Winter Health: ಚಳಿಗಾಲ ನಿಜ, ಆದ್ರೆ ನಂಗ್ಯಾಕೆ ಎಲ್ರಿಗಿಂತ ಜಾಸ್ತಿ ಚಳಿಯಾಗುತ್ತೆ ?

First Published | Jan 1, 2023, 2:34 PM IST

ಚಳಿಗಾಲದಲ್ಲಿ ಶೀತ ವಾತಾವರಣವಿರುವುದು ಸಾಮಾನ್ಯ. ಆದರೆ ಚಳಿಯಾಗುವ ರೀತಿ ಎಲ್ಲರಿಗೂ ಒಂದೇ ಥರ ಇರುವುದಿಲ್ಲ. ಅವರವರ ದೇಹ ಪ್ರಕಾರಕ್ಕೆ ತಕ್ಕಂತೆ ಚಳಿಯನ್ನು ಅನುಭವಿಸುತ್ತಾರೆ. ಹಾಗೆಯೇ ಎಲ್ಲರಿಗಿಂತ ಹೆಚ್ಚು ಚಳಿಯಾಗುವಂತೆ ನಿಮಗೆ ಅನಿಸಿದ್ಯಾ ? ಇದಕ್ಕೆ ಹಲವು ಕಾರಣಗಳಿವೆ ಅಂತಾರೆ ಆರೋಗ್ಯ ತಜ್ಞರು.

ಚಳಿಗಾಲ (Winter) ಶುರುವಾಗಿದೆ ನಿಜ. ಆದರೆ ಸಾಮಾನ್ಯ ಚಳಿಯ ವಾತಾವರಣವಿದ್ದರೂ ಕೆಲವೊಬ್ಬರು ಹಾಯಾಗಿ ಇರುತ್ತಾರೆ. ಇನ್ನು ಕೆಲವರು ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ. ಇದಕ್ಕೇ ಕಾರಣ. ನಿಮಗೂ ಚಳಿಗಾಲದಲ್ಲಿ ವಿಪರೀತ ತಣ್ಣಗಾಗುವಂತೆ ಅನಿಸಿದ್ಯಾ ? ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು (Health experts). ಆ ಬಗ್ಗೆ ತಿಳಿದುಕೊಳ್ಳೋಣ..

ಕಬ್ಬಿಣದ ಕೊರತೆ: ತಣ್ಣಗಾಗಲು ಕಬ್ಬಿಣದ (Iron) ಕೊರತೆಯೂ ಒಂದು ಕಾರಣ ಎನ್ನುತ್ತಾರೆ ತಜ್ಞರು. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ನಮ್ಮ ದೇಹಕ್ಕೆ ಸಾಕಷ್ಟು ಕೆಂಪು ರಕ್ತ ಕಣಗಳು ಬೇಕಾಗುತ್ತವೆ. ಇವುಗಳ ಕೊರತೆಯಾದರೆ ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಇದು ಆಯಾಸ, ದೌರ್ಬಲ್ಯ ಮತ್ತು ಶೀತದ ಲಕ್ಷಣಗಳನ್ನು ಉಂಟುಮಾಡುತ್ತದೆ.

Tap to resize

ವಿಟಮಿನ್ ಬಿ-12 ಕೊರತೆ: ವಿಟಮಿನ್ ಬಿ-12 ಅಥವಾ ಫೋಲಿಕ್ ಆಮ್ಲದಂತಹ ವಿಟಮಿನ್ ಕೊರತೆಗಳು ಸಹ ರಕ್ತಹೀನತೆಗೆ ಕಾರಣವಾಗಬಹುದು. ಇದರಿಂದ ದೇಹ ತಣ್ಣಗಾಗುತ್ತದೆ ಎಂದು ಕೆಲವರು ನಂಬುತ್ತಾರೆ. ವಿಟಮಿನ್ ಬಿ-12 ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅವಶ್ಯಕವಾಗಿದೆ. ಆದರೆ ಡಿಎನ್‌ಎ ಮತ್ತು ಇತರ ಆನುವಂಶಿಕ ವಸ್ತುಗಳ ಉತ್ಪಾದನೆಗೆ ಫೋಲಿಕ್ ಆಮ್ಲವೂ ಅಗತ್ಯವಾಗಿರುತ್ತದೆ.

ಅಸಮರ್ಪಕ ರಕ್ತ ಪರಿಚಲನೆ: ಕಳಪೆ ರಕ್ತ ಪರಿಚಲನೆಯು ಹೆಚ್ಚು ಶೀತವನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ದೇಹದ ರಕ್ತ ಸಂಚಾರಕ್ಕೆ ತೊಂದರೆಯಾದಾಗ ದೇಹಕ್ಕೆ ಹೆಚ್ಚು ಚಳಿಯ ಅನುಭವವಾಗುತ್ತದೆ. ನಮ್ಮ ದೇಹದ ಅಂಗಾಂಗಗಳಿಗೆ ಮತ್ತು ಅಂಗಾಂಶಗಳಿಗೆ ಸರಿಯಾಗಿ ರಕ್ತ ಹರಿಯದೆ ದೇಹ ತಣ್ಣಗಾಗಲು ಶುರುವಾಗುತ್ತದೆ. ಕಿರಿದಾದ ಅಪಧಮನಿಗಳು ಅಥವಾ ರಕ್ತದ ಹರಿವನ್ನು ದುರ್ಬಲಗೊಳಿಸುವ ಇತರ ಸಮಸ್ಯೆಗಳಿಂದ ಇದು ಉಂಟಾಗಬಹುದು.

ದೇಹದಲ್ಲಿ ನೀರಿನ ಕೊರತೆ: ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ ಮೇಲಿನ ಸಮಸ್ಯೆಗಳಷ್ಟೇ ಅಲ್ಲ ದೇಹವೂ ತಣ್ಣಗಾಗುತ್ತದೆ ಎನ್ನುತ್ತಾರೆ ತಜ್ಞರು. ಉತ್ತಮ ರಕ್ತ ಪರಿಚಲನೆಗೆ ನೀರು ಬಹಳ ಅವಶ್ಯಕ. ದೇಹದಲ್ಲಿ ನೀರಿನ ಕೊರತೆಯು ರಕ್ತಹೀನತೆ ಮತ್ತು ದುರ್ಬಲ ರಕ್ತದ ಹರಿವಿಗೆ ಕಾರಣವಾಗುತ್ತದೆ. ಇವುಗಳಷ್ಟೇ ಅಲ್ಲ.. ಥೈರಾಯ್ಡ್ ಸಮಸ್ಯೆ, ದೀರ್ಘಕಾಲದ ಕಾಯಿಲೆಗಳು, ವಯಸ್ಸು, ದೇಹ ರಚನೆ ಸೇರಿದಂತೆ ಹಲವು ಸಮಸ್ಯೆಗಳು ಇತರರಿಗಿಂತ ಬೇಗ ಚಳಿಯಾಗಲು ಕಾರಣವಾಗುತ್ತವೆ.

ಥೈರಾಯ್ಡ್ ಸಮಸ್ಯೆಗಳು: ಹೈಪೋಥೈರಾಯ್ಡಿಸಮ್ ಸಮಸ್ಯೆಯಾಗಿದ್ದರೆ, ನೀವು ಇತರರಿಗಿಂತ ಬೇಗ ಶೀತ ಅನುಭವಿಸಬಹುದು. ಈ ಹೈಪೋಥೈರಾಯ್ಡಿಸಮ್ ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು, ಇದರಿಂದಾಗಿ ನೀವು ಶೀತವನ್ನು ಅನುಭವಿಸಬಹುದು. ಅತಿಯಾದ ಥೈರಾಯ್ಡ್ ಗ್ರಂಥಿ, ಅಥವಾ ಹೈಪರ್ ಥೈರಾಯ್ಡಿಸಮ್ ಸಹ ಶೀತ ಭಾವನೆಗಳನ್ನು ಉಂಟುಮಾಡಬಹುದು. ಏಕೆಂದರೆ ಇದು ಚಯಾಪಚಯ ಕ್ರಿಯೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ದೇಹದಲ್ಲಿ ಉಷ್ಣ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ.

ದೀರ್ಘಕಾಲದ ಕಾಯಿಲೆಗಳು: ಮಧುಮೇಹ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ನಂತಹ ಕೆಲವು ದೀರ್ಘಕಾಲದ ವೈದ್ಯಕೀಯ ಪರಿಸ್ಥಿತಿಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಶೀತ ಭಾವನೆಗಳನ್ನು ಉಂಟುಮಾಡುತ್ತದೆ.

Latest Videos

click me!