ದುಃಸ್ವಪ್ನಗಳು (nightmare) ನಿದ್ರೆಗೆ ಭಂಗ ತಂದರೆ, ಎಚ್ಚರವಾದ ನಂತರವೂ ಅವರ ನೆನಪುಗಳು ಕಾಡುತ್ತವೆ. ಆದರೆ ನಮ್ಮಲ್ಲಿ ಹೆಚ್ಚಿನವರು ಅದನ್ನು ನಿರ್ಲಕ್ಷಿಸುತ್ತಾರೆ ಅಥವಾ ಅದನ್ನು ಮೂಢನಂಬಿಕೆಯೊಂದಿಗೆ ಹೋಲಿಸುವ ತಪ್ಪನ್ನು ಮಾಡುತ್ತಾರೆ. ಆದರೆ ವಿಜ್ಞಾನದ ದೃಷ್ಟಿಕೋನದಿಂದ ನೋಡಿದರೆ, ಅವು ಆರೋಗ್ಯ ಸಂಬಂಧಿತ ಸಮಸ್ಯೆಗಳ ಸಂಕೇತವಾಗಿರಬಹುದು. ಆದ್ದರಿಂದ, ಅಂತಹ ಕನಸುಗಳನ್ನು ತೊಡೆದುಹಾಕಲು, ಅದರ ನಿಜವಾದ ಕಾರಣದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ಲೇಖನದಲ್ಲಿ, ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಅಥವಾ ದೈಹಿಕ ಪರಿಸ್ಥಿತಿಗಳು ಕೆಟ್ಟ ಅಥವಾ ಭಯಾನಕ ಕನಸುಗಳಿಗೆ ಕಾರಣವಾಗಬಹುದು ಎಂಬುದರ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಅವುಗಳನ್ನು ನಿವಾರಿಸುವ ಬಗೆಯ ಬಗ್ಗೆ ನೀವು ಗಮನ ಹರಿಸೋದು ಮುಖ್ಯ.
ಮಾನಸಿಕ ಖಿನ್ನತೆ
ಮಾನಸಿಕ ಖಿನ್ನತೆಯು (mental depression) ದುಃಸ್ವಪ್ನಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಖಿನ್ನತೆ, ಸ್ಕಿಜೋಫ್ರೇನಿಯಾ ಅಥವಾ ಬೈಪೋಲಾರ್ ಅಸ್ವಸ್ಥತೆಯಂತಹ ಮಾನಸಿಕ ಖಿನ್ನತೆಯ ಸ್ಥಿತಿಯಲ್ಲಿ, ವ್ಯಕ್ತಿಯು ಆಗಾಗ್ಗೆ ಭಯಾನಕ ಅಥವಾ ವಿಚಿತ್ರ ಕನಸುಗಳನ್ನು ಹೊಂದುತ್ತಾನೆ. ಅಂತಹ ವಿಚಿತ್ರ ಕನಸುಗಳು ವಾಸ್ತವವಾಗಿ ವ್ಯಕ್ತಿಯ ಮಾನಸಿಕ ಗೊಂದಲದ ಪರಿಣಾಮವಾಗಿದೆ. ಇದರಿಂದಾಗಿ ಖಿನ್ನತೆಯೂ ಉಂಟಾಗುತ್ತೆ. ಖಿನ್ನತೆಯಲ್ಲಿ, ಆತ್ಮಹತ್ಯೆ ಮತ್ತು ಇತರ ಅಪಾಯಕಾರಿ ಆಲೋಚನೆಗಳು ವ್ಯಕ್ತಿಯ ಮನಸ್ಸಿಗೆ ಬರುತ್ತಲೇ ಇರುತ್ತವೆ.
ಖಿನ್ನತೆಯಿಂದ ಮನಸ್ಸು ವಿಚಲಿತಗೊಳ್ಳುತ್ತದೆ ಮತ್ತು ಮಾನಸಿಕ ಗೊಂದಲದ ಪರಿಣಾಮ ವ್ಯಕ್ತಿಯ ಕನಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.ಆದ್ದರಿಂದ, ನೀವು ಒಂದು ನಿರ್ದಿಷ್ಟ ರೀತಿಯ ಕನಸಿಗೆ ಪದೇ ಪದೇ ಹೆದರುತ್ತಿದ್ದರೆ, ನೀವು ಈ ಬಗ್ಗೆ ಮನೋವೈದ್ಯರನ್ನು (physiatrist) ಸಂಪರ್ಕಿಸಬೇಕು. ಮನೋವೈದ್ಯರು ನಿಮ್ಮ ಜೊತೆ ಕೌನ್ಸೆಲಿಂಗ್ ಮಾಡುವ ಮೂಲಕ ಇದಕ್ಕೆ ನಿಜವಾದ ಕಾರಣವನ್ನು ಹೇಳಲು ಸಾಧ್ಯವಾಗುತ್ತದೆ.
ನಿದ್ರೆಯ ಕೊರತೆ
ನಿದ್ರೆಯ ಕೊರತೆಯಿಂದಾಗಿ (sleeplessness), ಮನಸ್ಸು ಗೊಂದಲಕ್ಕೊಳಗಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಹೆಚ್ಚು ಸಮಯ ಮಲಗಿದರೆ, ಅವನ ಪ್ರಜ್ಞಾ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ನಡೆಯುತ್ತವೆ. ಈ ಆಲೋಚನೆಗಳನ್ನು ಕೆಲವೊಮ್ಮೆ ದುಃಸ್ವಪ್ನಗಳಾಗಿ ನೋಡಲಾಗುತ್ತದೆ. ಆದ್ದರಿಂದ ನಿಮಗೆ ಕೆಟ್ಟ ಕನಸು ಬಿದ್ದರೆ, ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ನಿದ್ರೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದು. ಇದು ಮನಸ್ಸಿಗೆ ಶಾಂತಿಯನ್ನು ತರುತ್ತದೆ ಮತ್ತು ದುಃಸ್ವಪ್ನಗಳನ್ನು ಕಡಿಮೆ ಮಾಡುತ್ತದೆ.
ಹೃದಯರಕ್ತನಾಳದ ಸಮಸ್ಯೆಗಳು
ವೈದ್ಯಕೀಯ ವಿಜ್ಞಾನದ ಪ್ರಕಾರ, ಹೃದಯರಕ್ತನಾಳದ ಸಮಸ್ಯೆಗಳು (Cardiovascular problems) ಮತ್ತು ದುಃಸ್ವಪ್ನಗಳು ಪರಸ್ಪರ ಪೂರಕವಾಗಿವೆ. ಅಸಹಜ ಹೃದಯ ಬಡಿತದಂತಹ ಹೃದಯ ಸಮಸ್ಯೆಗಳು ಹೃದಯದಲ್ಲಿ ಆತಂಕವನ್ನು ಉಂಟುಮಾಡುತ್ತವೆ. ಇದರಿಂದಾಗಿ, ಮಲಗುವಾಗ ದುಃಸ್ವಪ್ನಗಳು ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಆಗಾಗ್ಗೆ ಭಯಾನಕ ಕನಸುಗಳನ್ನು ಕಾಣುತ್ತಿದ್ದರೆ, ಆ ಭಯದಿಂದಾಗಿ, ಹೆಚ್ಚಿದ ಹೃದಯ ಬಡಿತವು (heart beat) ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಮಗೆ ಪದೇ ಪದೇ ಕೆಟ್ಟ ಕನಸು ಬೀಳುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ.
ತಪ್ಪು ಆಹಾರ ಪದ್ಧತಿ
ತಪ್ಪು ಆಹಾರ ಪದ್ಧತಿಯಿಂದಾಗಿ (bad food habits), ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ರಾತ್ರಿ ಮಲಗುವ ಮೊದಲು ಭಾರಿ ಊಟ ಮಾಡೋದರಿಂದ, ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯ ಬಡಿತ ಹೆಚ್ಚಾದಾಗ ಕೆಟ್ಟ ಅಥವಾ ಭಯಾನಕ ಕನಸುಗಳು ಹೆಚ್ಚಾಗಿ ಸಂಭವಿಸುತ್ತವೆ.
ಔಷಧಗಳ ಪರಿಣಾಮ
ಖಿನ್ನತೆ-ನಿರೋಧಕ ಮಾತ್ರೆಗಳು ಅಥವಾ ಪಾರ್ಕಿನ್ಸನ್ ಕಾಯಿಲೆಯ ಔಷಧಿಗಳ ಪರಿಣಾಮದಿಂದಾಗಿ (medicine effect) ದುಃಸ್ವಪ್ನಗಳು ಬೀಳಬಹುದು, ಇದು ಮೆದುಳು (Brain) ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ಔಷಧಿಗಳನ್ನು ಸೇವಿಸಿದ ನಂತರ ವ್ಯಕ್ತಿಯು ದುಃಸ್ವಪ್ನಗಳನ್ನು ಹೊಂದಬಹುದು. ಅದೇ ಸಮಯದಲ್ಲಿ, ಹೃದಯ ಬಡಿತದ ಮೇಲೆ ಪರಿಣಾಮ ಬೀರುವ ಔಷಧಿಗಳ ಬಳಕೆಯು ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲೂ ಕೆಟ್ಟ ಕನಸು ಬೀಳುತ್ತದೆ.
ರಕ್ಷಿಸುವುದು ಹೇಗೆ?
ಕೆಟ್ಟ ಕನಸುಗಳಿಂದ ಪರಿಹಾರ ಪಡೆಯಲು, ಸರಿಯಾಗಿ ನಿದ್ರೆ (healthy sleep) ಮಾಡೋದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕಾಗಿ, ನಿಗದಿತ ಸಮಯದಲ್ಲಿ ಮಲಗುವ ಮತ್ತು ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿ ಮಾಡಿ.
ಮಾನಸಿಕ ಖಿನ್ನತೆಯಿಂದ (Depression) ಪರಿಹಾರ ಮತ್ತು ಶಾಂತಿಯನ್ನು ಪಡೆಯಲು ಯೋಗ ಮತ್ತು ಧ್ಯಾನದ (Meditaion) ಅಭ್ಯಾಸವು ಉತ್ತಮ. ಆದ್ದರಿಂದ ಯೋಗವನ್ನು ನಿಮ್ಮ ದೈನಂದಿನ ದಿನಚರಿಯ ಒಂದು ಭಾಗವಾಗಿ ಮಾಡಿಕೊಳ್ಳಿ.
ಮಲಗುವ ಮೊದಲು ಆಳವಾದ ಉಸಿರಾಟವು (breathing exercise) ಗಾಢ ನಿದ್ರೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ, ಇದು ದುಃಸ್ವಪ್ನಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಲಗುವ ಮೊದಲು ಯಾವಾಗಲೂ ಲಘು ಊಟವನ್ನು (little meal) ತೆಗೆದುಕೊಳ್ಳಿ ಮತ್ತು ಮಲಗುವ ಕನಿಷ್ಠ 2 ಗಂಟೆಗಳ ಮೊದಲು ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.
ಮಲಗುವ ಮೊದಲು ಒತ್ತಡ ನಿವಾರಿಸಲು, ಪುಸ್ತಕ ಓದಬಹುದು (reading books) ಅಥವಾ ನಿಮ್ಮ ಆಯ್ಕೆಯ ಹಾಡನ್ನು ಕೇಳಬಹುದು.ಮಲಗುವ ಮೊದಲು ನೆಚ್ಚಿನ ಚಟುವಟಿಕೆಗಳನ್ನು ಮಾಡೋದರಿಂದ ನಿಮಗೆ ಮಾನಸಿಕ ವಿಶ್ರಾಂತಿ ಸಿಗುತ್ತದೆ, ಇದು ಗಾಢ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.ಇವುಗಳನ್ನು ನೀವು ಪ್ರತಿದಿನ ಪಾಲಿಸೋದರಿಂದ ಯಾವುದೇ ಕೆಟ್ಟ ಕನಸುಗಳು ಬೀಳದೆ ಚೆನ್ನಾಗಿ ನಿದ್ರೆ ಮಾಡೋದಕ್ಕೆ ಸಾಧ್ಯವಾಗುತ್ತೆ.