ದೇವರ ಪಟ್ಟಾಭಿಷೇಕಕ್ಕೆ 18 ವರ್ಷ: ಗವಿಮಠಕ್ಕೆ ಗತವೈಭವ ಮರುಕಳಿಸಿದ ಶ್ರೀಗಳು

First Published | Dec 13, 2020, 10:30 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.13): ಸಮಾಜಮುಖಿ ಕಾರ್ಯಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕೊಪ್ಪಳ ಗವಿಮಠದ 18ನೇ ಪೀಠಾಧಿಪತಿ ಗವಿಸಿದ್ಧೇಶ್ವರ ಸ್ವಾಮಿಗಳ ಪಟ್ಟಾಭಿಷೇಕವಾಗಿ ಇಂದಿಗೆ ಬರೋಬ್ಬರಿ 18 ವರ್ಷ ಪೂರ್ಣಗೊಂಡು 19ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ.
 

ಶ್ರೀಗಳು ಇದುವರೆಗೂ ಎಂದೂ ತಮ್ಮ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಣೆ ಮಾಡಿಕೊಂಡಿಲ್ಲ. ಅಂದು ಸಹ ಎಂದಿನಂತೆ ವಿಶೇಷ ದಿನವೆಂದು ಪರಿಗಣಿಸದೆ ಕಾಯಕದಲ್ಲಿ ನಿರತರಾಗುತ್ತಾರೆ.
undefined
2002ರ ಡಿ. 13ರಂದು ಕೊಪ್ಪಳ ಸಂಸ್ಥಾನ ಗವಿಮಠದ 18ನೇ ಪೀಠಾಧಿಪತಿಗಳಾಗಿ ಕಲಬುರಗಿ ಜಿಲ್ಲೆಯ ಹಾಗರಗುಂಡಿ ಗ್ರಾಮದ ಪರ್ವತಯ್ಯ ದೇವರ ಪಟ್ಟಾಭಿಷೇಕವಾಯಿತು. ಕೇವಲ 25ನೇ ವಯಸ್ಸಿನಲ್ಲಿಯೇ ಪಟ್ಟಕ್ಕೇರಿದರು. ಕನ್ನಡ, ಸಂಸ್ಕೃತ ಪಂಡಿತ ಸ್ನಾತಕ ಪದವಿಧರರು. ಪದವಿಯಲ್ಲಿ ಕಲಬುರಗಿ ವಿವಿಯ 6ನೇ ರಾರ‍ಯಂಕ್‌ ಪಡೆದ ಹಿರಿಮೆ ಇವರದು. 6ನೇ ತರಗತಿ ಇರುವಾಗಲೇ ಮಠದಲ್ಲಿ ಅಭ್ಯಾಸ ಮಾಡುತ್ತಿರುವಾಗ 17ನೇ ಪೀಠಾಧಿಪತಿಗಳಾಗಿದ್ದ ಶಿವಶಾಂತವೀರ ಸ್ವಾಮಿಗಳ ಕೃಪೆಗೆ ಪಾತ್ರವಾಗಿರುತ್ತಾರೆ. ಅವರ ಲಿಂಗೈಕ್ಯದ ಬಳಿಕ ಇವರಿಗೆ ಪಟ್ಟಕಟ್ಟಲಾಗುತ್ತದೆ.
undefined

Latest Videos


ಪರ್ವತಯ್ಯ ಎಂದಿದ್ದ ಅವರ ಹೆಸರನ್ನು ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಎಂದು ನಾಮಕರಣ ಮಾಡಲಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಮಹಾನ್‌ ಮಠದ ಪಟ್ಟಕ್ಕೇರಿದ ಅವರು ಶ್ರೀಮಠದಲ್ಲಿ ಅಭಿವೃದ್ಧಿಯ ಪರ್ವವನ್ನೇ ಪ್ರಾರಂಭಿಸಿದರು.
undefined
ಗವಿಸಿದ್ಧೇಶ್ವರ ಜಾತ್ರೆಯನ್ನು ವಿಶ್ವಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ. ಅದರಲ್ಲೂ ಲಕ್ಷಾಂತರ ಭಕ್ತರು ಸೇರುವುದು ಅಷ್ಟೇ ಅಲ್ಲ, ಲಕ್ಷಾಂತರ ಭಕ್ತರನ್ನು ಸಮಾಜಮುಖಿ ಕಾರ್ಯಕ್ಕೆ ಅಣಿ ಮಾಡಿದ್ದಾರೆ ಗವಿಸಿದ್ಧೇಶ್ವರ ಸ್ವಾಮಿಗಳು
undefined
ನಿಡಶೇಷಿ, ಕಲ್ಬಾವಿ ಸೇರಿದಂತೆ ಹತ್ತಾರು ಕೆರೆ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳು, ಪಂಜಾಬ್‌ನ ಬಿಯಾಸ್‌ ನದಿಯಂತೆ ಕೊಪ್ಪಳದ ಹಿರೇಹಳ್ಳವನ್ನು ಪುನಶ್ಚೇತನ ಮಾಡಿದ್ದಾರೆ.
undefined
ಅಲ್ಲಿ ಸಾಲು ಸಾಲು ಸರಣಿ ಬ್ಯಾರೇಜ್‌ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ವಿನಾಶದಂಚಿನಲ್ಲಿ ಇದ್ದ ಹಿರೇಹಳ್ಳವನ್ನು ಮತ್ತೆ ನದಿಯಂತೆ ಮಾಡುವ ಯತ್ನ ನಡೆಸಿದ್ದಾರೆ.
undefined
ಇದರಿಂದ ಈಗಾಗಲೇ ಹತ್ತಾರು ಗ್ರಾಮಗಳಲ್ಲಿ ಬರ ನೀಗಿದೆ. ನೀರಿನ ದಾಹ ತೀರಿದೆ. ಅಂತರ್ಜಲ ವೃದ್ಧಿಯಾಗಿದೆ. ಇವರನ್ನು ಜಲಋುಷಿ ಎಂದೇ ಕರೆಯಲಾಗುತ್ತಿದೆ.
undefined
ಇದರ ಜತೆಗೆ ಲಕ್ಷ ಲಕ್ಷ ಸಸಿಗಳನ್ನು ವಿತರಣೆ ಮಾಡುವುದು, ನೆಡುವುದು ಪ್ರತಿವರ್ಷದ ಕಾಯಕವಾಗಿದೆ. ಅನ್ನದಾಸೋಹ ಪರಂಪರೆಯ ಮಠದಲ್ಲಿ ವೃಕ್ಷ ದಾಸೋಹ ಪ್ರಾರಂಭಿಸಿ, ನಿತ್ಯ ನಿರಂತರ ಮಾಡಿದ್ದಾರೆ. ಈ ಮೂಲಕ ನಾಡಿನ ಮಠಗಳ ಪರಂಪರೆಗೆ ಹೊಸ ಭಾಷ್ಯ ಬರೆದಿದ್ದಾರೆ.
undefined
ಸಿದ್ದಗಂಗೆಯ ಬಳಿಕ ಅಧಿಕ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿರುವುದು ಕೊಪ್ಪಳದ ಗವಿಮಠದಲ್ಲಿ. ಸುಮಾರು 2 ಸಾವಿರ ವಿದ್ಯಾರ್ಥಿಗಳು ಮಠದ ಪ್ರಸಾದ ನಿಲಯದಲ್ಲಿದ್ದುಕೊಂಡು ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಕ್ತದಾನ, ಬಾಲ್ಯವಿವಾಹ ತಡೆ, ಕೃಪಾದೃಷ್ಟಿ, ಜಲದೀಕ್ಷೆ ಹಾಗೂ ಲಕ್ಷವೃಕ್ಷೋತ್ಸವ ಎನ್ನುವ ಹಲವು ಕಾರ್ಯಕ್ರಮಗಳನ್ನು ಮಾಡಿ ನಾಡಿನ ಗಮನ ಸೆಳೆದಿದ್ದಾರೆ.
undefined
ಗವಿಸಿದ್ಧೇಶ್ವರ ಸ್ವಾಮಿಗಳು ಪಟ್ಟಾಭಿಷೇಕವಾದ ಮೇಲೆ ಕೊಪ್ಪಳದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಗವಿಮಠ ವಿಶ್ವಪ್ರಸಿದ್ಧಿಯಾಗುತ್ತಿದೆ. ಜಾತ್ರೆಯಂತೂ ಸಮಾಜಮುಖಿಯಾಗುತ್ತಿದೆ. ಅನೇಕ ಜಲಕ್ರಾಂತಿ ಮಾಡುವ ಮೂಲಕ ಜಲಋುಷಿ ಎನಿಸಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್‌.ಎಂ. ಕಂಬಾಳಿಮಠ ತಿಳಿಸಿದ್ದಾರೆ.
undefined
18 ವರ್ಷಗಳಲ್ಲಿಯೇ ನೂರೆಂಟು ಅಭಿವೃದ್ಧಿ ಮಾಡಿದ ಶ್ರೀಗಳು
undefined
ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಅನ್ನದಾಸೋಹದ ಜತೆಗೆ ನಿತ್ಯವೂ ವೃಕ್ಷ ದಾಸೋಹ
undefined
click me!