ಕೇರಳದಲ್ಲಿ ಓಣಂ ಸಂಭ್ರಮ: ಪ್ರಜೆಗಳ ನೋಡಲು ಬರ್ತಿದ್ದಾನೆ ಮಾವೇಲಿ..!

First Published | Aug 29, 2020, 4:45 PM IST

ದೇವರ ಸ್ವಂತ ನಾಡು ಕೇರಳದಲ್ಲಿ ಸಂಬ್ರಮದಿಂದ ಆಚರಿಸುವ ಹಬ್ಬ ಓಣಂ. ಹೂವಿನ ರಂಗೋಲಿ, ಓಣಂ ಸದ್ಯ, ಓಣಂ ವಿಭವ(ಅಡುಗೆ) ಹಬ್ಬದ ವಿಶೇಷತೆ.

ಕೇರಳದಲ್ಲಿ ಹಬ್ಬದ ಸಂಭ್ರಮ ಆರಂಭವಾಗಿದೆ. ಓಣಂ ಹಬ್ಬದ ವಿಶೇಷತೆಗಳೇನೇನು..? ಇಲ್ಲಿ ನೊಡೋಣ
undefined
ಕ್ರಶ್ಚಿಯನ್ ಸಮುದಾಯ ತೆನೆ ಹಬ್ಬ ಆಚರಿಸುವಂತೆಯೇ ಓಣಂ ಕೂಡಾ ಹಿಂದೂಗಳ ಆಚರಿಸುವ ಕೊಯ್ಲು ಹಬ್ಬ.
undefined

Latest Videos


ಮಲಯಾಳಂ ಕ್ಯಾಲೆಂಡರ್‌ನ ಚಿಂಗಮಾಸಂನಲ್ಲಿ(ಸಾಧಾರಣವಾಗಿ ಆಗಸ್ಟ್-ಸೆಪ್ಟೆಂಬರ್‌ನಲ್ಲಿ) 22ನೇ ನಕ್ಷತ್ರ ತಿರುಓಣಂನಂದು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
undefined
ರಾಜ ಮಹಾಬಲಿಯ ನೆನಪಿಗಾಗಿ ಈ ಹಬ್ಬ ಆಚರಿಸುತ್ತಾರೆ ಎಂದೂ ಹೇಳಲಾಗುತ್ತದೆ. ಮಾವೇಲಿ ಎಂದು ಕರೆಯಲ್ಪಡುವ ಮಹಾಬಲಿ ಓಣಂನ ವಿಶೇಷ ಆಕರ್ಷಣೆ. ಹಬ್ಬದ ಸಮಯದಲ್ಲಿ ಮಾವೇಲಿ ಮನೆಗೆ ಬಂದು ಹರಸುತ್ತಾನೆಂಬುದು ನಂಬಿಕೆ
undefined
ದೇಶಾದ್ಯಂತ ಮಾತ್ರವಲ್ಲದೆ ಅರಬ್ ರಾಷ್ಟ್ರಗಳಲ್ಲಿ ನೆಲೆಸಿರುವವರೂ ಓಣಂಗೆ ಊರಿಗೆ ಮರಳುತ್ತಾರೆ. ಮಲಯಾಳಿಗಳಿಗೆ ಇದೊಂದು ರೀತಿ ವಾರ್ಷಿಕ ಹಬ್ಬ.
undefined
ವೆಲ್ಲಂ ಕಳಿ(ಬೋಟ್‌ ರೇಸ್), ಪುಲಿ ಕಳಿ(ಟೈಗರ್ ಡ್ಯಾನ್ಸ್), ಪೂಕ್ಕಳಂ(ರಂಗೋಲಿ), ಓನತ್ತಪ್ಪಂ(ಧಾರ್ಮಿಕ ಆಚರಣೆ), ಹಗ್ಗಜಗ್ಗಾಟ, ತುಂಬಿ ತುಳ್ಳಲ್(ಮಹಿಳೆಯರ ನೃತ್ಯ), ಓಣ ತುಳ್ಳ್(ಕಳರಿ) ಇವೆಲ್ಲವೂ ಹಬ್ಬದ ಭಾಗ.
undefined
ಕೇರಳದಲ್ಲಿ ಎಲ್ಲ ಧರ್ಮದವರೂ ಓಣಂ ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ. ಶಾಲೆ, ಕಾಲೇಜು, ಸರ್ಕಾರಿ ಕಚೇರಿ ಎಲ್ಲೆಡೆಯೂ ಹಬ್ಬ ಆಚರಿಸಲಾಗುತ್ತದೆ. ಮಕ್ಕಳಿಗೆ ಒಂದು ವಾರದ ರಜೆಯನ್ನೂ ನೀಡಲಾಗುತ್ತದೆ.
undefined
ಭತ್ತದ ಕೊಯ್ಲಿನ ಸಂದರ್ಭ ಆಚರಿಸಿಕೊಂಡು ಬಂದ ಹಬ್ಬ ಕೇರಳದ ಸಾಂಸ್ಕೃತಿಕ ಹಬ್ಬ.
undefined
ಹಿರಣ್ಯ ಕಷಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ ದೇವತೆಗಳನ್ನು ಸೋಲಿಸಿ ತ್ರಿಲೋಕವನ್ನೂ ವಶಪಡಿಸುತ್ತಾನೆ. ದೇವತೆಗಳು ಸಹಾಯಕ್ಕಾಗಿ ಮಹಾಬಲಿ ವಿರುದ್ಧ ಹೋರಾಡಲು ವಿಷ್ಣುವಿನ ಮೊರೆ ಹೋಗುತ್ತಾರೆ.
undefined
ಆದರೆ ವಿಷ್ಣು ಇದಕ್ಕೆ ನಿರಾಕರಿಸುತ್ತಾನೆ. ಕಾರಣ ಮಹಾಬಲಿ ಉತ್ತಮ ರಾಜನಾಗಿರುತ್ತಾನೆ. ಪ್ರಜೆಗಳ ಪಾಲಿಗೆ ದೇವರಾಗಿರುತ್ತಾನೆ. ಸ್ವತಃ ವಿಷ್ಣುವಿನ ಮಹಾಭಕ್ತನಾಗಿರುತ್ತಾನೆ.
undefined
ಓಣಂ ಸಂದರ್ಭ ಮಹಿಳೆಯರೂ ಪುರುಷರೂ ಸಂಭ್ರಮದಲ್ಲಿ ಹಗ್ಗಜಗ್ಗಾಟ, ಉಯ್ಯಾಲೆ ಆಟವನ್ನೂ ಆಡುತ್ತಾರೆ
undefined
ನಂತರ ವಟುವಿನ ರೂಪ ತಾಳಿದ ವಿಷ್ಣು ಮಹಾಬಲಿಯ ಬಳಿ ಬರುತ್ತಾನೆ. ಆಗ ರಾಜ ಮಹಾಬಲಿ ಏನು ಬೇಕಾದರೂ ಬೇಡು ಕೊಡುತ್ತೇನೆ ಎನ್ನುತ್ತಾನೆ. ಆದರೆ ವಾಮನ ಮೂರು ಹೆಜ್ಜೆಯಷ್ಟು ಭೂಮಿ ಬೇಕೆಂದು ಕೇಳುತ್ತಾನೆ. ಇದಕ್ಕೆ ಒಪ್ಪಿದ ರಾಜ ಮೂರು ಹೆಜ್ಜೆ ಜಾಗ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಅಚಾನಕ್‌ ಆಗಿ ವಾಮನನ ರೂಪ ಬೃಹದಾಕಾರವಾಗುತ್ತದೆ. ಒಂದು ಹೆಜ್ಜೆ ಆಕಾಶ, ಒಂದು ಹೆಜ್ಜೆ ಭೂಮಿಯಲ್ಲಿಡುತ್ತಾನೆ ವಾಮನ. ಇನ್ನೂ ಒಂದು ಹೆಜ್ಜೆಗೆ ಜಾಗವಿಲ್ಲದಾಗ ಮಹಾಬಲಿ ತನ್ನ ಶಿರದ ಮೇಲಿಡುವಂತೆ ಹೇಳುತ್ತಾನೆ.
undefined
ಈ ಮೂಲಕ ವಿಷ್ಣು ಮಹಾಬಲಿಯ ಶಿರದ ಮೇಲೆ ಕಾಲಿರಿಸಿ ಪಾತಾಳದಲ್ಲಿ ಮೂರನೇ ಹೆಜ್ಜೆ ಇಡುತ್ತಾನೆ. ವರ್ಷದಲ್ಲಿ ಒಂದು ಬಾರಿ ಬಂದು ತಾನು ಆಳುತ್ತಿದ್ದ ಜನ, ಪ್ರಜೆಗಳು, ಭೂಮಿ, ಕೃಷಿ ಎಲ್ಲವನ್ನೂ ನೋಡಿ ಹೋಗುವ ಅವಕಾಶ ಮಹಾಬಲಿಗೆ ನೀಡಿ ವಿಷ್ಣು ವರ ನೀಡುತ್ತಾನೆ.
undefined
ಓಣಂನಲ್ಲಿ ಅಚ್ಚಾರ್, ಅವಿಲು, ರಸಂ, ಶಕ್ರರವರಟ್ಟಿ,ಕೂಟುಕರಿ, ಪುಲಿಶೇರಿ, ಎರಿಶೇರಿ, ತೋರನ್, ಪಚ್ಚಡಿ, ಕಾಲನ್ ಸೇರಿ ಹಲವು ಬಗೆಯ ವಿಭಗಳನ್ನು ತಯಾರಿಸಲಾಗುತ್ತದೆ.
undefined
ಕೇರಳದ ನೆಹರೂ ಟ್ರೋಫಿ ವೆಳ್ಳಂಕಳಿ ದೇಶಾದ್ಯಂತ ಜನಪ್ರಿಯ. ಆದರೆ ಈ ಬಾರಿ ಕೊರೋನಾದಿಂದಾಗಿ ಇದನ್ನು ರದ್ದುಪಡಿಸಲಾಗಿದೆ.ಕಳೆದ ಬಾರಿ ನೆರೆಯಿಂದಾಗಿ ತತ್ತರಿಸಿದ ರಾಜ್ಯ ಓಣಂ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಅದ್ಧೂರಿ ಆಚರಣೆ ಮಾಡದೆ ಸರಳವಾಗಿ ಹಬ್ಬ ಆಚರಿಸಲಿದ್ದಾರೆ ಕೇರಳೀಯರು.
undefined
click me!