ಆಯುರ್ವೆದದ ಪ್ರಕಾರ ಉತ್ತಮ ಆರೋಗ್ಯ ಪಡೆಯಲು ಏನು ಮಾಡಬೇಕು?

Suvarna News   | Asianet News
Published : Aug 24, 2021, 05:17 PM IST

ಸದೃಢ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಎಂದರೆ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವುದು ಮತ್ತು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಎಂದಲ್ಲ, ಇದು ಸ್ವಂತ ನಿಯಮಿತ ದಿನಚರಿಯ ಬಗ್ಗೆಯೂ ಗಮನ ಹರಿಸುವುದು. ಆಯುರ್ವೇದದ ಪ್ರಕಾರ, ಉತ್ತಮ ದೈನಂದಿನ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು.

PREV
110
ಆಯುರ್ವೆದದ ಪ್ರಕಾರ ಉತ್ತಮ ಆರೋಗ್ಯ ಪಡೆಯಲು ಏನು ಮಾಡಬೇಕು?

ಆಯುರ್ವೇದ ಒಂದು ಜೀವನ ವಿಧಾನ, ಇದು ನಮ್ಮ ಅಭ್ಯಾಸಗಳನ್ನು ಸುಧಾರಿಸುವ ದೈನಂದಿನ ಪ್ರಯತ್ನ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಪ್ರಾಚೀನ ಜ್ಞಾನದ ಮಾರ್ಗದರ್ಶನದಿಂದ, ನಾವು ನಮ್ಮ ಆಹಾರ ಮತ್ತು ಜೀವನಶೈಲಿಯನ್ನು ಸುಧಾರಿಸಬಹುದು, ಇದರಿಂದ ನಾವು ಆರೋಗ್ಯವಾಗಿರಲು ಮಾತ್ರವಲ್ಲದೆ ದೀರ್ಘಾಯುಷ್ಯವನ್ನು ಪಡೆಯಬಹುದು.

210

ಈ ಮೂರು ಪ್ರದೇಶಗಳು ಸಂಪರ್ಕ ಹೊಂದಿರುವುದರಿಂದ ನಿಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಕಂಡುಕೊಳ್ಳಲು ಆಯುರ್ವೇದವು ಪ್ರೋತ್ಸಾಹಿಸುತ್ತದೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನವನ್ನು ನಡೆಸಲು ಅಳವಡಿಸಿಕೊಳ್ಳಬಹುದಾದ ಆಯುರ್ವೇದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಅಭ್ಯಾಸಗಳನ್ನು ಅನುಸರಿಸಬೇಕು.

310

ಆಯುರ್ವೇದದ ಪ್ರಕಾರ,  ಬೆಳಗ್ಗೆ ಸೂರ್ಯೋದಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಚ್ಚರಗೊಳ್ಳಬೇಕು. ಇದು ಒಳ್ಳೆಯ ಅಭ್ಯಾಸವಾಗಿದ್ದು, ಆರೋಗ್ಯಕರ ಜೀವನ ನಡೆಸಲು ನೆರವಾಗುತ್ತದೆ. ಬ್ರಾಹ್ಮಿ ಮಹೂರ್ತದಲ್ಲಿ ಎಚ್ಚರಗೊಳ್ಳಬೇಕೆಂದು ನಮ್ಮ ಹಿರಿಯರು ಯಾವಾಗಲೂ ಸಲಹೆ ನೀಡುತ್ತಾರೆ. ಬ್ರಾಹ್ಮಿ ಮಹೂರ್ತವು ಒಂದು ಶುಭ ಕಾಲವಾಗಿದ್ದು, ಸೂರ್ಯೋದಯಕ್ಕೆ 1 ಗಂಟೆ 36 ನಿಮಿಷಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಅದಕ್ಕೆ 48 ನಿಮಿಷಗಳ ಮೊದಲು ಕೊನೆಗೊಳ್ಳುತ್ತದೆ.

410

ಮುಂಜಾನೆ ವ್ಯಾಯಾಮ ಮಾಡುವುದರಿಂದ ದೇಹದ ಆಲಸ್ಯ ನಿವಾರಣೆಯಾಗುತ್ತದೆ. ಇದು ದೇಹವನ್ನು ರೀಚಾರ್ಜ್ ಮಾಡುತ್ತದೆ ಮತ್ತು ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ವ್ಯಾಯಾಮ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಮನಸ್ಸು ಅಹ್ಲಾದಕರವಾಗಿರಲು ಸಹಾಯ ಮಾಡುತ್ತೆ. 

510

ಡೆಂಟಲ್ ಕೇರ್ ಬಗ್ಗೆ ಗಮನ ಹರಿಸಲೇಬೇಕು. ಇಲ್ಲದಿದ್ದರೆ ಹೆಚ್ಚಿನ ಸಮಸ್ಯೆ ಕಾಡುತ್ತದೆ. ಬೇವಿನ ತಾಜಾ ಕಡ್ಡಿ, ಖಾದಿರ್ (ಅಕೇಶಿಯಾ ಕಥಾ) ಇತ್ಯಾದಿಗಳನ್ನು ಬಳಸುವುದರಿಂದ ಹಲ್ಲುಗಳು ಶುದ್ಧವಾಗುತ್ತವೆ ಮತ್ತು ಬಾಯಿಯ ವಾಸನೆಯನ್ನು ತೆಗೆದು ಹಾಕುತ್ತದೆ. ಅಥವಾ ಆಯಿಲ್ ಪುಲ್ಲಿಂಗ್ ಸಹ ಮಾಡುವ ಮೂಲಕ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬೇಕು.

610

ಮೂಗಿನ ಕ್ರಿಯೆ ಮಾಡಿ. ಮೂಗಿಗೆ ಎರಡು ಹನಿ ಎಳ್ಳೆಣ್ಣೆ, ಸಾಸಿವೆ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇದು ಅಕಾಲಿಕವಾಗಿ ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ, ಬೊಕ್ಕತಲೆ ಯಾಗುವುದನ್ನು ತಡೆಯುತ್ತದೆ ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

710

ಸ್ನಾನ ಮಾಡುವುದು ಸಹ ಉತ್ತಮ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾದ ಒಂದು ಅಭ್ಯಾಸ. ಆಯುರ್ವೇದದ ಪ್ರಕಾರ ನಿಯಮಿತ ವ್ಯಾಯಾಮದ ನಂತರ ಅರ್ಧದಿಂದ ಒಂದು ಗಂಟೆಯೊಳಗೆ ಸ್ನಾನ ಮಾಡಬೇಕು. ದೇಹದಲ್ಲಿರುವ ಕಲ್ಮಶಗಳೆಲ್ಲಾ ನಿವಾರಣೆಯಾದಾಗ ಮಾತ್ರ ದೇಹ ಫ್ರೆಶ್ ಆಗುತ್ತದೆ ಜೊತೆಗೆ ಮನಸ್ಸು ಫ್ರೆಶ್ ಆಗುತ್ತದೆ. 

810

ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ, ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಉರಿಯೂತದ ವಿರುದ್ಧ ಹೋರಾಡುತ್ತದೆ. ಜೀರಿಗೆ, ಕೊತ್ತಂಬರಿ, ಶುಂಠಿ ಮತ್ತು ಅರಿಶಿನ ಇವೆಲ್ಲವೂ ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಸಾಲೆಗಳು, ಇವುಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. 

910

ಲಘು ಭೋಜನವನ್ನು ಹೊಂದಿರಿ. ಹೌದು ಆಯುರ್ವೇದದ ಪ್ರಕಾರ ರಾತ್ರಿ 8 ಗಂಟೆ ಮೊದಲು ಲಘು ಆಹಾರ ತಿನ್ನಬೇಕು ಎಂದು ಹೇಳಲಾಗಿದೆ. ರಾತ್ರಿ ಹೆಚ್ಚು ಆಹಾರ ಸೇವಿಸಿದರೆ ಬೇಗ ಜೀರ್ಣವಾಗುವುದಿಲ್ಲ. ಆದುದರಿಂದ ಕಡಿಮೆ ಆಹಾರ ಸೇವಿಸುವುದು ರಾತ್ರಿಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಮೆಟೊಬೋಲಿಕ್ ಅಂಶಗಳಿಗೆ ಸಹಾಯ ಮಾಡುತ್ತದೆ.

1010

ನಿದ್ರೆ ಚೆನ್ನಾಗಿ ಮಾಡುವುದು ಸಹ ಉತ್ತಮ ಆರೋಗ್ಯಕ್ಕೆ ತುಂಬಾನೆ ಮುಖ್ಯವಾಗಿದೆ. ಪರಿಸರವನ್ನು ಸ್ವಚ್ಛವಾಗಿ ಮತ್ತು ಆಹ್ಲಾದಕರವಾಗಿರಿಸಿ. ಹಗಲಿನಲ್ಲಿ ಮಲಗುವುದನ್ನು ತಪ್ಪಿಸಿ. ರಾತ್ರಿ ಸಾಕಷ್ಟು ನಿದ್ರೆ ಮಾಡಿ. ಸರಿಯಾದ ನಿದ್ರೆ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ.

click me!

Recommended Stories