಿದ ಏಡಿಯು ಮಂಗಳೂರು ಹಾಗೂ ಚೈನೈ ಮೂಲಕ ಸಿಂಗಾಪುರ, ಥೈಲ್ಯಾಂಡ್ ಹಾಗೂ ಮಲೇಶಿಯಾಕ್ಕೆ ವಿಮಾನದಲ್ಲಿ ರಪ್ತು ಮಾಡಲಾಗುತ್ತದೆ.
undefined
ನದಿಗಳು ಸಮುದ್ರ ಪ್ರವೇಶಿಸುವ ಅಳಿವೆ ಬಾಗಿಲು ಮತ್ತು ಹಿನ್ನೀರು ಪ್ರದೇಶದಲ್ಲಿ ಲಭ್ಯವಾಗುವ ಕ್ರ‍್ಯಾಬ್ (ಏಡಿಗಳು) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಅತ್ಯಧಿಕ ಪ್ರೊಟೀನ್‌ವುಳ್ಳ ತಿನ್ನಲು ರುಚಿಕರವಾದ ಈ ಸಿಹಿ ನೀರಿನ ಏಡಿಗಳು ಮುಖ್ಯವಾಗಿ ಆಗ್ನೇಯೇಷ್ಯಾ ದೇಶಗಳಾದ ಸಿಂಗಪುರ, ತೈವಾನ್, ಮಲೇಶಿಯಾ, ಹಾಂಕಾಂಗ್ ಮತ್ತು ಚೀನಾ ಜನತೆಗೆ ಬಲು ಇಷ್ಟದ ತಿನಿಸಾಗಿದೆ.
undefined
ಇಂಗ್ಲಿಷ್‌ನಲ್ಲಿ ಮಡ್ ಕ್ರ‍್ಯಾಬ್’ ಎಂದು ಕರೆಯಲಾಗುವ ಏಡಿಯನ್ನು ಅಂಕೋಲಾದಲ್ಲಿ ಕರಿ ಏಡಿ ಎಂದೂ ಕರೆಯುವುದುಂಟು. ಗಾತ್ರಕ್ಕೆ ಅನುಗುಣವಾಗಿ ಎಕ್ಸೆಲ್ (ಭಾರಿ ಗಾತ್ರ), ಬಿಗ್ (ದೊಡ್ಡ) ಮತ್ತು ಮೀಡಿಯಂ (ಮಧ್ಯಮ) ಎಂದು ವರ್ಗೀಕರಿಸಲಾಗಿದೆ.
undefined
ಏಡಿಯ ಗುಣಮಟ್ಟಕ್ಕೆ ಅನುಗುಣವಾಗಿ ಸಾಮಾನ್ಯ ನಸುಗಪ್ಪು ಮತ್ತು ಕಡುಹಸಿರು ಬಣ್ಣದ ಏಡಿಗಳಿಗೆ ಬೇಡಿಕೆಯಿದೆ. ದೊಡ್ಡ ಗಾತ್ರ ಏಡಿಯೊಂದು ಗರಿಷ್ಟ ಮೂರುವರೆ ಕೆ.ಜಿ. ತೂಗಿದರೆ, ಒಂಬತ್ತು ಇಂಚಿನಷ್ಟು ಅಗಲದ ತನಕವು ಬೆಳೆಯುತ್ತದೆ. ಏಳು ದಿನಗಳವರೆಗೆ ಭೂಮಿಯ ಮೇಲೆನ ಉಸಿರಾಡುವ ಸಾಮರ್ಥ್ಯ ಈ ಏಡಿಗಿದೆ. ಈ ಅವಧಿಯೊಳಗೆ ಏಡಿಗಳು ವಿದೇಶಕ್ಕೆ ಸಾಗಿಸಲಾಗುತ್ತದೆ.
undefined
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ ಒಂದು ಟನ್‌ನಗೂ ಜಾಸ್ತಿ ಏಡಿ ರಫ್ತಾಗುತ್ತಿವೆ. ಏಡಿಗಳನ್ನು ಹಿಡಿದು ಗಾಳಿಯಾಡುವ ಬುಟ್ಟಿಯೊಳಗೆ ಸಜೀವವಾಗಿಯೇ ರಪ್ತು ಮಾಡಲಾಗುತ್ತದೆ. ಇಂತಹ ಸಜೀವ ಏಡಿಗಳಿಗೆ ಮಾತ್ರ ಭಾರಿ ಬೇಡಿಕೆ ಇರುತ್ತದೆ.
undefined
ಏಡಿಗಳ ಶರೀರದ ಯಾವುದೇ ಅಂಗಾಂಗ ಸ್ವಲ್ಪವೂ ಊನವಾಗಿರಬಾರದು. ಏಡಿಗಳು ನಿರ್ಜೀವವಾಗಿದ್ದರೆ ಅಥವಾ ಅಂಗ ಆಕಸ್ಮಿಕವಾಗಿ ತುಂಡಾಗಿದ್ದರೆ ಅವುಗಳ ಬೆಲೆ ಇಳಿಯುತ್ತಾ ಹೋಗುತ್ತದೆ. ಕೆಲವೊಮ್ಮೆ ನಾನಾ ಕಾರಣಕ್ಕೆ ಏಡಿಗಳು ತಿರಸ್ಕೃತವಾಗುವುದೂ ಇದೆ. ಏಡಿಗಳು ತಮ್ಮ ಎರಡು ಕಾಲುಗಳಲ್ಲಿರುವ ಹರಿತ ದವಡೆಗಳಿಂದ ಕಚ್ಚಿ ತುಂಡರಿಸುವ ಮೂಲಕ ಯಾವುದೇ ಬಲೆ, ಸೆರೆಗಳಿಂದ ತಪ್ಪಿಸಿಕೊಳ್ಳುತ್ತವೆ. ಹೀಗಾಗಿ ಪ್ರತಿಯೊಂದು ಏಡಿಯ ಕಾಲುಗಳನ್ನು ಕಟ್ಟಿ ಹಾಕಿಯೇ ರಫ್ತಿಗೆ ಸಿದ್ಧಪಡಿಸಲಾಗುತ್ತದೆ.
undefined
ವಿದೇಶಿಗರ ಬಾಯಲ್ಲಿ ನೀರಿರುಸುವ ಏಡಿಗಳ ಬಲಿಷ್ಠ ಕಾಲುಗಳು ನಾನಾ ವಿಧದ ಸೂಪ್ ತಯಾರಿಕೆಗೂ ಬಳಸಲಾಗುತ್ತದೆ. ಆದರೆ ಇಲ್ಲಿನ ಮೀನುಗಾರರು ನೆರವಾಗಿ ವಿದೇಶಕ್ಕೆ ಈ ಏಡಿ ಮಾಡಿಕೊಳ್ಳಲು ರಪ್ತು ಮಾಡಲು ಪರವಾನಿಯ ತಾಂತ್ರಿಕ ತೊಡಕುಗಳಿವೆ. ಹೀಗಾಗಿ ಏಜೆಂಟರ ಮೂಲಕ ಇಲ್ಲಿನ ಏಡಿಗಳು ಬೆಳೆಗಾರರಿಗೆ ಸೂಕ್ತ ಬೆಲೆಯಿಲ್ಲದೇ ವಿಮಾನ ಏರುತ್ತದೆ.
undefined
ಮಾದನಗೇರಿಯ ಆನಂದು ಹರಿಕಂತ್ರ, ಭೈರವ ಹರಿಕಂತ್ರ ಹಾಗೂ ಮೋಹನ ಹರಿಕಂತ್ರ ಸಹೋದರರು ಕಳೆದ 30 ವರ್ಷದಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಕೊರೋನಾ ಕಾರಣದಿಂದ ಸಂಪೂರ್ಣ ಲಾಕ್‌ಡೌನ್‌ನಿಂದ ವಿಮಾನ ರದ್ದಾಗಿರುವದರಿಂದ ಏಡಿ ಉದ್ಯಮ ಸಂಫುಣ್ ಕುಸಿತ ಕಂಡಿತ್ತು. ಆದರೆ ಈ ವರ್ಷ ಕೊರೋನಾ ಇದ್ದರೂ ವಿಮಾನ ಹಾರಾಟಕ್ಕೆ ಅವಕಾಶವಿರುವದರಿಮದ ಏಡಿಗಳು ಸಹ ವಿದೇಶಗರ ಬಾಯಿ ರುಚಿಸಲು ರಪ್ತಾಗುತ್ತಿದೆ.
undefined
ಅನೇಕ ವರ್ಷಗಳಿಮದ ಇಲ್ಲಿನ ಕ್ರ‍್ಯಾಬ್(ಏಡಿ) ಗಳನ್ನು ವಿದೇಶಕ್ಕೆ ಏಜೆಂಟರ ಮೂಲಕ ರಪ್ತು ಮಾಡಲಾಗುತ್ತದೆ. ಈ ವರ್ಚ ಉತ್ತಮ ಬೆಲೆಯೂ ಕೂಡ ಬಂದಿದೆ ಆದರೂ ಬರು ಬರುತ್ತ ಏಡಿಗಳ ಸಂಖ್ಯೆಯೆ ಕಡಿಮೆಯಾಗುತ್ತಿದೆ ಎಂದು ಮಾದನಗೇರಿಯ ಏಡಿ ಪೂರೈಕೆದಾರ ಭೈರವ ನಾಗಪ್ಪ ಹರಿಕಂತ್ರ ತಿಳಿಸಿದ್ದಾರೆ.
undefined
ಪರಿಸರ ವೈಪರೀತ್ಯ, ಸಮುದ್ರ ಮಾಲಿನ್ಯದ ಪರಿಣಾಮ ಏಡಿಗಳ ಸಂತತಿ ಕ್ಷೀಣಿಸುವಿಕೆಗೆ ಕಾರಣವಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಏಡಿಗಳ ಸಂಖ್ಯೆ ಕಡಿಮೆಯಾಗುತ್ತಿರುವದು ಪ್ರಕೃತಿಯ ಮುನಿಸಿಗೆ ಕಾರಣವಾಗುತ್ತಿರುವದಕ್ಕೆ ಸಾಕ್ಷಿ ಒದಗಿಸಿದೆ.
undefined