ತಡರಾತ್ರಿ ಗ್ಯಾಜೆಟ್ ಬಳಕೆ ಪುರುಷ ಬಂಜೆತನಕ್ಕೆ ಕಾರಣವಾಗಬಹುದು ಜೋಪಾನ!

First Published | Jan 22, 2021, 5:48 PM IST

ಇದನ್ನು ಒಪ್ಪಿಕೊಳ್ಳಿ ಅಥವಾ ಒಪ್ಪಿಕೊಳ್ಳದಿರಿ.. ಆದರೆ ನಮ್ಮಲ್ಲಿ ಹೆಚ್ಚಿನವರು ನಿದ್ದೆಗೆ ಹೋಗುವ ಮುನ್ನ ಫೋನ್‌ಗಳಲ್ಲಿ ಅಥವಾ ಟ್ಯಾಬ್, ಲ್ಯಾಪ್‌ಟಾಪ್‌ಗಳಲ್ಲಿ ಸೀರಿಯಲ್‌ಗಳನ್ನು ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಗ್ಯಾಜೆಟ್‌ಗಳಿಂದ ಬರುವ ನೀಲಿ ಬೆಳಕು ನಿದ್ದೆಗೆ ಭಂಗ ಉಂಟು ಮಾಡಬಹುದು ಎಂದು ತಿಳಿದಿದ್ದೇವೆ. ಹೊಸ ಅಧ್ಯಯನವೊಂದು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅದು ಏನು ಎಂದು ತಿಳಿಯಲು ಮುಂದೆ ಓದಲೇಬೇಕು. 

ವರ್ಚುವಲ್ ಸ್ಲೀಪ್ 2020 ಸಭೆಯಲ್ಲಿ ಹಂಚಿಕೊಂಡ ಇತ್ತೀಚಿನ ಅಧ್ಯಯನದ ಪ್ರಕಾರ, ಗ್ಯಾಜೆಟ್ ಗಳಿಂದ ಹೊರ ಹೊಮ್ಮುವ ಬೆಳಕಿಗೆ ಮತ್ತು ಕಳಪೆ ವೀರ್ಯಾಣುಗಳ ಗುಣಮಟ್ಟಕ್ಕೆ ಗಾಢವಾದ ಸಂಬಂಧವನ್ನು ಹೊಂದಿದೆ ಎಂದು ಕಂಡುಹಿಡಿಯಲಾಯಿತು. ಅಧ್ಯಯನಕ್ಕಾಗಿ, ಆರೋಗ್ಯಕರ ಪುರುಷನ ವೀರ್ಯಾಣು ಮತ್ತು ಫಲವತ್ತತೆಯ ಮೇಲೆ ಫೋನ್ ವಿಕಿರಣದ ಪರಿಣಾಮವನ್ನು ಅಧ್ಯಯನ ಮಾಡಲಾಯಿತು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸಾಮಾನ್ಯ ಜನಸಂಖ್ಯೆಯಲ್ಲಿ ಬಂಜೆತನದ ಪ್ರಮಾಣ ಶೇ.15 ರಿಂದ 20 ರಷ್ಟು ಇರುತ್ತದೆ, ಅಲ್ಲಿ ಪುರುಷ ಫಲವತ್ತತೆಯು ಈ ಪ್ರಮಾಣದಲ್ಲಿ 20 ರಿಂದ 40 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಭಾರತದಲ್ಲಿ ಶೇ.23ರಷ್ಟು ಪುರುಷರು ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.
Tap to resize

ಬಂಜೆತನಕ್ಕೆ ಕಾರಣಗಳನ್ನು ಅರಿತು ಅವುಗಳಿಗೆ ಚಿಕಿತ್ಸೆ ನೀಡುವ ಅಗತ್ಯವನ್ನು ಈ ದತ್ತಾಂಶವು ಮಾಡುತ್ತದೆ. ಮತ್ತು ಅಧ್ಯಯನದ ಪ್ರಕಾರ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಸಾಧನಗಳ ಬಳಕೆಯು ಬಂಜೆತನ ಉಂಟು ಮಾಡುವಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು.
ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳ ಬಳಕೆ, ಸಂಜೆಯ ನಂತರ ವೀರ್ಯಾಣುಗಳ ಚಲನಶೀಲತೆ, ವೀರ್ಯಾಣುಗಳ ಪ್ರಗತಿಶೀಲ ಚಲನಶೀಲತೆ ಮತ್ತು ವೀರ್ಯಾಣುಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಈ ಸಾಧನಗಳಿಂದ ಹೊರಬರುವ ಶಾರ್ಟ್-ತರಂಗಾಂತರ ದ ಬೆಳಕಿನಗೆ (SWL) ಹೆಚ್ಚು ಒಡ್ಡಿಕೊಂಡಷ್ಟೂ, ಇಮೋಟಿಲ್ ವೀರ್ಯಾಣುವಿನ ಶೇಕಡಾವಾರು ಪ್ರಮಾಣವು ಅಧಿಕವಾಗುತ್ತದೆ ಎಂದು ಕಂಡುಹಿಡಿಯಲಾಯಿತು.
ಇದಲ್ಲದೆ, ಹೆಚ್ಚು ನಿದ್ರೆಯ ಅವಧಿಯು ಒಟ್ಟು ವೀರ್ಯಾಣುಗಳ ಸಂಖ್ಯೆ ಮತ್ತು ಒಟ್ಟಾರೆ ಪ್ರಗತಿಶೀಲ ಚಲನಶೀಲತೆಗೆ ಸಂಬಂಧಿಸಿದ್ದು ಎಂದು ಅಧ್ಯಯನವು ಕಂಡುಕೊಂಡಿದೆ.
ಸರಳವಾಗಿ ಹೇಳುವುದಾದರೆ, ಈ ಗ್ಯಾಜೆಟ್ ಗಳಿಂದ ಹೊರಬರುವ ಬೆಳಕು ನಿದ್ರೆಯನ್ನು ಅಸ್ತವ್ಯಸ್ತಗೊಳಿಸಬಹುದು ಮತ್ತು ವೀರ್ಯಾಣುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪದಂತೆ ತಡೆಯಬಹುದು, ಇದರಿಂದ ಪುರುಷರಲ್ಲಿ ಬಂಜೆತನದ ಪ್ರಮಾಣವು ಏರಿಕೆಯಾಗುತ್ತದೆ.
ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ ನಮ್ಮನ್ನು ರೋಗಗ್ರಸ್ತರನ್ನಾಗಿ ಮಾಡಿದೆ. ವಿಕಿರಣವು ವ್ಯಕ್ತಿಯ ಡಿಎನ್ ಎಗೆ ಹಾನಿಉಂಟು ಮಾಡಬಹುದು.
ಇದರಿಂದ ಜೀವಕೋಶಗಳು ಸ್ವಂತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ವೀರ್ಯಾಣು ಅಥವಾ ಅಂಡಾಣು ಕೋಶಕ್ಕೆ ತಲುಪುವಾಗ ಈ ವಿಕಿರಣಗಳು ಗರ್ಭಪಾತಕ್ಕೆ ಕಾರಣವಾಗಬಹುದು.
ಹಾಗಂತ ಗ್ಯಾಜೆಟ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದಲ್ಲ, ಮನುಷ್ಯರು ಪ್ರತಿಯೊಂದು ಕೆಲಸಕ್ಕೂ ಗ್ಯಾಜೆಟ್ ನ ಹಿಂದೆ ಬಿದ್ದಿರುವುದರಿಂದ ಅದನ್ನು ಬಳಕೆ ಮಾಡುವುದು ತಪ್ಪಲ್ಲ. ಆದರೆ ಮಲಗುವ ಮುನ್ನ ಅದನ್ನು ಬಳಸಬಾರದು.

Latest Videos

click me!