ಕಪ್ಪೆಳ್ಳು ಅದರಿಂದ ತಯಾರಿಸಲಾಗುವ ಎಣ್ಣೆಯಿಂದಲೇ ಹೆಚ್ಚ ಫೇಮಸ್. ಚಿಕ್ಕ ಬೀಜಗಳಂತಿರು ಕಪ್ಪೆಳಿನ ಗುಣಗಳು ಮಾತ್ರ ದೊಡ್ಡವು.
ನಿಮ್ಮ ಆಹಾರದಲ್ಲಿ ಕಪ್ಪೆಳ್ಳನ್ನು ಸೇರಿಸಲು ಮರೆಯಬೇಡಿ. ಅನ್ನ. ನೂಡಲ್ಸ್‌ನಲ್ಲಿಯೂ ಕಪ್ಪೆಳ್ಳನ್ನು ಸೇರಿಸಿಕೊಳ್ಳಬಹುದು.
ಐಸ್‌ಕ್ರೀಂ, ಯೋಗರ್ಟ್‌ನಲ್ಲಿಯೂ ನೀವು ಕಪ್ಪೆಳ್ಳು ಸೇರಿಸಬಹುದು. ಜಪಾನ್‌ನಲ್ಲಿ ಬೇಯಿಸಿದ ಸ್ನ್ಯಾಕ್ಸ್, ಹಸಿ ಆಹಾರದಲ್ಲಿಯೂ ಕಪ್ಪೆಳ್ಳು ಹಾಕಿ ಸರ್ವ್ ಮಾಡುತ್ತಾರೆ.
ಕೊರಿಯನ್ ಅಡುಗೆಯಲ್ಲಿ ಕಪ್ಪೆಳ್ಳು ಮಿಸ್ ಅಗುವುದಿಲ್ಲ. ತರಕಾರಿ ಹಾಗೂ ಸೀಫುಡ್‌ನಲ್ಲಿ ತಪ್ಪದೆ ಕಪ್ಪೆಳ್ಳು ಬಳಸುತ್ತಾರೆ.
ಕಪ್ಪೆಳ್ಳನ್ನು ಬಿಸಿ ಬೆಲ್ಲದ ಜೊತೆ ಸೇರಿಸಿ ಎಳ್ಳುಂಡೆಯನ್ನೂ ಮಾಡಿ ಸ್ನ್ಯಾಕ್ಸ್‌ನಂತೆ ಸೇವಿಸುತ್ತಾರೆ.
ಭಾರತದಲ್ಲಿಯೂ ಕಪ್ಪೆಳ್ಳು ಹಾಗೂ ಕಪ್ಪೆಳ್ಳಿನ ಎಣ್ಣೆಯನ್ನು ಜನ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.
ಆಫ್ರಿಕಾದಲ್ಲಿ ಕಪ್ಪೆಳ್ಳನ್ನು ಸಿಮ್‌ಸಿಮ್ ಎಂದು ಕರೆಯುತ್ತಾರೆ.
ಮಣಿಪುರದಲ್ಲಿ ಕಪ್ಪೆಳ್ಳನ್ನು ಸಲಾಡ್‌ಗಳಲ್ಲಿಯೂ ಬಳಸುತ್ತಾರೆ. ಅಸ್ಸಾಂನಲ್ಲಿ ಬಿಹು ಹಬ್ಬದ ಸಂದರ್ಭ ಕಪ್ಪೆಳ್ಳಿನ ಸ್ವೀಟ್ ಬಾಲ್‌ಗಳನ್ನು ಮಾಡುತ್ತಾರೆ.
ತಜ್ಞರ ಪ್ರಕಾರ ಕಪ್ಪೆಳ್ಳು ಸೇವನೆಯಿಂದ ಹೆಚ್ಚು ಎನರ್ಜಿ ಸಿಗುತ್ತದೆ. ಇದರಲ್ಲಿ ಆರೋಗ್ಯಕರ ಫಾಟ್ ಕೂಡಾ ಅಡಕವಾಗಿದೆ.
ಇದರಲ್ಲಿ ಫೈಬರ್, ಕಾಲ್ಶಿಯಂ, ಮ್ಯಾಗ್ನಾಶಿಯಂ, ಫೋಸ್ಪರಸ್, ಕಬ್ಬಿಣಂಶವೂ ಇದೆ.
ಕಪ್ಪೆಳ್ಳಿನಲ್ಲಿರುವ ಪ್ರೋಟೀನ್ ವಯಸ್ಸಾಗುವಾಗ ಉಂಟಾಗುವ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿರುತ್ತದೆ. ತಲೆಗೂದಲು ಬಿಳಿಯಾಗುವುದು, ಕೂದಲುದುರುವು, ಶ್ರವಣ ಶಕ್ತಿ, ನೆನಪಿನ ಶಕ್ತಿಯ ತೊಂದರೆ ಪರಿಹಾರಕ್ಕೂ ಕಪ್ಪೆಳ್ಳು ಸಹಕಾರಿ. ಕಪ್ಪೆಳ್ಳಿನಲ್ಲಿ ವಿಟಮಿನ್ ಬಿ ಹಾಗೂ ಕಬ್ಬಿಣಂಶವಿದ್ದು ಇದು ಆರೋಗ್ಯಕ್ಕೆ ಸಹಕಾರಿ.
ಕ್ಯಾನ್ಸರ್‌ನ ತೀವ್ರತೆಯನ್ನು ಕಡಿಮೆ ಮಾಡಬಲ್ಲದು: ಕಪ್ಪೆಳ್ಳಿನಲ್ಲಿರುವ ಸೇಸಮಿನ್ ಅಂಶ ಲಿವರ್ ಸಂರಕ್ಷಿಸುತ್ತದೆ. ಇದರಲ್ಲಿ ಫೈಬರ್ ಹೆಚ್ಚಿದ್ದು, ಇದು ಕೊಲೊನ್ ಕ್ಯಾನ್ಸರ್‌ನಿಂದ ರಕ್ಷಿಸಬಹುದು.
ರಕ್ತದೊತ್ತಡ ಸುಸ್ಥಿರ: ಕಪ್ಪೆಳ್ಳು ನಿಮ್ಮ ಒತ್ತಡವನ್ನು ನಿಯಂತ್ರಿಸುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.
ಮಲಬದ್ಧತೆ, ಅಜೀರ್ಣ ತಡೆಯುತ್ತದೆ: ಕಪ್ಪು ಎಳ್ಳು ಬೀಜವು ಹೆಚ್ಚಿನ ಫೈಬರ್ ಅಂಶ ಮತ್ತು ಆರೋಗ್ಯಕರ ಕೊಬ್ಬಿನಾಂಶ ಮಲಬದ್ಧತೆ ಗುಣಪಡಿಸುತ್ತದೆ. ಇದರಲ್ಲಿರುವ ಎಣ್ಣೆ ನಿಮ್ಮ ಕರುಳಿನ ಆರೋಗ್ಯಕ್ಕೆ ಸಹಕಾರಿ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
ಎಲುಬುಗಳ ಆರೋಗ್ಯ: ಆಸ್ಟಿಯೊಪೊರೋಸಿಸ್ ಎನ್ನುವುದು ದುರ್ಬಲವಾದ ಎಲುಬಿನ ಸಮಸ್ಯೆಗೆ ಕಾರಣವಾಗುತ್ತದೆ. 35 ವರ್ಷದ ನಂತರ ಎಲುಬಿನ ಶಕ್ತಿ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಎಲುಬು ಸವೆತ ಹೆಚ್ಚು ವೇಗವಾಗಿ ಸಂಭವಿಸುತ್ತದೆ. ಎಲುಬಿನ ಬಲಕ್ಕೆ ಕಪ್ಪೆಳ್ಳು ಸೇವಿಸಬೇಕು