ಜಗತ್ತನ್ನು ಬೆಚ್ಚಿಬೀಳಿಸಿದ ಭಾರತದ ರಾಜಕೀಯ ನಾಯಕರ ಹತ್ಯೆಗಳು!

First Published | Sep 2, 2024, 6:56 PM IST

ಈ ಲೇಖನವು ಭಾರತದ ಇತಿಹಾಸದಲ್ಲಿ ನಡೆದ ಪ್ರಮುಖ ರಾಜಕೀಯ ಹತ್ಯೆಗಳ ಬಗ್ಗೆ  ಬೆಳಕು ಚೆಲ್ಲುತ್ತದೆ. 

ಮಹಾತ್ಮಾ ಗಾಂಧಿ (1948)

ಸ್ವತಂತ್ರ ಭಾರತದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹತ್ಯೆಯು ಇಡೀ ದೇಶವನ್ನೇ ನಡುಗಿಸಿತು. ಜನವರಿ 30, 1948 ರಂದು, ನಾಥೂರಾಮ್ ವಿನಾಯಕ ಗೋಡ್ಸೆ ಅವರನ್ನು ಗುಂಡಿಕ್ಕಿ ಕೊಂದನು. ಆ ಸಮಯದಲ್ಲಿ ಗಾಂಧೀಜಿ ಭಾರತದಲ್ಲಿ ಕೋಮು ಹಿಂಸಾಚಾರವನ್ನು ನಿಲ್ಲಿಸಲು ಉಪವಾಸ ಮಾಡುತ್ತಿದ್ದರು. ಗಾಂಧಿಯವರ ನೀತಿಗಳು ಮತ್ತು ವಿಚಾರಗಳನ್ನು ವಿರೋಧಿಸಿದ ಗೋಡ್ಸೆ ಅವರನ್ನು ಗುಂಡಿಕ್ಕಿ ಕೊಂದನು. ನಾಥುರಾಮ್ ಗೋಡ್ಸೆ ಮಹಾರಾಷ್ಟ್ರದ ಹಿಂದೂ ರಾಷ್ಟ್ರೀಯವಾದಿ. 1942ರಲ್ಲಿ ನಂತರ ಗಾಂಧಿ ಕುರಿತ ಗೋಡ್ಸೆಯವರ ಅಭಿಪ್ರಾಯ ಬದಲಾಗಿತ್ತು. ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿ ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆ ಎಂಬ ಆಭಿಪ್ರಾಯಗಳು ಗೋಡ್ಸೆಯಲ್ಲಿ ಮೂಡಲಾರಂಭಿಸಿದವು. ಗೋಡ್ಸೆಯವರನ್ನು ಅಂಬಾಲಾ ಸೆಂಟ್ರಲ್ ಜೈಲಿನಲ್ಲಿ 1949ರ ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು.

ಇಂದಿರಾ ಗಾಂಧಿ (1984)

ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅಕ್ಟೋಬರ್ 31, 1984 ರಂದು ಹತ್ಯೆ ಮಾಡಲಾಯಿತು. ಶ್ರೀಮತಿ ಗಾಂಧಿಯವರ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದರು. ವಾಸ್ತವವಾಗಿ, ಸಿಖ್ ಸಮುದಾಯವು ಆಪರೇಷನ್ ಬ್ಲೂ ಸ್ಟಾರ್‌ನಿಂದ ಕೋಪಗೊಂಡಿತ್ತು. ಪವಿತ್ರ ದೇವಾಲಯದಿಂದ ಉಗ್ರರನ್ನು ಹೊರ ಹಾಕಲು ನಡೆಸಿದ ಮಿಲಿಟರಿ ಕಾರ್ಯಾಚರಣೆಯಿಂದ ಪವಿತ್ರ ದೇವಾಲಯಕ್ಕೆ ಹೆಚ್ಚಿನ ಹಾನಿಯಾಗಿತ್ತು ಮತ್ತು ಸಿಖ್ ಸಮುದಾಯವು ಇದರಿಂದ ತೀವ್ರವಾಗಿ ಕೋಪಗೊಂಡಿತ್ತು. ಈ ಹತ್ಯೆಯ ನಂತರ ದೇಶದಲ್ಲಿ ಗಲಭೆಗಳು ಭುಗಿಲೆದ್ದವು ಮತ್ತು ನೂರಾರು ಸಿಖ್ಖರನ್ನು ಹತ್ಯೆ ಮಾಡಲಾಯಿತು.

Tap to resize

ರಾಜೀವ್ ಗಾಂಧಿ (1991)

ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಯಿತು. ರಾಜೀವ್ ಅವರನ್ನು ಮೇ 21, 1991 ರಂದು ತಮಿಳುನಾಡಿನ  ಶ್ರೀಪೆರಂಬದೂರ್ ನಲ್ಲಿ ಹತ್ಯೆ ಮಾಡಲಾಯಿತು. ಅವರು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಮಾಲೆ ಹಾಕುವ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿಕೋರ ಧನು ಎಂಬಾಕೆ ತನ್ನನ್ನು ತಾನೇ ಸ್ಫೋಟಿಸಿಕೊಂಡಳು. ಇದು ದೊಡ್ಡ ಸ್ಫೋಟವಾಗಿತ್ತು. ಧನು ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ನ ಸದಸ್ಯರಾಗಿದ್ದರು. ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ, ರಾಜೀವ್ ಗಾಂಧಿ ಭಾರತೀಯ ಶಾಂತಿ ರಕ್ಷಣಾ ಪಡೆಯನ್ನು ಕಳುಹಿಸಿದ್ದರಿಂದ ಕೋಪಗೊಂಡಿತ್ತು. ಇದಕ್ಕೆ ಹತ್ಯೆ ಮಾಡಿ ಕೋಪ ತೀರಿಸಿಕೊಂಡಿತು.

ದೀನದಯಾಳ್ ಉಪಾಧ್ಯಾಯ (1968)

ಭಾರತೀಯ ಜನಸಂಘದ ಪ್ರಮುಖ ನಾಯಕ ದೀನದಯಾಳ್ ಉಪಾಧ್ಯಾಯ ಅವರು ಬಲಪಂಥೀಯ ಚಿಂತಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಅವರ ಶವ ನಿಗೂಢವಾಗಿ ಪತ್ತೆಯಾಯಿತು. ಉಪಾಧ್ಯಾಯರು 10 ಫೆಬ್ರುವರಿ 1968 ರಂದು ಲಕ್ನೋನಿಂದ ಪಾಟ್ನಾಗೆ ತೆರಳಲು ಸಿಯಾಲ್ದಾ ಎಕ್ಸ್ಪ್ರೆಸ್ ರೈಲನ್ನು ಹತ್ತಿದರು. 11 ಫೆಬ್ರವರಿ 1968 ರ ಮುಂಜಾವಿನ 2.10ರ ಹೊತ್ತಿಗೆ, ಮೊಘಲ್‌ಸಾರಾಯ್ ರೈಲ್ವೆ ನಿಲ್ದಾಣವನ್ನು ರೈಲು ತಲುಪಿದಾಗ ದೀನ್ ದಯಾಳರು ಪತ್ತೆಯಾಗಲಿಲ್ಲ. ಬಳಿಕ ಅವರ ಶವ ಮುಘಲ್ಸರಾಯ್ ರೈಲು ನಿಲ್ದಾಣದ ಬಳಿ ರೈಲು ಹಳಿಯಲ್ಲಿ ಪತ್ತೆಯಾಯಿತು. ಕೇಂದ್ರೀಯ ತನಿಖಾ ದಳದ ತನಿಖೆಯ ಪ್ರಕಾರ, ಡಕಾಯಿತರ ತಂಡವೊಂದು ದೀನ್ ದಯಾಳರ ಮೇಲೆ ಆಕ್ರಮಣವನ್ನು ಮಾಡಿ ಅವರನ್ನು ರೈಲಿನಿಂದ ಕೆಳ ತಳ್ಳಿತು. ಕೇಂದ್ರೀಯ ತನಿಖಾ ದಳವು ಭರತ್ ಲಾಲ್ ಮತ್ತು ರಾಮ್ ಅವಧ್ ಎನ್ನುವ ಇಬ್ಬರನ್ನು ಬಂಧಿಸಿತು, ಆದರೆ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಅವರನ್ನು ಬಿಡುಗಡೆ ಮಾಡಲಾಯ್ತು.

Latest Videos

click me!