ಫಿಟ್ನೆಸ್ ಹುಚ್ಚಿಗೆ ಬಾಲಕ ಸಾವು; ಪ್ರೊಟೀನ್‌ ಶೇಕ್‌ ಕುಡಿಯುವಾಗ ಇರಲಿ ಎಚ್ಚರ

First Published | Jun 30, 2023, 3:38 PM IST

ಫಿಟ್ನೆಸ್ ಜಗತ್ತಿನಲ್ಲಿ ಪ್ರೋಟೀನ್ ಪೌಡರ್ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತದೆ. ಆದ್ರೆ ಇಲ್ಲೊಂದೆಡೆ ಪ್ರೊಟೀನ್‌ ಶೇಕ್‌ ಸೇವನೆ 16 ವರ್ಷದ ಹುಡುಗನ ಜೀವವನ್ನೇ ಬಲಿ ಪಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಪ್ರೊಟೀನ್ ಸಪ್ಲಿಮೆಂಟ್ಸ್ ಟ್ರೆಂಡ್ ಬಹಳಷ್ಟು ಹೆಚ್ಚಾಗಿದೆ. ಜನರು ಸ್ಕಿನ್ನೀ ಇದ್ದರೆ ದಪ್ಪಗಾಗಲು ಅಥವಾ ಸ್ನಾಯುಗಳನ್ನು ನಿರ್ಮಿಸಲು ಪ್ರೋಟೀನ್ ಪುಡಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ವಿಧಾನವು ಅದೆಷ್ಟೋ ಮಂದಿಯ ಜೀವವನ್ನೇ ಬಲಿ ಪಡೆದಿದೆ. ಹಾಗೆಯೇ ಇಲೊಬ್ಬ 16 ವರ್ಷದ ಹುಡುಗ ಪ್ರೊಟೀನ್ ಶೇಕ್ ಕುಡಿದು ಮೃತಪಟ್ಟಿದ್ದಾನೆ.  

ರೋಹನ್ ತುಂಬಾ ಸಣ್ಣಗಿದ್ದ ಕಾರಣ ಸಹಪಾಠಿಗಳು ಅವನನ್ನು ರೇಗಿಸುತ್ತಿದ್ದರು. ಹೀಗಾಗಿ ಸ್ನಾಯುಗಳನ್ನು ನಿರ್ಮಿಸುವ ಪ್ರಯತ್ನದಲ್ಲಿ ರೋಹನ್ ಅವರ ತಂದೆ ಖರೀದಿಸಿದ ಪ್ರೋಟೀನ್ ಶೇಕ್ ಅನ್ನು ಸೇವಿಸಿದ್ದರು. ಶೇಕ್ ಸೇವಿಸಿದ ಕೆಲವು ದಿನಗಳ ನಂತರ, ರೋಹನ್‌ನ ಆರೋಗ್ಯವು ಹದಗೆಟ್ಟಿತು. ನಂತರ ಮೃತಪಟ್ಟಿದ್ದಾನೆ ಎಂದು ತಿಳಿದುಬಮದಿದೆ.

Tap to resize

ಲಂಡನ್‌ನಲ್ಲಿ ಭಾರತೀಯ ಮೂಲದ ರೋಹನ್ ಗೋಧಾನಿಯಾ ಮೃತ ಪಟ್ಟಿದ್ದಾನೆ. ರೋಹನ್ ನಿರಂತರವಾಗಿ ಪ್ರೊಟೀನ್ ಶೇಕ್ ಕುಡಿಯುತ್ತಿದ್ದ ಎಂದು ತಿಳಿದುಬಂದಿದೆ. ಮೆದುಳು ಹಾನಿಗೊಳಗಾದ ಕಾರಣ ಈತ ಮೃತಪಟ್ಟಿದ್ದಾನೆ. ವರದಿಗಳ ಪ್ರಕಾರ, ರೋಹನ್ ಅವರ ಅಂಗಗಳನ್ನು ಇ ಬಾಲಕನಿಗೆ ದಾನ ಮಾಡಲಾಗಿದೆ. 

ಆದರೆ ರೋಹನ್ ಅವರ ದಾನ ಮಾಡಿದ ಯಕೃತ್ತಿನಲ್ಲಿ ಆರ್ನಿಥಿನ್ ಟ್ರಾನ್ಸ್‌ಕಾರ್ಬಮೈಲೇಸ್ (OTC) ಕೊರತೆಯು ಪರಿಶೀಲನೆಯಿಂದ ತಿಳಿದುಬಂದಿದೆ. ಈ ಅನುವಂಶಿಕ ಅಸ್ವಸ್ಥತೆಯಲ್ಲಿ, ದೇಹವು ಅಮೋನಿಯದ ಮಟ್ಟವನ್ನು ನಿಯಂತ್ರಿಸುವ ಕಿಣ್ವವನ್ನು ಹೊಂದಿಲ್ಲ, ಈ ಕಾರಣದಿಂದಾಗಿ ರಕ್ತದಿಂದ ಹೆಚ್ಚುವರಿ ಅಮೋನಿಯದ ಬಿಡುಗಡೆಯು ನಿಲ್ಲುತ್ತದೆ.

ಪ್ರೋಟೀನ್ ಪೂರಕದಿಂದ ಅಮೋನಿಯಾ ಹೆಚ್ಚಳ
ಸೈನ್ಸ್ ಡೈರೆಕ್ಟ್ ಪ್ರಕಾರ, ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದರಿಂದ ದೇಹದಲ್ಲಿ ಅಮೋನಿಯಾ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರೋಟೀನ್ ಶೇಕ್ ಮತ್ತು ಅನಾರೋಗ್ಯದ ಕಾರಣ ರೋಹನ್ ಅವರ ದೇಹದಲ್ಲಿನ ಅಮೋನಿಯಾ ಮಟ್ಟವು ಅಪಾಯಕಾರಿಯಾಗಿ ಹೆಚ್ಚಾಗಿತ್ತು.

ಅಪ್ಪಿತಪ್ಪಿಯೂ ಹೀಗೆಲ್ಲಾ ಮಾಡಬೇಡಿ
ವೈದ್ಯರ ಮೇಲ್ವಿಚಾರಣೆಯಿಲ್ಲದೆ ಪ್ರೋಟೀನ್ ಪೂರಕಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಮಿತಿಮೀರಿದ ಸೇವನೆಯು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವಾಗಲೂ ತಜ್ಞರ ಸಲಹೆಯ ಮೇರೆಗೆ ಮಾತ್ರ ಇದನ್ನು ಸೇವಿಸಿ.

ಒಂದು ದಿನಕ್ಕೆ ಎಷ್ಟು ಪ್ರೊಟೀನ್ ಬೇಕು?
ಗುರ್ಗಾಂವ್‌ನ ಮ್ಯಾಕ್ಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಉಪಾಸನಾ ಶರ್ಮಾ ಅವರು ಸರಾಸರಿ ಪುರುಷನಿಗೆ 56 ಗ್ರಾಂ ಪ್ರೋಟೀನ್ ಮತ್ತು ಸರಾಸರಿ ಮಹಿಳೆಗೆ ದಿನಕ್ಕೆ 46 ಗ್ರಾಂ ಪ್ರೋಟೀನ್ ಮಾತ್ರ ಅಗತ್ಯವಿದೆ ಎಂದು ಹೇಳಿದರು.

ಪ್ರೋಟೀನ್‌ನ ಸುರಕ್ಷಿತ ಮೂಲ
ಒಂದು ಹಿಡಿ ಡ್ರೈ ಫ್ರೂಟ್ಸ್ ಅಥವಾ 4-5 ಚಿಕನ್ ತುಂಡುಗಳನ್ನು ಒಂದು ಅಥವಾ ಎರಡು ಗ್ಲಾಸ್ ಹಾಲಿನೊಂದಿಗೆ ತಿನ್ನುವ ಮೂಲಕ ನೀವು ಸಾಕಷ್ಟು ಪ್ರೋಟೀನ್ ಪಡೆಯಬಹುದು ಎಂದು ಆಹಾರ ತಜ್ಞರು ಹೇಳುತ್ತಾರೆ.
 

Latest Videos

click me!