ಮನೆಯಲ್ಲಿ ಡಿಟಾಕ್ಸ್ ನೀರನ್ನು ತಯಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

First Published | May 10, 2021, 5:53 PM IST

ನಮ್ಮ ಜೀವನಶೈಲಿ, ಆಹಾರಗಳಿಂದ ಟಾಕ್ಸಿನ್‌ಗಳು ನಮ್ಮ ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಕ್ರಮೇಣ ಅನೇಕ ರೋಗಗಳು ಉಂಟಾಗುತ್ತವೆ, ಆದ್ದರಿಂದ ಕಾಲಕಾಲಕ್ಕೆ ನಿರ್ವಿಶೀಕರಣ (ಡಿಟಾಕ್ಸ್ )ವನ್ನು ಮಾಡುವುದು ಅವಶ್ಯಕ. ಇದನ್ನು ಮಾಡಲು ಹಲವು ಮಾರ್ಗಗಳಿವೆ, ಆದರೆ ಸುಲಭವಾದದ್ದು ವಾಟರ್ ಡಿಟಾಕ್ಸ್. ನೆನಪಿಡಿ ಮನೆಯಲ್ಲಿ ಡಿಟಾಕ್ಸ್ ನೀರನ್ನು ತಯಾರಿಸುತ್ತಿದ್ದರೆ, 3 ರಿಂದ 4 ಗಂಟೆಗಳ ಒಳಗೆ ಅದನ್ನು ಕುಡಿಯುವುದು ಅವಶ್ಯಕ.

ಈ ದಿನಗಳಲ್ಲಿ, ಬಿಸಿನೀರಿನ ಬದಲಾಗಿ, ಗಿಡಮೂಲಿಕೆಗಳು, ಹಣ್ಣುಗಳು ಮತ್ತು ತರಕಾರಿಗಳಿಂದ ತಯಾರಿಸಿದ ಪಾನೀಯಗಳನ್ನು ಪ್ರಯತ್ನಿಸಬಹುದು. ತುಳಸಿ ಮತ್ತು ಕಾಮ ಕಸ್ತೂರಿ ನೀರು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಎರಡೂ ಡಿಟಾಕ್ಸ್ ನೀರು ಕೋಣೆಯ ಉಷ್ಣಾಂಶದಲ್ಲಿರಬೇಕು. ಇದು ಶೀಘ್ರದಲ್ಲೇ ಪರಿಣಾಮ ಬೀರುತ್ತದೆ.
ದೇಹವನ್ನು ಹೈಡ್ರೀಕರಿಸುವುದು ಮತ್ತು ಡಿಟಾಕ್ಸ್ ಮಾಡುವುದು ಬಹಳ ಮುಖ್ಯ. ಇದಲ್ಲದೆ, ಎಳನೀರು, ಹಣ್ಣುಗಳು ಮತ್ತು ಕಲ್ಲಂಗಡಿಗಳು ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ಸಹಾಯ ಮಾಡುತ್ತವೆ.
Tap to resize

ಮನೆಯಲ್ಲಿರುವ ಪ್ರತಿಯೊಂದೂಗಿಡಮೂಲಿಕೆ ವಸ್ತುಗಳಿಂದ ಆರೋಗ್ಯಕರ ಸಿರಪ್ ತಯಾರಿಸಬಹುದು. ಅದನ್ನು ಹೇಗೆ ತಯಾರಿಸಬಹುದು. ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಲು ಮುಂದೆ ಓದಿ.
ನೀರು, ಅರಿಶಿನ ಮತ್ತು ಪಾಲಕ್ ಡಿಟಾಕ್ಸ್ ನೀರುಪಾಲಕ್ ಉತ್ತಮ ನಿರ್ವಿಶೀಕರಣ ಏಜೆಂಟ್. ಪಾಲಕ್ ಸೊಪ್ಪನ್ನು ಅರಿಶಿನದೊಂದಿಗೆ ಪುಡಿಮಾಡಿ ನಯವಾಗಿಸಿ. ಒಂದರಿಂದ ಎರಡು ಕಪ್‌ಗಳನ್ನು ದಿನದಲ್ಲಿ ತೆಗೆದುಕೊಳ್ಳಬಹುದು. ಪ್ರಯತ್ನಿಸಿ,
ದೈನಂದಿನ ಆಹಾರದಲ್ಲಿ ಕೆಲವು ಪಾಲಕ್ ಎಲೆಗಳನ್ನು ಸೇರಿಸಿ. ಅರಿಶಿನವು ನಂಜು ನಿರೋಧಕ ಗುಣಗಳನ್ನು ಹೊಂದಿದೆ, ಪಾಲಕ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾವು ಮತ್ತು ತುಳಸಿಮಾವು ಜೀರ್ಣಕ್ರಿಯೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳಲ್ಲಿ ಆಂಟಿಆಕ್ಸಿಡೆಂಟ್‌ಗಳಿವೆ, ಇದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು.
ಹರ್ಬಲ್ ಚಹಾ3-4 ಲವಂಗ, ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಕರಿ ಮೆಣಸನ್ನು ಪುಡಿಮಾಡಿ ಚಹಾದಲ್ಲಿ ಕುದಿಸಿ. ತಣ್ಣಗಾಗಲು ಬಿಡಿ. ಕೋಣೆಯ ಉಷ್ಣಾಂಶಕ್ಕೆ ಬಂದಾಗ, ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಸರ್ವ್ ಮಾಡಿ .
ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆಯಿರಿಪಾನೀಯಗಳಲ್ಲಿ ಮಸಾಲೆಗಳ ಜೊತೆಗೆ ಜೇನುತುಪ್ಪ ಮತ್ತು ನಿಂಬೆಯನ್ನು ಸೇರಿಸುತ್ತೇವೆ, ಇದರಿಂದ ಮಸಾಲೆ ಸಮತೋಲನಗೊಳ್ಳುತ್ತದೆ.ಬೆಲ್ಲ ಮತ್ತು ಹುಣಿಸೇಹಣ್ಣಿನ ಮೂಲಕ ದೇಹದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ.
ಟರ್ನಿಪ್ ಅಂದರೆ ಒಂದು ಬಗೆಯ ಗೆಡ್ಡೆ ತರಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕಫದಲ್ಲಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ.
ರೋಗ ನಿರೋಧಕ ಬೂಸ್ಟರ್ ಪಾನೀಯಗಳಿಗೆ ಗಿಡ ಮೂಲಿಕೆಗಳು, ಸಿಟ್ರಸ್ ಹಣ್ಣುಗಳನ್ನು ಸೇರಿಸಿ. ಪಾನೀಯಗಳಿಗೆ ಕಪ್ಪು ಉಪ್ಪು ಮತ್ತು ಹಸಿಮೆಣಸು ಸೇರಿಸಿ.

Latest Videos

click me!