ಚೈತ್ರ ಹುಣ್ಣಿಮೆಯಂದು ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಮಸ್ಯೆಗಳೇ ತುಂಬಿರುತ್ತೆ!

First Published | Apr 22, 2024, 3:47 PM IST

ಚೈತ್ರ ಹುಣ್ಣಿಮೆಯಂದು ಚಂದ್ರ ದೇವರನ್ನು ಪೂಜಿಸಲು ಕೆಲವೊಂದು ನಿಯಮಗಳು ಇವೆ. ಈ ದಿನ ಚಂದ್ರನೊಂದಿಗೆ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಸಹ ಪೂಜಿಸಲಾಗುತ್ತದೆ. ಆದರೆ ಈ ದಿನ ನೀವು ಕೆಲವೊಂದು ತಪ್ಪು ಕಾರ್ಯಗಳನ್ನು ಮಾಡಿದ್ರೆ ಮುಂದೆ ನೀವು ದೊಡ್ಡ ನರಕವನ್ನೇ ಅನುಭವಿಸಬೇಕಾಗಿ ಬರುತ್ತದೆ, ಹಾಗಾಗಿ ಜಾಗೃತರಾಗಿರೋದು ತುಂಬಾನೆ ಮುಖ್ಯ.
 

ಹಿಂದೂ ಹೊಸ ವರ್ಷದ ಮೊದಲ ಹುಣ್ಣಿಮೆ ಚೈತ್ರ ಮಾಸದಲ್ಲಿ ಬರುತ್ತದೆ. ಹಿಂದೂ ಕ್ಯಾಲೆಂಡರ್ (Hindu Calender) ಪ್ರಕಾರ, ಚೈತ್ರ ಪೂರ್ಣಿಮಾವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹನುಮಾನ್ ಜಯಂತಿಯನ್ನು (Hanuma Jayanti) ಸಹ ಈ ದಿನ ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬವು ಏಪ್ರಿಲ್ 23 ರಂದು ಬರುತ್ತದೆ. 
 

ಚೈತ್ರ ಪೂರ್ಣಿಮಾ (Chaitra Purnima) 2024 ಶುಭ ಮುಹೂರ್ತ
ಅಭಿಜಿತ್ ಮುಹೂರ್ತ - ಬೆಳಿಗ್ಗೆ 11:53 ರಿಂದ ಮಧ್ಯಾಹ್ನ 12:46
ಚಂದ್ರೋದಯ - ಸಮಯ ಸಂಜೆ 06:25
ಚಂದ್ರ ಪೂಜಾ ಸಮಯ - ಸಂಜೆ 06:25 ರಿಂದ

Tap to resize

ಚೈತ್ರ ಪೂರ್ಣಿಮೆಯಂದು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು (Goddess Lakshmi) ಪೂಜಿಸಿ, ಉಪವಾಸ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಇದನ್ನು ಮಾಡುವವರ ಎಲ್ಲಾ ದುಃಖಗಳು ನಿವಾರಣೆಯಾಗುತ್ತವೆ. ಅಲ್ಲದೆ, ಶುಭ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಒಂದು ವೇಳೆ ಈ ದಿನ ಕೆಲವು ಕೆಲಗಳನ್ನು ಮಾಡಿದ್ರೆ, ಅದರಿಂದ ಆ ವ್ಯಕ್ತಿಯು ಜೀವನದಲ್ಲಿ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಚೈತ್ರ ಪೂರ್ಣಿಮೆಯ ದಿನದಂದು ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂದು ತಿಳಿಯೋಣ.

ಈ ಕೆಲಸವನ್ನು ಮಾಡಬೇಡಿ
ಚೈತ್ರ ಹುಣ್ಣಿಮೆ ದಿನದಂದು, ತಾಮಸಿಕ್ ಮತ್ತು ಮಾಂಸಾಹಾರಿ ಆಹಾರಗಳನ್ನು (non vegetarian food) ಸೇವಿಸೋದನ್ನು ತಪ್ಪಿಸಿ. ಚೈತ್ರ ಹುಣ್ಣಿಮೆಯಂದು ತಾಮಸಿಕ್ ಆಹಾರ ಸೇವಿಸುವುದರಿಂದ ಮನುಷ್ಯನ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಈ ದಿನ ಮಹಿಳೆಯರು ಮತ್ತು ಹಿರಿಯರಿಗೆ ಅಗೌರವ ತೋರಬಾರದು.

ಚೈತ್ರ ಹುಣ್ಣಿಮೆ ದಿನದಂದು ಬೆಳಿಗ್ಗೆ ತಡವಾಗಿ ಎದ್ದೇಳಬೇಡಿ. ಹುಣ್ಣಿಮೆಯ ದಿನದಂದು, ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿದ ನಂತರ, ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಿ.

ತುಳಸಿ ಭಗವಾನ್ ವಿಷ್ಣುವಿಗೆ ತುಂಬಾ ಪ್ರಿಯವಾದ ವಸ್ತು. ಆದ್ದರಿಂದ, ಹುಣ್ಣಿಮೆಯ ದಿನದಂದು ತುಳಸಿ ಎಲೆಗಳನ್ನು (tulsi leaves) ಕಿತ್ತು ಕೊಳ್ಳಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ವಿಷ್ಣುವಿಗೆ ಕೋಪ ಬರುತ್ತದೆ ಎನ್ನುವ ನಂಬಿಕೆ ಕೂಡ ಇದೆ. 
 

ಇದಲ್ಲದೆ, ಹುಣ್ಣಿಮೆಯ ರಾತ್ರಿ ಮೊಸರು (curd) ತಿನ್ನಬಾರದು. ಇದು ಚಂದ್ರ ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ತಪ್ಪು ಸಹ ಮಾಡಬೇಡಿ. 
 

Latest Videos

click me!