ಬಿಳಿ ಮತ್ತು ಕೆಂಪು ಮಾಂಸ: ಯಾವುದಲ್ಲಿ ಪ್ರೊಟೀನ್ ಜಾಸ್ತಿ..? ಯಾವುದು ಆರೋಗ್ಯಕ್ಕೆ ಹೆಚ್ಚು ಸೂಕ್ತ

First Published | Oct 13, 2020, 6:37 PM IST

ಹೆಚ್ಚಿನ ಜನರು ಚಿಕನ್ ಮತ್ತು ಮಟನ್ ಮಾತ್ರ ತಿನ್ನುತ್ತಾರೆ. ಈ ಮಾಂಸಗಳಿಗಿರುವ ವ್ಯತ್ಯಾಸ ಮತ್ತು ಅದರ ಉಪಯೋಗಗಳನ್ನು ತಿಳಿಯೋಣ. 

ನೀವು ತಿನ್ನುವ ವಿವಿಧ ರೀತಿಯ ಮಾಂಸಗಳ ಬಗ್ಗೆ ನಿಮಗೇಷ್ಟು ಗೊತ್ತು? ಚಿಕನ್‌, ಮಟನ್‌, ಪೋರ್ಕ್‌ ಹಾಗೂ ಬೀಫ್‌ ಬಗ್ಗೆ ಇಲ್ಲಿದೆ ಮಾಹಿತಿ.
ಹಂದಿಮಾಂಸ, ಗೋಮಾಂಸ, ಕುರಿಮರಿ ಮಾಂಸವನ್ನು ಕೆಂಪು ಮಾಂಸ ಎಂದು ಕರೆಯಲಾಗುತ್ತದೆ. ಚಿಕನ್‌ ಮುಂತಾದ ಮಾಂಸವನ್ನು ಬಿಳಿ ಮಾಂಸ ಎಂದು ಕರೆಯಲಾಗುತ್ತದೆ.
Tap to resize

ರೆಡ್‌ ಮೀಟ್‌ ಹಾಗೂ ವೈಟ್‌ ಮೀಟ್‌ ಅಂದರೆ ಏನು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಕೆಂಪು ಮಾಂಸದಲ್ಲಿ ಮಯೋಗ್ಲೋಬಿನ್ ಪ್ರಮಾಣ ಹೆಚ್ಚು. ಮಯೋಗ್ಲೋಬಿನ್ ಮೂಲಕ ಆಮ್ಲಜನಕವು ಮಾಂಸವನ್ನು ತಲುಪುತ್ತದೆ, ಇದರಿಂದಾಗಿ ಮಾಂಸದ ಬಣ್ಣವು ಡಾರ್ಕ್‌ ಆಗಿರುತ್ತದೆ.
ಅದೇ ಬಿಳಿ ಮಾಂಸದಲ್ಲಿ ಮಯೋಗ್ಲೋಬಿನ್ ಇರುವುದಿಲ್ಲ. ಕೋಳಿ ಮಾಂಸ ಈ ಕ್ಯಾಟಗರಿಗೆ ಸೇರುತ್ತದೆ.
ಕೆಂಪು ಮಾಂಸ ಮತ್ತು ಬಿಳಿ ಮಾಂಸದಲ್ಲಿನ ಕೊಬ್ಬಿನ ಪ್ರಮಾಣಕ್ಕೂ ಭಾರಿ ವ್ಯತ್ಯಾಸವಿದೆ. ಚಿಕನ್‌ನಲ್ಲಿ ಕೊಬ್ಬಿನ ಪ್ರಮಾಣವು ತುಂಬಾ ಕಡಿಮೆಯಿದ್ದರೆ ಕೆಂಪು ಮಾಂಸದಲ್ಲಿನ ಫ್ಯಾಟ್‌ ತುಂಬಾ ಹೆಚ್ಚಾಗಿದೆ. ಇವು ಕೊಬ್ಬಿನ ಉತ್ತಮ ಮೂಲವಾಗಿದೆ.
ರೆಡ್‌ ಮೀಟ್‌ ಕಬ್ಬಿಣ, ಸತು, ವಿಟಮಿನ್ ಬಿ ಯಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಮಿನರಲ್ಸ್‌ ಅನ್ನು ದೇಹ ಬೇಗ ಹೀರಿಕೊಳ್ಳುತ್ತದೆ. ಆದರೆ ತರಕಾರಿಗಳಲ್ಲಿ ಇರುವ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
100 ಗ್ರಾಂ ಚಿಕನ್‌ನಲ್ಲಿ 197 ಕ್ಯಾಲೊರಿಗಳಿವೆ. ಆದರೆ ಇದರಲ್ಲಿ ಕೆಂಪು ಮಾಂಸಕ್ಕಿಂತ ಕಡಿಮೆ ವಿಟಮಿನ್ ಮತ್ತು ಪ್ರೋಟೀನ್ ಇರುತ್ತದೆ.
ಕ್ರೀಡಾಪಟುಗಳಿಗೆ ರೆಡ್‌ ಮೀಟ್‌ ತಿನ್ನಲು ಸೂಚಿಸಲಾಗುತ್ತದೆ.
ಜನರು ಪ್ರೋಟೀನ್‌ಗಾಗಿ ಚಿಕನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಕೆಂಪು ಮಾಂಸದಲ್ಲಿ ಹೆಚ್ಚು ಪ್ರೋಟೀನ್ ಇದ್ದರೂ, ನಮ್ಮ ದೇಹವು ಅದರಲ್ಲಿ ಕೇವಲ 74% ಮಾತ್ರ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ಚಿಕನ್‌ನಲ್ಲಿ 80 ಪ್ರೋಟೀನ್ ದೇಹಕ್ಕೆ ಹೋಗುತ್ತದೆ.
ಇವೆರಡರ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಜೀರ್ಣಕ್ರಿಯೆಗೆ ಬೇಕಾಗುವ ಸಮಯ.
ಕೆಂಪು ಮಾಂಸವು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಂಡರೆ, ಚಿಕನ್‌ ಸುಲಭವಾಗಿ ಜೀರ್ಣವಾಗುತ್ತದೆ.

Latest Videos

click me!