ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!

First Published | Dec 6, 2019, 12:33 PM IST

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಎನ್‌ಕೌಂಟರ್‌ಗೆ ಬಳಿಯಾಗಿದ್ದಾರೆ. ಇಡೀ ದೇಶವೇ ಹೈದರಾಬಾದ್ ಪೊಲಿಸರ ನಡೆಯನ್ನು ಸಮರ್ಥಿಸಿಕೊಂಡಿದ್ದು, ಎನ್‌ಕೌಂಟರ್‌ ನಡೆಸಿದ ಪೊಲೀಸ್ ತಂಡಕ್ಕೆ ಅಭಿನಂದಿಸಿದ್ದಾರೆ. ದೇಶದ ಮೂಲೆ ಮೂಲೆಯನ್ನೂ ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರೆ, ಹೈದರಾಬಾದ್‌ನಲ್ಲಿ ಪೊಲೀಸರು ಕಾಣಲು ಸಿಕ್ಕಲರಲ್ಲಾ ಹೂವಿನ ಸುರಿಮಳೆಗೈಯ್ಯುತ್ತಿದ್ದಾರೆ. ಹೀಗಿರುವಾಗ ಈ ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡದ ನೇತೃತ್ವ ವಹಿಸಿದ IPS ವಿ. ಸಿ. ಸಜ್ಜನರ್ ಹೆಸರು ಭಾರೀ ಸೌಂಡ್ ಮಾಡುತ್ತಿದೆ. ಇವರೊಬ್ಬ ಕನ್ನಡಿಗ ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ. ಇಲ್ಲಿವೆ ಸಜ್ಜನರ್ ಕುರಿತು ನಿಮಗೆ ತಿಳಿಯದ ಕೆಲ ವಿಚಾರಗಳು

ತೆಲಂಗಾಣದ ಪಶು ವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಬೇರ್ಯಾರು ಅಲ್ಲ, ಕನದ್ನಡ ತಾಯಿಯ ಹೆಮ್ಮೆಯ ಪುತ್ರ.
undefined
ಎನ್ಕೌಂಟರ್ ಪೊಲೀಸ್ ತಂಡದ ನೇತೃತ್ವ ವಹಿಸಿದ್ದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್, ಹುಬ್ಬಳ್ಳಿ ಮೂಲದವರು
undefined

Latest Videos


ತೆಲಂಗಾಣದಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರು ವಾಸಿ.
undefined
ಆ್ಯಸಿಡ್ ದಾಳಿಕೋರರಿಗೂ ಗುಂಡಿಟ್ಟಿದ್ದ ಸಜ್ಜನರ್
undefined
ಕಳೆದ ಒಂದೂವರೆ ವರ್ಷಗಳ ಹಿಂದೆ ಸೈಬರಾಬಾದ್ನಲ್ಲಿ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದ ಸಜ್ಜನರ್
undefined
ಈ ಹಿಂದೆ 2008ರಲ್ಲಿ ಹೈದರಾಬಾದ್‌ ವಾರಂಗಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಸ್ವಪ್ನಿಕಾ ಮತ್ತು ಪ್ರಣೀತಾ ಎಂಬಿಬ್ಬರು ಗೆಳತಿಯರ ಮೇಲೆ ದುಷ್ಕರ್ಮಿಗಳು ನಡೆಸಿದ ಈ ದಾಳಿ ಆಂಧ್ರದಲ್ಲಿ ಭಾರಿ ಸುದ್ದಿ ಮಾಡಿತ್ತು.
undefined
ಇದರಲ್ಲಿ ಸ್ವಪ್ನಿಕಾ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ರು. ಆ್ಯಸಿಡ್ ಎರಚಿದ್ದ ಮೂವರು ಆರೋಪಿಗಳಾದ ಶ್ರೀನಿವಾಸ್ , ಸಂಜಯ್ ಮತ್ತು ಹರಿಕೃಷ್ಣ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ರು. ಈ ವೇಳೆ ಮೂವರಿಗೂ ಮುಲಾಜಿಸಿಲ್ಲದೇ ಗುಂಡು ಹಾರಿಸಿ ಎನ್ ಕೌಂಟರ್ ಮಾಡಿದ್ದೂ ಇದೇ ಸಜ್ಜನರ್ ಟೀಂ.
undefined
ಎನ್‌ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಹುಬ್ಬಳ್ಳಿಯ ಪಗಣಿ ಓಣಿಯವರು.
undefined
ದೆ ಚನ್ನಬಸಪ್ಪ ಬಿ ಸಜ್ಜನ್, ಟ್ಯಾಕ್ಸ್‌ ಕನ್ಸಲ್ಟಂಟ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂರು ಜನ ಮಕ್ಕಳ‌ ಪೈಕಿ ವಿಶ್ವನಾಥ ಸಜ್ಜನರ್ ಕಿರಿಯರು.
undefined
ಇವರ ಹಿರಿಯ ಸಹೋದರ ಡಾ. ಮಲ್ಲಿಕಾರ್ಜುನ ಸಜ್ಜನರ್ ಮಕ್ಕಳ ತಜ್ಞರು‌.
undefined
ವಿಶ್ವನಾಥ ಸಜ್ಜನರ್, ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದರು.
undefined
ಬಳಿಕ ಜೆಜಿ ಕಾಮರ್ಸ್ ಕಾಲೇಜಿನಲ್ಲಿ  ಬಿಕಾಂ ವ್ಯಾಸಂಗ ಪೂರೈಸಿ, ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಕೌಶಾಳಿಯಲ್ಲಿ ಎಂಬಿಎ ವ್ಯಾಸಂಗ ನಡೆಸಿದ್ದಾರೆ.
undefined
1989 MBA ಪದವಿ ಗಳಿಸಿದ ಸಜ್ಜನರ್, 1996 ಯುಪಿಎಸ್ಇ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಬಳಿಕ ಆಂದ್ರ ಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿ.
undefined
ಶುವೈದ್ಯೆ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ರಾಷ್ಟ್ರ ಅದೆಷ್ಟು ಆಕ್ರೋಶಗೊಂಡಿತ್ತು, ಇಂದು ಬೆಳ್ಳಂಬೆಳಗ್ಗೆ ಆರೋಪಿಗಳ ಎನ್ಕೌಂಟರ್ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಇಡೀ ಭಾರತ ಭೇಷ್ ಅಂದಿದೆ.
undefined
ಎನ್‌ಕೌಂಟರ್‌ ಸ್ಪೆಷಲಿಸ್ಟ್ ಎಂಬ ಖ್ಯಾತಿ ಪಡೆದರೂ ತಮ್ಮ ತಂಡದ ಕುರಿತು ಅವರು ಬಹಳ ಕಾಳಜಿ ವಹಿಸುತ್ತಾರೆ. ತನ್ನ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದಾಗ ಖುದ್ದು ತಾವೇ ಅವರ ಮೃತದೇಹಕ್ಕೆ ಹೆಗಲು ಕೊಟ್ಟ ಅಂತಿಮಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
undefined
click me!