ಟೀ ಕುಡೀರಿ ತಪ್ಪಲ್ಲ, ಆದ್ರೆ ಅದರೆ ಜೊತೆ ತಿನ್ನೋ ಕೆಲವು ಫುಡ್ಸ್ ಆರೋಗ್ಯಕ್ಕೆ ಒಳ್ಳೇದಲ್ಲ!

First Published | Dec 14, 2023, 7:00 AM IST

ಕೆಲವೊಮ್ಮೆ ಹವಾಮಾನದ ನೆಪದಲ್ಲಿ, ಕೆಲವೊಮ್ಮೆ ಆಯಾಸ ನಿವಾರಿಸಲು ಹೀಗೆ ಬೇರೆ ಬೇರೆ ಕಾರಣಗಳನ್ನು ನೀಡಿ ಭಾರತೀಯರು ಹೆಚ್ಚಾಗಿ ಚಹಾ ಕುಡಿಯುತ್ತಲೇ ಇರುತ್ತಾರೆ. ಆದರೆ ಚಹಾ ಕುಡಿಯುವಾಗ ನೀವು ಮಾಡುವ ಕೆಲವು ತಪ್ಪುಗಳು ಆರೋಗ್ಯಕ್ಕೆ ಹಾನಿ ಮಾಡಬಹುದು. 
 

ವಾವ್ ವೆದರ್ ಎಷ್ಟು ಚೆನ್ನಾಗಿದೆ... ಒಂದು ಕಪ್ ಚಹಾ… ಕುಡಿದ್ರೆ ಇನ್ನೂ ಚೆನ್ನಾಗಿರುತ್ತೆ… ತುಂಬಾ ತಲೆ ನೋವು, ಸುಸ್ತು ಕಾಡುತ್ತಿದೆ… ಶುಂಠಿ ಚಹಾ ಕುಡಿದ್ರೆ ಎಲ್ಲಾನೂ ಸರಿಯಾಗುತ್ತೆ… ಮನೆಯಲ್ಲಿ ಅತಿಥಿಗಳು ಬಂದಿದ್ದಾರೆ... ಬೇಗ ಚಹಾ ರೆಡಿ ಮಾಡು… ಭಾರತೀಯರು ಮತ್ತು ಚಹಾಕ್ಕೆ ಎಲ್ಲಿಲ್ಲದ ಸಂಬಂಧ. ಏನೇ ಆದ್ರೂ ಆಗಿಲ್ಲಾಂದ್ರೂ ಒಂದು ಕಪ್ ಚಹಾ ಎಲ್ಲರಿಗೂ ಬೇಕೇ ಬೇಕು… ಅಷ್ಟೊಂದು ಚಹಾ ಪ್ರಿಯರು (tea lover) ನಮ್ಮ ಜನ.
 

ಭಾರತೀಯ ಮನೆಗಳಲ್ಲಿ (Indian houses) ಚಹಾ ಕುಡಿಯಲು ಇಂತಹ ಒಂದು ಅಲ್ಲ, ಅನೇಕ ನೆಪಗಳಿವೆ. ಅದನ್ನು ಎಣಿಸಲು ಸಹ ಸಾಧ್ಯವಿಲ್ಲ. ಚಹಾ ನಮ್ಮ ಮನೆಗಳಲ್ಲಿ ಕೇವಲ ಪಾನೀಯವಲ್ಲ, ಅದು ಅಭ್ಯಾಸವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಲು ಗ್ರೀನ್ ಟೀ ಮತ್ತು ಬ್ಲೂ ಟೀ ಸೇರಿದಂತೆ ಅನೇಕ ಆರೋಗ್ಯಕರ ಚಹಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಶುಂಠಿ-ಏಲಕ್ಕಿ ದೇಸಿ ಚಹಾ ಯಾವಾಗಲೂ ಬೆಸ್ಟ್ .

Latest Videos


ಚಹಾ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ, ಚರ್ಚೆ ಯಾವಾಗಲೂ ನಡೆಯುತ್ತಲೇ ಇರುತ್ತೆ. ನೀವು ಚಹಾವನ್ನು ಇಷ್ಟಪಡುತ್ತಿದ್ದರೆ, ಖಂಡಿತವಾಗಿಯೂ ಅದನ್ನು ಕುಡಿಯಿರಿ, ಆದರೆ ಅದನ್ನು ಕುಡಿಯುವಾಗ ಕೆಲವು ತಪ್ಪುಗಳನ್ನು ತಪ್ಪಿಸಿ. ಇದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ. 
 

ಚಹಾ ಕುಡಿಯುವಾಗ ಈ ತಪ್ಪು ಮಾಡಬೇಡಿ
ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ (empty stomach) ಚಹಾ ಕುಡಿಯುತ್ತಾರೆ. ಆದರೆ ಬೆಡ್ ಟೀ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದು ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಬದಲು, ಏನನ್ನಾದರೂ ತಿಂದ ನಂತರ ಚಹಾ ಕುಡಿಯಿರಿ. 

ಅನೇಕ ಜನರು ಉಪಾಹಾರದೊಂದಿಗೆ ಚಹಾ ಕುಡಿಯುತ್ತಾರೆ, ಆದರೆ ನೀವು ತಿಂಡಿ ಜೊತೆ ಜೊತೆಗೆ ಚಹಾ ಸೇವಿಸೋದರಿಂದ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ.
ತಿನ್ನುವ ಮೊದಲು ಅಥವಾ ನಂತರ ಚಹಾ ಕುಡಿಯಬೇಡಿ. ಚಹಾದಲ್ಲಿರುವ ಅಂಶಗಳು ಆಹಾರದ ಕಬ್ಬಿಣಾಂಶ ದೇಹವನ್ನು ತಲುಪದಂತೆ ಮಾಡುತ್ತದೆ. ಇದು ರಕ್ತಹೀನತೆಗೆ (anemea) ಕಾರಣವಾಗಬಹುದು. ಊಟ ಮತ್ತು ಚಹಾದ ನಡುವೆ ಒಂದು ಗಂಟೆಯ ಅಂತರವನ್ನು ಇರಿಸಿ.
 

ತಣ್ಣನೆಯ ವಸ್ತುಗಳನ್ನು ಸೇವಿಸಿದ ತಕ್ಷಣ ಚಹಾ ಕುಡಿಯಬೇಡಿ. ಇದು ಒಸಡುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ತಂಪು ಮತ್ತು ಬಿಸಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮಲಗುವ 6-8 ಗಂಟೆಗಳ ಮೊದಲು ಚಹಾ ಕುಡಿಯಬೇಡಿ. ಇದರಲ್ಲಿರುವ ಕೆಫೀನ್ (caffeine) ನಿದ್ರೆ ಮಾಡಲು ಕಷ್ಟವಾಗಬಹುದು ಮತ್ತು ಈ ಕಾರಣದಿಂದಾಗಿ, ನಿಮ್ಮ ನಿದ್ರೆಯ ಮಾದರಿಗೆ ತೊಂದರೆಯಾಗಬಹುದು.
 

ಹೆಚ್ಚು ಚಹಾ ಕುಡಿಯುವುದರಿಂದ ಆಮ್ಲೀಯತೆ, ಕೆಟ್ಟ ಜೀರ್ಣಕ್ರಿಯೆ ಸೇರಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ದಿನವಿಡೀ 1-2 ಕಪ್ ಗಿಂತ ಹೆಚ್ಚು ಚಹಾ ಕುಡಿಯಬೇಡಿ.
ಪ್ಲಾಸ್ಟಿಕ್ ಕಪ್ ನಲ್ಲಿ ಎಂದಿಗೂ ಚಹಾ ಕುಡಿಯಬೇಡಿ. ಇದು ಚಹಾವನ್ನು ವಿಷಕಾರಿಯನ್ನಾಗಿ ಮಾಡುತ್ತದೆ.
ಚಹಾದಲ್ಲಿನ ಸಕ್ಕರೆ ಪ್ರಮಾಣವನ್ನು ಸಹ ನೋಡಿಕೊಳ್ಳಿ. ನೀವು ಹೆಚ್ಚು ಸಿಹಿ ಚಹಾವನ್ನು ಕುಡಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟದ (blood sugar level) ಮೇಲೆ ಪರಿಣಾಮ ಬೀರುತ್ತದೆ.

click me!