ಶಿವ ದೇವಾಲಯದಲ್ಲಿ ನಂದಿಯ ಕುಳಿತಿರುವ ಪ್ರತಿಮೆ ಏಕೆ ಇದೆ?

First Published Jun 23, 2023, 5:24 PM IST

ಶಿವನ ದೇವಾಲಯದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಿವ ಇದ್ದರೆ ನಂದಿ ಇರಲೇಬೇಕು ಅಲ್ವಾ? ಆದರೆ ಯಾವಾಗಲೂ ಶಿವಾಲಯಗಳಲ್ಲಿ ಕುಳಿತಿರುವ ನಂದಿಯ ವಿಗ್ರಹ ಏಕೆ ಇದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ಶಿವ ದೇವಾಲಯದಲ್ಲಿ ನಿಂತಿರುವ ನಂದಿಯ ವಿಗ್ರಹ ಏಕೆ ಇಲ್ಲ? ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳೋಣ. 

ನಂದಿಯನ್ನು ಪ್ರತಿಷ್ಠಾಪಿಸದ ಯಾವುದೇ ಶಿವಾಲಯವಿಲ್ಲ. ಪ್ರತಿ ಶಿವ ದೇವಾಲಯದಲ್ಲಿ, ನಂದಿಯ ವಿಗ್ರಹವನ್ನು (Nandi statue) ಪೂಜಿಸಲಾಗುತ್ತದೆ. ಶಿವ ಇದ್ದೆಡೆ ಅಲ್ಲಿ ನಂದಿಗೂ ಸ್ಥಾನವಿದೆ. ಶಿವನ ಜೊತೆಗೆ ದೇಗುಲಗಳಲ್ಲಿ ನಂದಿಗೂ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ. ಈ ದೇಗುಲಗಳಲ್ಲಿ ನಂದಿ ಕುಳಿತುಕೊಂಡೇ ಇರೋದು ಯಾಕೆ? ಯಾಕೆ ನಂದಿಯ ನಿಂತಿರುವ ವಿಗ್ರಹ ಇರೋದಿಲ್ಲ. ಬನ್ನಿ ಈ ಬಗ್ಗೆ ತಿಳಿಯೋಣ. 
 

ಪುರಾಣ ಕಥೆಯ ಪ್ರಕಾರ, ಶಿಲಾಧ ಋಷಿಯ ತಪಸ್ಸಿನಿಂದ ಸಂತೋಷಗೊಂಡ ಶಿವನು ಅವನಿಗೆ ಪುತ್ರನ ವರ ನೀಡಿದನು. ಶಿಲಾಧ ಮುನಿಯ ಮಗನನ್ನು ನಂದಿ ಎಂದು ಕರೆಯಲಾಗುತ್ತಿತ್ತು, ಅವನು ಶಿವನ (Lord Shiva) ಪರಮ ಭಕ್ತನಾದನು, ಗಣಗಳಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದನು ಮತ್ತು ಮಹಾದೇವನ ವಾಹನವಾಗಿದ್ದ.
 

Latest Videos


ನಂದಿಯ ಭಕ್ತಿಯಿಂದ ಸಂತೋಷಗೊಂಡ ಶಿವ ಪ್ರತಿ ಶಿವ ದೇವಾಲಯದಲ್ಲಿಯೂ (Shiva Temple) ನಂದಿಯ ಪ್ರತಿಮೆ ಇರುತ್ತೆ ಎನ್ನುವ ವರವನ್ನೂ ನೀಡಿದ. ಈ ಕಾರಣಕ್ಕಾಗಿಯೇ ನಂದಿಯನ್ನು ಭೇಟಿ ಮಾಡದೇ ಮತ್ತು ಪೂಜಿಸದೆ ಶಿವನ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ನಂದಿಯನ್ನು ಶಿವಲಿಂಗದ ಮುಂದೆ ಪ್ರತಿಷ್ಠಾಪಿಸಲಾಗುತ್ತದೆ ಎನ್ನುವ ವರವನ್ನು ಪಡೆದಾಗ, ಅವನು ತಕ್ಷಣ ಶಿವನ ಮುಂದೆ ಕುಳಿತನು. 
 

ಕುಳಿತಿರುವ ನಂದಿಯ ಪ್ರತಿಮೆಯು ಭಕ್ತಿ ಮತ್ತು ಸಮರ್ಪಣೆಯನ್ನು ತೋರಿಸುತ್ತದೆ. ಅದೇ ಸಮಯದಲ್ಲಿ, ನಿಂತಿರುವ ಪ್ರತಿಮೆಯು ಅಹಂನ ಸಂಕೇತ. ನಂದಿಯ ಕಿವಿಯಲ್ಲಿ ಹೇಳಿದಂತಹ ಪ್ರಾರ್ಥನೆ ಬೇಗನೆ ಶಿವನನ್ನು ತಲುಪುತ್ತದೆ ಎನ್ನಲಾಗುತ್ತದೆ. ಹಾಗಾಗಿ ಭಕ್ತರಿಗೆ ತಲುಪುವ ಹಾಗೆ ನಂದಿ ಕುಳಿತಿರುತ್ತಾನೆ. 

ಜನರು ತಮ್ಮ ಮಾತುಗಳನ್ನು ನಂದಿಯ ಕಿವಿಯಲ್ಲಿ ಸುಲಭವಾಗಿ ಹೇಳಲು, ನಂದಿ ಕುಳಿತುಕೊಳ್ಳುವ ಭಂಗಿಯನ್ನು ಆರಿಸಿಕೊಂಡನು ಎನ್ನಲಾಗಿದೆ. ಇನ್ನೊಂದು ನಂಬಿಕೆಯ ಪ್ರಕಾರ, ಕುಳಿತುಕೊಂಡರೆ ಶಿವನನ್ನು ಸರಿಯಾಗಿ ನೋಡಬಹುದು ಎನ್ನುವ ಕಾರಣಕ್ಕೆ ಈ ರೀತಿಯಾಗಿ ಪ್ರತಿಷ್ಠಾಪಿಸಲಾಯಿತು ಎನ್ನಲಾಗಿದೆ.  

ಶಿವ ದೇವಾಲಯದಲ್ಲಿ ಕುಳಿತಿರುವ ನಂದಿಯ ಪ್ರತಿಮೆಯು ಶಾಂತ ಸ್ವಭಾವ, ಶುದ್ಧ ಮತ್ತು ಶಾಂತ ಮನಸ್ಸು ಮತ್ತು ಸೌಮ್ಯ ನಡವಳಿಕೆಯನ್ನು ತೋರಿಸುತ್ತದೆ. ನಿಂತಿರುವ ನಂದಿಯ ಪ್ರತಿಮೆಯು ಕೋಪ, ಅಚಾತುರ್ಯ, ವಿಚಲಿತ ಮನಸ್ಸು ಮತ್ತು ಆಧ್ಯಾತ್ಮಿಕತೆಯಿಂದ ದೂರವನ್ನು ಪ್ರದರ್ಶಿಸುತ್ತದೆ. 
 

ನಂದಿಯು ಶಿವನಿಗೆ ಎಷ್ಟು ಪ್ರಿಯವಾಗಿದೆಯೆಂದರೆ, ಮಹಾದೇವನೊಂದಿಗೆ ನಂದಿ ಇಲ್ಲದ ಸ್ಥಳವಿಲ್ಲ ಎಂದು ನಂಬಲಾಗಿದೆ. ನಂದಿಯ ಮೂಲಕ ಶಿವನಿಗೆ ಸಲ್ಲಿಸುವ ಪ್ರತಿಯೊಂದು ಪ್ರಾರ್ಥನೆಯು ಖಂಡಿತವಾಗಿಯೂ ನೆರವೇರುತ್ತದೆ ಮತ್ತು ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ ಎಂದು ನಂಬಲಾಗಿದೆ. 
 

click me!