ಶರೀರದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳ ಸೋಂಕು ಹರಡಿದಾಗಲೂ ಕೂಡ ವೈದ್ಯರು ನೀರಿನ ಸೇವನೆ ಹೆಚ್ಚಿಸುವಂತೆ ಸಲಹೆ ನೀಡುತ್ತಾರೆ. ಆದರೆ, ನೀರು ಕುಡಿಯುವುದಕ್ಕೂ ಸರಿಯಾದ ಹಾಗೂ ತಪ್ಪಾದ ವಿಧಾನಗಳಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕುರಿತು ಮನೆಯ ಹಿರಿಯರು ಹೇಳುವ ಮಾತನ್ನು ಹಲವು ಬಾರಿ ಕೇಳಿರಬಹುದು. ಇಲ್ಲಿ ನೀಡಲಾಗಿರುವ ಕೆಲ ಸಲಹೆಗಳು ಲಾಭ ನೀಡಲಿವೆ.
undefined
ಕೆಳಗೆ ಕುಳಿತು ನೀರನ್ನು ಕುಡಿಯಿರಿ :ಈ ಕುರಿತು ಇದುವರೆಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಆದರೆ ಆಯುರ್ವೇದದ ಪ್ರಕಾರ ನಿಂತು ನೀರು ಕುಡಿಯುವುದರಿಂದ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
undefined
ನಿಂತು ನೀರನ್ನು ಕುಡಿಯುವಾಗ ದೇಹದಲ್ಲಿನ ದ್ರವದ ಸಮತೋಲನ ಹದಗೆಡುತ್ತದೆ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿ ಕೀಲುನೋವಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೂ ಕೂಡ, ವೈದ್ಯರು ಈ ವಾದವನ್ನು ಒಪ್ಪುವುದಿಲ್ಲ.
undefined
ಗ್ಲಾಸ್ ಮೂಲಕ ನೀರನ್ನು ಸೇವಿಸಿ :ಆಗಾಗ್ಗೆ ಜನರು ಬಾಟಲಿಯಿಂದ ನೇರವಾಗಿ ನೀರನ್ನು ಕುಡಿಯುತ್ತಾರೆ. ಮನೆಯ ಹಿರಿಯರು ಸಹ ಈ ಬಗ್ಗೆ ಎಚ್ಚರಿಕೆ ಕೂಡ ನೀಡುತ್ತಾರೆ. ಆದರೆ ಅವರ ಸಲಹೆಯ ಕಡೆಗೆ ಯಾರೂ ಗಮನ ಕೊಡುವುದಿಲ್ಲ.
undefined
ಬಾಟಲಿಯಿಂದ ನೀರು ಕುಡಿಯುವುದು ಸರಿಯಲ್ಲ. ಯಾವಾಗಲೂ ಗ್ಲಾಸ್ ನಲ್ಲಿ ನೀರನ್ನು ಸುರಿದು ಗುಟುಕಿನ ಪದ್ಧತಿಯಲ್ಲಿ ನೀರನ್ನು ಕುಡಿಯಬೇಕು.
undefined
ಗ್ಲಾಸ್ ನಲ್ಲಿ ನೀರು ಕುಡಿಯಲು ಒಂದು ಕಾರಣವೆಂದರೆ, ನಾವು ಬಾಟಲಿಯಿಂದ ನೇರವಾಗಿ ನೀರನ್ನು ಕುಡಿಯುವಾಗ, ಒಂದು ಅಥವಾ ಎರಡು ಸಿಪ್ಗಳಲ್ಲಿ ಗಂಟಲು ತೇವಗೊಳ್ಳುತ್ತದೆ ಮತ್ತು ನಾವು ಕಡಿಮೆ ನೀರು ಕುಡಿಯುತ್ತೇವೆ.
undefined
ಗ್ಲಾಸ್ ನಲ್ಲಿ ನೀರನ್ನು ಕುಡಿಯುತ್ತಿದ್ದರೆ, ಸಂಪೂರ್ಣ ಗ್ಲಾಸ್ ಅನ್ನು ಮುಗಿಸುವ ಕಾರಣ ಹೆಚ್ಚು ನೀರು ದೇಹವನ್ನು ತಲುಪುತ್ತದೆ.
undefined
ಒಂದು ಸಣ್ಣ ಸಿಪ್ ನೀರನ್ನು ತೆಗೆದುಕೊಂಡು ಅದನ್ನು ನುಂಗಿ ನಂತರ ಉಸಿರಾಡಿ. ಆಯುರ್ವೇದದಲ್ಲಿ, ನೀರನ್ನು ಕುಡಿಯಲು ಇದು ಸರಿಯಾದ ಮಾರ್ಗವೆಂದು ಸೂಚಿಸಲಾಗಿದೆ.
undefined
ಅತಿ ತಂಪಾದ ನೀರು ಸೇವನೆ ಉಚಿತವಲ್ಲತುಂಬಾ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಉಗುರು ಬೆಚ್ಚನೆ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.
undefined
ನೀರು ತುಂಬಾ ತಂಪಾಗಿರಬಾರದು, ಹೆಚ್ಚು ಬಿಸಿಯಾಗಿರಬಾರದು, ಆದರೆ ಕೋಣೆಯ ಉಷ್ಣಾಂಶದಷ್ಟು ಇರಬೇಕು. ಬಾಯಾರಿಕೆಯಾದಾಗ ನೀರು ಕುಡಿಯಿರಿ. ಪ್ರತಿದಿನ ಎರಡೂವರೆ ಮೂರು ಲೀಟರ್ ನೀರು ಕುಡಿಯುವ ಗುರಿ ಹೊಂದಿರಿ.
undefined