ಶಿಕ್ಷಕ, ಪತ್ರಕರ್ತ, ರಾಜಕೀಯ ನಾಯಕ: ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ಮಾಹಿತಿ!
First Published | Aug 31, 2020, 6:48 PM ISTಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಸತತ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದವರು. ಪ್ರಾಧ್ಯಾಪಕ, ಪತ್ರಕರ್ತ, ರಾಜಕೀಯ ನಾಯಕ ಮುಂದೆ ರಾಷ್ಟ್ರಪತಿ ಹೀಗೆ ಪ್ರಣಬ್ ಮುಖರ್ಜಿಯೊಬ್ಬ ಬಹುಮುಖ ಪ್ರತಿಭೆಯಾಗಿದ್ದರು. ಕೇಂದ್ರ ಸಚಿವರಾಗಿದ್ದಾಗಲೂ ಪ್ರಮುಖ ಖಾತೆ ನಿಭಾಯಿಸಿದ್ದರು. ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಮುಖರ್ಜಿಯವರದ್ದು. ಇಲ್ಲಿದೆ ನೋಡಿ ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ವಿಚಾರಗಳು