ಭಾರತದ ಈ ನಗರದಲ್ಲಿ ಮಾಂಸವನ್ನು ಮಾರಾಟ ಮಾಡುವುದು ಮಾತ್ರವಲ್ಲ, ಮಾಂಸವನ್ನು ತಿನ್ನುವುದು ಸಹ ಅಪರಾಧವಾಗಿದೆ. ಅಂದರೆ ಈ ನಗರದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಹಾಗಿದ್ರೆ ಮಾಂಸವನ್ನು ನಿಷೇಧಿಸುವಂತಹ ಸಾಧನೆ ಮಾಡಿದ ವಿಶ್ವದ ಮೊದಲ ನಗರ ಯಾವುದು ಅನ್ನೋದು ಗೊತ್ತಾ?
ಗುಜರಾತಿನ ಭಾವನಗರ ಜಿಲ್ಲೆಯ ಪಾಲಿಟಾನಾ (Palitana) ನಗರ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಿರ್ಧಾರದ ಅಡಿಯಲ್ಲಿ, ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು, ಮಾಂಸ ಮಾರಾಟ ಮತ್ತು ಸೇವನೆಯನ್ನು ಅಪರಾಧವೆಂದು ಘೋಷಿಸಲಾಗಿದೆ.
ಪಾಲಿಟಾನಾದಲ್ಲಿ ಮಾಂಸ ಮತ್ತು ಮೊಟ್ಟೆಗಳ (meat and eggs) ಮಾರಾಟವನ್ನು ಈಗ ನಿಲ್ಲಿಸಲಾಗಿದೆ ಮತ್ತು ಪ್ರಾಣಿಗಳ ಹತ್ಯೆಯನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆ ಮೂಲಕ ಪ್ರಾಣಿ ಹಿಂಸೆಯನ್ನು ಪರಿಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಮೊದಲ ನಗರವಾಗಿ ಹೊರಹೊಮ್ಮಿದೆ.
ಜೈನರೇ ಹೆಚ್ಚಾಗಿರುವ ಈ ನಗರದಲ್ಲಿ ಕಸಾಯಿಖಾನೆಗಳನ್ನು ಮುಚ್ಚುವಂತೆ ಒತ್ತಾಯಿಸಿ 200 ಜೈನ ಸನ್ಯಾಸಿಗಳು ನಿರಂತರ ಪ್ರತಿಭಟನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೈನ ಸನ್ಯಾಸಿಗಳ (Jain saints) ಹೋರಾಟ ಜೈನ ಧರ್ಮದ ಮುಖ್ಯ ತತ್ವವಾದ ಅಹಿಂಸೆಯ ಧಾರ್ಮಿಕ ಮತ್ತು ನೈತಿಕ ನಂಬಿಕೆಗಳನ್ನು ಆಧರಿಸಿದೆ.
ಮಾಂಸ ತಿನ್ನುವುದನ್ನು ವಿರೋಧಿಸುವವರು ಮಾಂಸದ ನೋಡುವುದು ಸಹ ಮಾನಸಿಕವಾಗಿ ತೊಂದರೆಯನ್ನುಂಟು ಮಾಡುತ್ತದೆ, ವಿಶೇಷವಾಗಿ ಮಕ್ಕಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಪಾಲಿಟಾನಾ ಜೈನ ಸನ್ಯಾಸಿಗಳು ಪ್ರತಿಭಟನೆ ನಡೆಸಿದ್ದರು. ಆದರ ನಂತ ಕೋರ್ಟ್ ಮಾಂಸಾಹಾರ ನಿಷೇಧಿಸುವಂತೆ ತೀರ್ಪು ನೀಡಿತ್ತು.
ಪಾಲಿಟಾನಾ ತೀರ್ಪಿನ ನಂತರ, ಗುಜರಾತ್ನ (Gujarat) ಇತರ ನಗರಗಳಾದ ರಾಜ್ಕೋಟ್, ವಡೋದರಾ, ಜುನಾಗಢ್ ಮತ್ತು ಅಹಮದಾಬಾದ್ ಸಹ ಇದೇ ರೀತಿಯ ನಿಯಮಗಳನ್ನು ಜಾರಿಗೆ ತಂದಿವೆ. ರಾಜ್ಕೋಟ್ನಲ್ಲಿ ಮಾಂಸಾಹಾರಿ ಆಹಾರ ತಯಾರಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಂಸವನ್ನು ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ.
ಶತ್ರುಂಜಯ ಬೆಟ್ಟಗಳಲ್ಲಿರುವ (Shatrunjaya Hills) 800 ಕ್ಕೂ ಹೆಚ್ಚು ಜೈನ ದೇವಾಲಯಗಳಿಗೆ ನೆಲೆಯಾಗಿರುವ ಪಾಲಿಟಾನಾವನ್ನು 'ಜೈನ ದೇವಾಲಯಗಳ ನಗರ' ಎಂದು ಕರೆಯಲಾಗುತ್ತದೆ. ಈ ನಗರದ ಆದಿನಾಥ ದೇವಾಲಯದಂತಹ ಪವಿತ್ರ ಸ್ಥಳಗಳು ಪ್ರತಿವರ್ಷ ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ, ಇದು ಪಾಲಿಟಾನಾದ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸುತ್ತದೆ.