ವರ್ಕೌಟ್ ನಂತ್ರ ತುಂಬಾ ತಲೆನೋವು ಆಗುತ್ತಾ? ಇದಾಗಿರಬಹುದು ಕಾರಣ!

First Published | Dec 13, 2022, 3:03 PM IST

ಭಾರಿ ವ್ಯಾಯಾಮದ ನಂತರ ತಲೆನೋವಿನ ಸಮಸ್ಯೆ ನಿಮಗೂ ಕಾಡಿರಬಹುದು ಅಲ್ವಾ? ಇದು ಯಾಕೆ ಸಂಭವಿಸುತ್ತೆ ಗೊತ್ತಾ? ಮೈಗ್ರೇನ್ ಮತ್ತು ಒತ್ತಡದಿಂದ ಅತಿಯಾದ ತಲೆನೋವು ಉಂಟಾಗಬಹುದು. ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ, ವ್ಯಾಯಾಮದ ಬಳಿಕ ಉಂಟಾಗುವ ತಲೆನೋವಿನಿಂದ ಪರಿಹಾರ ಪಡೆಯಬಹುದು.

ಹೆಚ್ಚಿನ ಜನರು ಫಿಟ್ ಮತ್ತು ಆರೋಗ್ಯಕರವಾಗಿರಲು ವರ್ಕೌಟ್ (workout) ಮಾಡುತ್ತಾರೆ. ವಿಶೇಷವಾಗಿ ಯುವ ಪೀಳಿಗೆ ಜಿಮ್‌ನಲ್ಲಿ ಗಂಟೆಗಳ ಕಾಲ ಬೆವರಲು ಇಷ್ಟಪಡುತ್ತದೆ. ಆದರೆ ಸಿಕ್ಕಾಪಟ್ಟೆ ತಾಲೀಮು ಸೆಷನ್ ನಂತರ ನೀವು ಎಂದಾದರೂ ತಲೆನೋವನ್ನು ಅನುಭವಿಸಿದ್ದೀರಾ? ಹಾಗಿದ್ದರೆ, ಈ ಸ್ಥಿತಿಯು ನಿಮಗೆ ಹಾನಿಯಾಗಬಹುದು. ಇದು ಯಾಕೆ ಆಗುತ್ತೆ ಅನ್ನೋದನ್ನು ನೀವು ತಿಳಿದುಕೊಂಡರೆ ಸಮಸ್ಯೆಯನ್ನು ಪರಿಹರಿಸೋದು ಸುಲಭ.

ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ವ್ಯಾಯಾಮ ಬಹಳ ಮುಖ್ಯ. ಆದಾಗ್ಯೂ, ಕೆಲವು ಜನರು ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ನಂತರವೇ ತಲೆನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ. ಕೆಲವು ಕಾರಣಗಳು ಮತ್ತು ತಪ್ಪುಗಳಿಂದಾಗಿ, ಅಂತಹ ಪರಿಸ್ಥಿತಿ ಉದ್ಭವಿಸಬಹುದು, ಇದನ್ನು ತಪ್ಪಿಸಬಹುದು ಮತ್ತು ನಿಮ್ಮ ವ್ಯಾಯಾಮದ ದಿನಚರಿಯಲ್ಲಿನ ಈ ಅಡೆತಡೆಯನ್ನು ತೆಗೆದು ಹಾಕಬಹುದು.

Tap to resize

ಹೆವಿ ವ್ಯಾಯಾಮ ಮಾಡಿದಾಗ

ನೀವು ಬೆಳಗ್ಗಿನ ಹೊತ್ತು ತುಂಬಾನೆ ಓಡಿದ್ದರೆ, ಹೆವಿ ವ್ಯಾಯಾಮಗಳನ್ನು (Heavy Workout)  ಮಾಡಿದ್ದರೆ ಅದರ ನಂತರ ತಲೆನೋವಿನ ಸಮಸ್ಯೆ ಕಾಡಬಹುದು. ಅದರ ಜೊತೆಗೆ, ಮೈಗ್ರೇನ್ ಮತ್ತು ಒತ್ತಡದಿಂದ ಅತಿ ತಲೆನೋವು ಬರಬಹುದು. ಈ ನೋವು 5 ನಿಮಿಷಗಳಿಂದ 48 ನಿಮಿಷಗಳವರೆಗೆ ಇರುತ್ತದೆ. 

ರಕ್ತ ಪರಿಚಲನೆ ಕಡಿಮೆ

ಈ ರೀತಿಯಾಗಿ ತಲೆನೋವು ಉಂಟಾಗಲು ಕಾರಣ ರಕ್ತ ಪರಿಚಲನೆ. ಹೌದು, ವ್ಯಾಯಾಮದ ಸಮಯದಲ್ಲಿ, ದೇಹವು ಅದರಲ್ಲಿ ಮುಖ್ಯವಾಗಿ ತಲೆ ಸರಿಯಾದ ರಕ್ತ ಸಂಚಾರ ಪಡೆಯದ ಕಾರಣ ಮೆದುಳು ಈ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದರಿಂದ ಕೆಲವು ನಿಮಿಷಗಳ ಕಾಲ ವಿಪರೀತ ತಲೆನೋವು ಉಂಟಾಗುತ್ತೆ.

ಹೈಡ್ರೇಟ್ ಆಗಿರದೇ ಇರೋದು

ನಿಮ್ಮನ್ನು ನೀವು ಸಾಧ್ಯವಾದಷ್ಟು ಹೈಡ್ರೇಟ್ (Hydrate) ಆಗಿರಿಸಿಕೊಳ್ಳಿ. ದೇಹ ಹೈಡ್ರೇಟ್ ಆಗಿಸುವ ಮೂಲಕ, ಆಮ್ಲಜನಕವು ಸರಿಯಾದ ರೀತಿಯಲ್ಲಿ ನಮ್ಮ ಮೆದುಳನ್ನು ತಲುಪುತ್ತದೆ. ವ್ಯಾಯಾಮದ ಸಮಯದಲ್ಲಿಯೂ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ವ್ಯಾಯಾಮ ಮಾಡುವಾಗ ದೇಹದಿಂದ ಸಾಕಷ್ಟು ನೀರು ಬೆವರಿನ ರೂಪದಲ್ಲಿ ಬಿಡುಗಡೆಯಾಗುತ್ತದೆ, ಆದ್ದರಿಂದ ನಿರ್ಜಲೀಕರಣದ ಸಾಧ್ಯತೆಗಳು ಹೆಚ್ಚಾಗುತ್ತವೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ, ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಸಲಾಗುವುದಿಲ್ಲ. ಇದರಿಂದ ತಲೆನೋವು ಆರಂಭವಾಗುತ್ತೆ.

ಹೆಚ್ಚು ಹೆಚ್ಚು ವರ್ಕೌಟ್ ಮಾಡೋದು

ನಾವು ಸಾಕಷ್ಟು ವ್ಯಾಯಾಮ ಮಾಡುವಾಗ, ಆಮ್ಲಜನಕದ ಹರಿವನ್ನು ನಿರ್ವಹಿಸಲು ತಲೆ ಮತ್ತು ಗಂಟಲಿನ ಸ್ನಾಯುಗಳಿಗೆ ಹೆಚ್ಚಿನ ರಕ್ತದ ಅಗತ್ಯವಿರುತ್ತೆ. ಈ ಕಾರಣದಿಂದಾಗಿ, ರಕ್ತನಾಳಗಳು ಹಿಗ್ಗುತ್ತವೆ ಮತ್ತು ಅವು ಅಗಲವಾಗುತ್ತವೆ. ಹೀಗಾದಾಗ ತಲೆನೋವು ಕಾಡಬಹುದು. ಸರಳವಾಗಿ ಹೇಳುವುದಾದರೆ, ಹೆಚ್ಚು ಅಥವಾ ಭಾರವಾದ ವ್ಯಾಯಾಮ ಮಾಡುವುದು ತಲೆನೋವಿಗೆ ಕಾರಣವಾಗಬಹುದು, ಆದ್ದರಿಂದ ನಿಮಗಾಗಿ ವ್ಯಾಯಾಮದ ಸಮಯವನ್ನು ಹೊಂದಿಸಿ.

ನಿದ್ರೆಯ ಕೊರತೆ

ಸಾಕಷ್ಟು ನಿದ್ರೆ ಪಡೆಯದಿರುವುದರಿಂದ (Less Sleep) ಹೆಚ್ಚು ವ್ಯಾಯಾಮ ಮಾಡಿದಾಗ ನಿಮಗೆ ಬೇಗ ಆಯಾಸಗೊಳ್ಳುವುದರ ಜೊತೆಗೆ ತಲೆನೋವನ್ನು ನೀಡುತ್ತದೆ. ನೀವು ಪ್ರತಿದಿನ ಜಿಮ್ಮಿಗೆ ಹೋದರೆ ಅಥವಾ ವ್ಯಾಯಾಮ ಮಾಡಿದರೆ ನಿಮ್ಮ ನಿದ್ರೆಯ ಸಮಯವು ಸರಿಯಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಮಾಡದೇ ಇದ್ದರೆ ಸಮಸ್ಯೆ ಹೆಚ್ಚುತ್ತದೆ.

ಬಿಸಿಲಿನಲ್ಲಿ ವರ್ಕೌಟ್ ಮಾಡುವುದು

ಪ್ರಕಾಶಮಾನವಾದ ಬಿಸಿಲಿನಲ್ಲಿ ವ್ಯಾಯಾಮ (workout under sunlight)  ಮಾಡುವುದರಿಂದ ಮೆದುಳಿನ ಮೇಲೆ ಸೂರ್ಯನ ಶಾಖ ಹೆಚ್ಚಿನ ಪರಿಣಾಮ ಬೀರುತ್ತೆ, ಇದು ತಲೆನೋವು ಮತ್ತು ತಲೆಬಾರದ ಸಮಸ್ಯೆ ಹೆಚ್ಚಿಸುತ್ತದೆ. ಬಲವಾದ ಸೂರ್ಯನ ಬೆಳಕಿನಲ್ಲಿ ದೇಹದಿಂದ ಬೆವರುವುದು ಸಹ ನಿಮಗೆ ಹಾನಿ ಮಾಡಬಹುದು. ಇದು ನಿರ್ಜಲೀಕರಣ ಮತ್ತು ತಲೆಯಲ್ಲಿ ನಿರಂತರ ನೋವಿಗೆ ಕಾರಣವಾಗಬಹುದು.

ವ್ಯಾಯಾಮದ ನಂತರದ ತಲೆನೋವು ಕಡಿಮೆ ಮಾಡಲು ಏನು ಮಾಡೋದು?

ಸೀಮಿತ ಸಮಯದವರೆಗೆ ವರ್ಕೌಟ್ ಮಾಡಿ.
ವ್ಯಾಯಾಮ ಮಾಡುವಾಗ ಉಸಿರಾಟವನ್ನು ನಿಲ್ಲಿಸುವ ಬದಲು ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದು ತಲೆನೋವಿಗೆ ಕಾರಣವಾಗುವುದಿಲ್ಲ.
ನೀವು ಬಿಸಿ ತಾಪಮಾನ ಅಥವಾ ಬಿಸಿ ಹವಾಮಾನದಲ್ಲಿ ವ್ಯಾಯಾಮ ಮಾಡುತ್ತಿದ್ದರೆ, ಬಟ್ಟೆಯನ್ನು ತಣ್ಣೀರಿನಲ್ಲಿ ನೆನೆಸಿ ಮತ್ತು ಸ್ವಲ್ಪ ಸಮಯದ ನಂತರ ಹಣೆಯನ್ನು ಒರೆಸಿ.

Latest Videos

click me!