ನಾವು ದಿನವೂ ಸೇವಿಸೋ ಈ ಆಹಾರ ವಿದೇಶದಲ್ಲಿ ಬ್ಯಾನ್ ಆಗಿವೆ ಗೊತ್ತಾ?

First Published | Jan 26, 2023, 10:40 AM IST

ಭಾರತದಲ್ಲಿ ನಾವು ಇಷ್ಟಪಟ್ಟು ಸೇವಿಸುವಂತಹ ಅದೆಷ್ಟೋ ಆಹಾರ ಪದಾರ್ಥಗಳು, ವಿದೇಶಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಅನ್ನೋದು ನಿಮಗೆ ಗೊತ್ತಾ? ಹೌದು ಅಂತಹ ಕೆಲವು ವಸ್ತುಗಳ ಲಿಸ್ಟ್ ಗಳನ್ನು ಇಲ್ಲಿ ನೀಡಲಾಗಿದೆ ಅವುಗಳ ಬಗ್ಗೆ ತಿಳಿಯೋಣ. 
 

ಭಾರತದ ಸಾಮಾನ್ಯ ಜನರು ತಮ್ಮ ದೈನಂದಿನ ದಿನಚರಿಯಲ್ಲಿ ಅನೇಕ ರೀತಿಯ ವಸ್ತುಗಳನ್ನು ಬಳಸುತ್ತಾರೆ. ಕೆಲವೊಂದು ವಸ್ತುಗಳನ್ನು ಜನರು ಎಷ್ಟು ಬಳಕೆ ಮಾಡುತ್ತಾರೆ ಅಂದರೆ, ಅದಕ್ಕೆ ಅವರು ಒಗ್ಗಿ ಹೋಗಿರುತ್ತಾರೆ. ಆದರೆ ನೀವು ನಿರಂತರವಾಗಿ ಬಳಕೆ ಮಾಡುವ ಕೆಲವೊಂದು ವಸ್ತುಗಳು ವಿದೇಶದಲ್ಲಿ ನಿಷೇಧಿಸಲ್ಪಟ್ಟಿದೆ (banned product)  ಅನ್ನೋದು ನಿಮಗೆ ಗೊತ್ತಾ? 

ಚೂಯಿಂಗ್ ಗಮ್: ಭಾರತದಲ್ಲಿ ನಾವು ಸಣ್ಣ, ಪುಟ್ಟ ಅಂಗಡಿಗಳಲ್ಲಿ, ಕಿರಾಣಿ ಶಾಪ್ ಗಳಲ್ಲೂ ನಾವು ಚೂಯಿಂಗ್ ಗಮ್ ಕಾಣಬಹುದು. ಇದನ್ನು ಹೆಚ್ಚಾಗಿ ಮೌತ್ ಫ್ರೆಶನರ್ ಆಗಿ ತಿನ್ನಲಾಗುತ್ತದೆ. ಆದರೆ ಮಕ್ಕಳು ಇದನ್ನು ಸುಮ್ಮನೆ ಎಂಜಾಯ್ ಮಾಡಲು ಅಗೆಯುತ್ತಿರುತ್ತಾರೆ.  ಅನೇಕ ಬಾರಿ ತುಂಟತನ ಮಾಡೊದಕ್ಕಾಗಿ ಚೂಯಿಂಗ್ ಗಮ್ ಬಳಸುತ್ತಾರೆ .ಆದರೆ ನಿಮಗೆ ಗೊತ್ತಾ? ಸಿಂಗಾಪುರದಲ್ಲಿ ಇದನ್ನು ನಿಷೇಧಿಸಲಾಗಿದೆ. ಇದಕ್ಕಾಗಿ ಕಟ್ಟುನಿಟ್ಟಾದ ನಿಯಮಗಳಿವೆ. ಇಲ್ಲಿ ಚೂಯಿಂಗ್ ಗಮ್ ನ ಮಾರಾಟ ಮತ್ತು ಬಳಕೆ ಮಾಡುವಂತೆಯೇ ಇಲ್ಲ. .

Tap to resize

ಕಿಂಡರ್ ಜಾಯ್ (Kinder Joy): ಮಕ್ಕಳಲ್ಲಿ ಬಹಳ ಜನಪ್ರಿಯವಾಗಿರುವ ಕಿಂಡರ್ ಜಾಯ್. ಇದನ್ನು ಹೆಚ್ಚಿನ ಮಕ್ಕಳು ಇಷ್ಟಪಟ್ಟಿ ಸೇವಿಸುತ್ತಾರೆ. ಏಕೆಂದರೆ ಅದರಲ್ಲಿ ಆಟಿಕೆಗಳು ಇವೆ. ಇದನ್ನು ಚಾಕೊಲೇಟ್ ನಿಂದ ಸಹ ತಯಾರಿಸಲಾಗುತ್ತದೆ. ಮೊಟ್ಟೆಯ ಆಕಾರದ ಈ ಕಿಂಡರ್ ಜಾಯ್ ಅನ್ನು ಯುಎಸ್ನಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಈ ಚಾಕಲೇಟ್ ಮಕ್ಕಳ ಗಂಟಲಿನಲ್ಲಿ ಸಿಲುಕಿಕೊಂಡಿರುವ ಅನೇಕ ಪ್ರಕರಣಗಳು ಅಲ್ಲಿ ನಡೆದಿದೆ. ಇದರ ಹೊರತಾಗಿಯೂ, ಭಾರತದಲ್ಲಿ ಕಿಂಡರ್ ಜಾಯ್ ಪ್ರತಿಯೊಂದು ಕಿರಾಣಿ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿದೆ.

ಕೆಚಪ್ (Ketchup): ನೀವು ಕೆಚಪ್ ಅನ್ನು ದೈನಂದಿನ ಬಳಕೆಗೆ ಬಳಸುತ್ತೀರಿ ಅಲ್ವಾ?  ಏಕೆಂದರೆ ಚೌಮಿನ್, ಸ್ಯಾಂಡ್ ವಿಚ್, ಫಿಂಗರ್ ಚಿಪ್ಸ್, ಪರೋಟಾ, ಸಮೋಸಾಗಳನ್ನು ಸಹ ಕೆಚಪ್ ಬಳಸಿ ತಿನ್ನಬಹುದು. ಕೆಲವು ಜನರು ಪಿಜ್ಜಾದೊಂದಿಗೆ, ಫ್ರೈಡ್ ರೈಸ್ ಜೊತೆ ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಚಪ್ ಬಳಕೆಯನ್ನು ಫ್ರಾನ್ಸ್ನಲ್ಲಿ ನಿಷೇಧಿಸಲಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದರ ಅತಿಯಾದ ಬಳಕೆ ಮತ್ತು ಅನಾರೋಗ್ಯವನ್ನುಂಟು ಮಾಡುತ್ತೆ. ಆದುದರಿಂದ ಫ್ರೆಂಚ್ ಸರ್ಕಾರ ಇದನ್ನು ಶಾಲೆಗಳು ಮತ್ತು ಕೆಫೆಗಳಲ್ಲಿ ನಿಷೇಧಿಸಿದೆ.

ಸಮೋಸಾ (Samosa): ಸಮೋಸಾ ಭಾರತದ ಪ್ರತಿಯೊಂದು ಪ್ರದೇಶದಲ್ಲೂ ಕಂಡುಬರುತ್ತದೆ. ನಗರದಿಂದ ಹಳ್ಳಿಯವರೆಗೆ, ದೊಡ್ಡ ಪಂಚತಾರಾ ಹೋಟೆಲ್ ಗಳಿಂದ ಗ್ರಾಮದ ಮಿಠಾಯಿ ಅಂಗಡಿಯವರೆಗೆ, ಎಲ್ಲಿ ಬೇಕಾದರೂ ಸಮೋಸ ಸುಲಭವಾಗಿ ಸಿಗುತ್ತೆ. ಇದು ಹೆಚ್ಚಿನ ಜನರ ಫೆವರಿಟ್ ತಿನಿಸಾಗಿದೆ. ಆದರೆ ದಕ್ಷಿಣ ಆಫ್ರಿಕಾದ ಸೊಮಾಲಿಯಾದಲ್ಲಿ 2011ರಿಂದ ಸಮೋಸಾವನ್ನು ನಿಷೇಧಿಸಲಾಗಿದೆ. ಏಕೆಂದರೆ ಅದರ ತ್ರಿಕೋನಾಕಾರದ ಆಕಾರವು 'ಅಲ್-ಶಬಾಬ್ ಗುಂಪಿನಲ್ಲಿ' ಕ್ರಿಶ್ಚಿಯನ್ ಧರ್ಮದ ಸಂಕೇತವೆಂದು ಹೇಳಲಾಗುತ್ತದೆ. ಸೊಮಾಲಿಯಾದಲ್ಲಿ ಈ ಕಾನೂನನ್ನು ಉಲ್ಲಂಘಿಸುವುದು ಶಿಕ್ಷಾರ್ಹವಾಗಿದೆ.

ಡಿಸ್ಪ್ರಿನ್ (Disprin): ತಲೆನೋವನ್ನು ತೊಡೆದುಹಾಕಲು ಇಲ್ಲಿನ ಹೆಚ್ಚಿನ ಜನರು ಡಿಸ್ಪ್ರಿನ್ ಬಳಸುತ್ತಾರೆ. ಇದು ಮೆಡಿಕಲ್ ಸ್ಟೋರ್ ಗಳಲ್ಲಿ ತುಂಬಾ ಸುಲಭವಾಗಿ ದೊರೆಯುತ್ತದೆ. ಆದರೆ ಅಮೆರಿಕ ಮತ್ತು ಯುರೋಪ್ ಇದನ್ನು ನಿಷೇಧಿಸಲಾಗಿದೆ. ಇದು ದೇಹದಿಂದ ಪ್ಲೇಟ್ಲೆಟ್ಗಳನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.

ಚ್ಯವನ್ ಪ್ರಶ್ಯ್ (Chyawan Prash): ಭಾರತದಲ್ಲಿ, ವಿಶೇಷವಾಗಿ ಚಳಿಗಾಲದಲ್ಲಿ ಒಂದು ಟೀಸ್ಪೂನ್ ಚ್ಯವನ್ಪ್ರಾಶ್ ತಿನ್ನಲಾಗುತ್ತದೆ. ಇದನ್ನು ಸಾಂಪ್ರದಾಯಿಕ ಭಾರತೀಯ ರೋಗನಿರೋಧಕ ವರ್ಧಕವಾಗಿ ತಿನ್ನಲಾಗುತ್ತದೆ. ಇದನ್ನು ಗಿಡಮೂಲಿಕೆಗಳು ಮತ್ತು ತುಪ್ಪದ ಮಿಶ್ರಣದಿಂದ ತಯಾರಿಸಲಾಗುತ್ತದೆ, ಜೊತೆಗೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ, ಕೆನಡಾದಲ್ಲಿ, ಚ್ಯವನ್ ಪ್ರಶ್ಯ್ ಮಾರಾಟ ಮತ್ತು ವಿತರಣೆಯನ್ನು 2005 ರಿಂದ ನಿಷೇಧಿಸಲಾಗಿದೆ. ಹೆಚ್ಚಿನ ಮಟ್ಟದ ಸೀಸ ಮತ್ತು ಪಾದರಸ ಇದರಲ್ಲಿದೆ ಎನ್ನಲಾಗುತ್ತದೆ.

Latest Videos

click me!