ಬಡವರಿಗೆ ಉಚಿತ ಔಷಧ ಕೊಡುತ್ತೆ ಈ ವೈದ್ಯ ದಂಪತಿ, ಐಡಿಯಾ ಕೇಳಿದ್ರೆ ಭೇಷ್ ಅಂತೀರಾ!

First Published May 19, 2021, 8:47 PM IST

ಕೊರೋನಾದ ಎರಡನೇ ಅಲೆ ಇಡೀ ದೇಶವನ್ನನೇ ನಡುಗಿಸಿದೆ. ಆದರೆ ಭೂಮಿ ಮೇಲಿನ ದೇವರು ಎಂದೇ ಹೇಳಲಾಗುವ ವೈದ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ರೋಗಿಗಳನ್ನು ಗುಣಪಡಿಸಲು ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಮುಂಬೈನ ವೈದ್ಯ ದಂಪತಿಯೊಂದು ವಿಭಿನ್ನವಾಗಿ ಜನರ ಪ್ರಾಣ ಉಳಿಸಲು ಯತ್ನಿಸುತ್ತಿದ್ದಾರೆ. ಹೌದು ಸದ್ಯ ಅವರ ಕಾರ್ಯ ವೈಖರಿಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

ಹೌದು ಇದೇ ವೈದ್ಯ ದಂಪತಿ ಕೊರೋನಾದಿಂದ ಗುಣಮುಖರಾದವರಿಂದ ಔಷಧ ಸಂಗ್ರಹಿಸುತ್ತಿದ್ದಾರೆ. ಇದಾದ ಬಳಿಕ ಅವರು ಈ ಮೆಡಿಸಿನ್‌ಗಳನ್ನು ಅಗತ್ಯವಿರುವವರಿಗೆ ವಿತರಿಸುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಆದಿವಾಸಿ ಹಾಗೂ ಗ್ರಾಮೀಣ ಪ್ರದೇಶಕ್ಕೆ ಕಳುಹಿಸಿಕೊಡುತ್ತಾರೆ. ಯಾಕಂದ್ರೆ ವೇಗವಾಗಿ ಹರಡುತ್ತಿರುವ ಸೋಂಕಿನಿಂದಾಗಿ ಔಷಧಗಳ ಕೊರತೆ ಅಪಾರ ಪ್ರಮಾಣದಲ್ಲಿ ಎದುರಾಗಿದೆ. ಯಾವ ಮೆಡಿಕಲ್ ಸ್ಟೋರ್‌ಗೆ ಹೋದರೂ ಜನಸಂದಣಿ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಕೊರೋನಾ ಸೋಂಕು ತಗುಲಿದ ಕುಟುಂಬಗಳೂ ಇವೆ. ಹೀಗಿರುವಾಗ ಈ ಕುಟುಮಬ ಸದಸ್ಯರಿಗೆ ಹೊರಗೆ ಓಡಾಡಲೂ ಆಗದ ಪರಿಸ್ಥಿತಿ. ಇಂತಹ ಕುಟುಂಬಗಳಿಗೆ ಈ ವೈದ್ಯದಂಪತಿ ಆಪತ್ಭಾಂದವರಾಗಿದ್ದಾರೆ.
undefined
ಇನ್ನು ಈ ಸಂಕಷ್ಟದ ಸಮಯದಲ್ಲಿ ಇಂತಹ ಸತ್ಕಾರ್ಯ ಮಾಡುತ್ತಿರುವ ವೈದ್ಯರ ಹೆಸರು ಡಾ. ಮಾರ್ಕಸ್‌ ರೈನೆ ಹಾಗೂ ಅವರ ಪತ್ನಿ ಡಾ. ರೈನಾ ಆಗಿದ್ದಾರೆ. ಮುಂಬಬೈನ ಪರೇಡ್‌ ನಿವಾಸಿಗಳಾದ ಈ ವೈದ್ಯ ದಂಪತಿ, ನಿರುಪಯುಕ್ತ ಔಷಧವನ್ನು ಸಂಗ್ರಹಿಸುವ ಕೆಲಸ ಆರಂಭಿಸಿದ್ದು ಮೇ 1 ರಿಂದ. ಈ ಕಾರ್ಯ ಆರಂಭಿಸಿದ ಕೇವಲ ಹತ್ತು ದಿನಗಳಲ್ಲೇ ಬರೋಬ್ಬರಿ 20 ಕಿಲೋ ಔಷಧ ಸಂಗ್ರಹಿಸುವಲ್ಲಿ ಸಫಲರಾಗಿದ್ದಾರೆ. ರೈನೆ ದಂಪತಿಯ ಈ ಸತ್ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಶ್ಲಾಘನೆ ವ್ಯಕ್ತವಾಗಿದೆ. ಹೀಗಾಗಿ ಇವರನ್ನು ಔಷಧಿಗಳ ರಾಬಿನ್‌ ಹುಡ್‌ ಎಂದೂ ಕರೆಯಲಾರಂಭಿಸಿದ್ದಾರೆ.

ಡಾಕ್ಟರ್ ಪತ್ನಿ ಡಾ. ರೈನಾ ಈ ಬಗ್ಗೆ ಮಾತನಾಡುತ್ತಾ ತನ್ನ ಆಸುಪಾಸಿನಲ್ಲಿ ಔಷಧಿ ಖರೀದಿಸಲು ಸಾಧ್ಯವಾಗದವರನ್ನೂ ನೋಡಿದ್ದೇನೆ . ಕೆಲಸವಿಲ್ಲದ ಕಾರಣ ಜನರಿಗೆ ಔಷಧಿ ಖರೀದಿಸಲೂ ಹಣವಿಲ್ಲದೇ ಕಷ್ಟವಾಗುತ್ತಿದೆ. ಇದೇ ಕಾರಣದಿಂದ ನಾವು ಬಡವರಿಗೆ ಉಚಿತವಾಗಿ ಔಷಧಿ ನೀಡುವ ಆಪರೇಷನ್ ಆರಂಭಿಸಿದೆವು ಎಂದಿದ್ದಾರೆ. ಆರಂಭದಲ್ಲಿ ಕೊಂಚ ಕಷ್ಟವಾಯ್ತಾದರೂ, ಸದ್ಯ ಜನರೇ ಈ ಬಗ್ಗೆ ತಿಳಿದು ಕರೆ ಮಾಡಿ ಔಷಧಿ ನೀಡಲು ಕರೆಯುತ್ತಾರಂತೆ.
undefined
ಇನ್ನು ಈ ದಂಪತಿ ಒಗ್ಗೂಡಿಸಿದ ಔಷಧಿ ವೈದ್ಯರು ಸೂಚಿಸಿದ ಫೆಬಿಫ್ಲೂ, ನೋವಿನ ಮಾತ್ರೆ, ಆಂಟಿಬಯೋಟಿಕ್, ಇನ್‌ಹೇಲರ್ ಹಾಗೂ ವಿಟಮಿನ್ ಮಾತ್ರೆಗಳನ್ನು ಒಗ್ಗೂಡಿಸಿದ್ದಾರೆ. ಇದನ್ನು ಹೊರತುಪಡಿಸಿ ಪಲ್ಸ್ ಆಕ್ಸಿಮೀಟರ್ ಹಾಗೂ ಥರ್ಮೋಮೀಟರ್ ಕೂಡಾ ಒಗ್ಗೂಡಿಸಿದ್ದಾರೆ. ತಾನು ಎಲ್ಲಕ್ಕಿಂತ ಮೊದಲು ಈ ಔಷಧಿಗಳ ಎಕ್ಸ್‌ಪಾಯರಿ ಡೇಟ್‌ ನೋಡುತ್ತೇನೆ. ಅವದಿ ಮೀರಿದ ಔಷಧಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಚೆನ್ನಾಗಿರುವ ಮಾತ್ರೆಗಳನ್ನು ಬೇರ್ಪಡಿಸಿ ಬೇರೆ ಬೇರೆ ಬಾಕ್ಸ್‌ಗಳಲ್ಲಿ ಹಾಕಿ ಪ್ಯಾಕ್ ಮಾಡುತ್ತಾರೆ. ತಾವು ಒಗ್ಗೂಡಿಸಿದ ಔಷಧಿಯ ಮೊದಲ ಕನ್ಸೈನ್‌ಮೆಂಟ್‌ ತಯಾರಿದೆ. ಶೀಘ್ರದಲ್ಲೇ ಇದನ್ನು ಗುಜರಾತ್‌ನ ಆದಿವಾಸಿ ಪ್ರದೇಶಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದಿದ್ದಾರೆ ಡಾ. ರೈನಾ.
undefined
click me!