ತುಳಸೀಪೂಜೆ ಮಾಡಲು ಒಂದು ಕಾರಣ ಇದೆ. ಜಲಂಧರ ಒಬ್ಬ ರಾಕ್ಷಸ ಆತನ ಪತ್ನಿ ವೃಂದ ಪತಿವೃತೆ ವಿಷ್ಣುವಿನ ಪರಮ ಭಕ್ತೆ. ಅವಳ ವಿಷ್ಣು ಭಕ್ತಿ ಜಲಂಧರನನ್ನು ಯುದ್ಧದಲ್ಲಿ ರಕ್ಷಿಸುತ್ತಿತು. ಒಮ್ಮೆ ದೇವತೆಗಳೊಂದಿಗೆ ಯುದ್ಧ ನಡೆದಾಗ ದೇವತೆಗಳು ಸೋಲುವರು ಎಂದು ತಿಳಿದು ವಿಷ್ಣುವಿನ ಬಳಿ ಬಂದು ಸಹಾಯ ಕೇಳುತ್ತಾರೆ.
ತುಳಸೀಪೂಜೆ ಮಾಡಲು ಒಂದು ಕಾರಣ ಇದೆ. ಜಲಂಧರ ಒಬ್ಬ ರಾಕ್ಷಸ ಆತನ ಪತ್ನಿ ವೃಂದ ಪತಿವೃತೆ ವಿಷ್ಣುವಿನ ಪರಮ ಭಕ್ತೆ. ಅವಳ ವಿಷ್ಣು ಭಕ್ತಿ ಜಲಂಧರನನ್ನು ಯುದ್ಧದಲ್ಲಿ ರಕ್ಷಿಸುತ್ತಿತು. ಒಮ್ಮೆ ದೇವತೆಗಳೊಂದಿಗೆ ಯುದ್ಧ ನಡೆದಾಗ ದೇವತೆಗಳು ಸೋಲುವರು ಎಂದು ತಿಳಿದು ವಿಷ್ಣುವಿನ ಬಳಿ ಬಂದು ಸಹಾಯ ಕೇಳುತ್ತಾರೆ.
ಅವರಿಗೆ ಸಹಾಯ ಮಾಡಲು ಒಪ್ಪಿದ ವಿಷ್ಣು ಜಲಂಧರನ ರೂಪದಲ್ಲಿ ವೃಂದಳ ಬಳಿ ಬರುತ್ತಾನೆ. ಈ ಸಂದರ್ಭದಲ್ಲಿ ವೃಂದ ಜಲಂಧರನಿಗೆ ನೀಡಿದ ಜಯದ ಸಂಕಲ್ಪವನ್ನು ಅಲ್ಲೇ ಬಿಟ್ಟು ಜಲಂಧರನ ಕಾಲು ಮುಟ್ಟಲು ಬಂದಾಗ ಅದು ಜಲಂಧರನಲ್ಲ ವಿಷ್ಣುವೆಂದು ತಿಳಿದು ಸಾಲಿಗ್ರಾಮವಾಗು ಎಂದು ಶಾಪ ನೀಡುತ್ತಾಳೆ. ನಂತರ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಲು ವಿಷ್ಣು ಆಕೆಗೆ ತುಳಸಿಯಾಗಲು ವರನೀಡುತ್ತಾನೆ. ಹಾಗೂ ಅದೇ ಸಾಲಿಗ್ರಾಮದೊಂದಿಗೆ ವಿವಾಹವಾಗುವುದಾಗಿ ವರನೀಡುತ್ತಾರೆ.
ವಿಷ್ಣು ವೃಂದಾಳಿಗೆ ಪ್ರತಿ ವರ್ಷದ ಕೃಷ್ಣ ಏಕಾದಶಿ ದಿನ ಮದುವೆ ಆಗುವುದಾಗಿ ಮಾತು ಕೊಟ್ಟಿರುತ್ತಾರೆ. ಹಾಗಾಗಿ ಪ್ರತಿವರ್ಷ ತುಳಸಿ ಹಬ್ಬದ ದಿವಸ ವಿಷ್ಣು ಸಾಲಿಗ್ರಾಮವನ್ನಿಟ್ಟು ಪೂಜೆ ಮಾಡುತ್ತಾರೆ. ಹಾಗಾಗಿ ತುಳಸಿಗೆ ದೈವತ್ವ ಇ
ಸಾಮನ್ಯವಾಗಿ ಮನೆಯಲ್ಲಿ ಬೆಳೆಸುವ ಹಸಿರು ತುಳಸಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಐಶ್ವರ್ಯ ಮತ್ತು ಸಂತೋಷ ದೊರೆಯುತ್ತದೆ ಎಂದು ಹೇಳುತ್ತಾರೆ.
ದೀಪಾವಳಿಯಲ್ಲಿ ಪ್ರಾರಂಭವಾದ ಪೂಜೆ ಹನ್ನೆರೆಡು ದಿನಗಳ ಕಾಲ ನಡೆಯುತ್ತದೆ. ತುಳಸಿಕಟ್ಟೆಗೆ ಬಣ್ಣಗಳನ್ನು ಹಚ್ಚಿ ತಳಿರು ತೋರಣಗಳಿಂದ ಸುಂದರಗೊಳಿಸಿ ಕಟ್ಟೆಯ ಸುತ್ತ ದೀಪಗಳನ್ನಿಟ್ಟು ನೆಲ್ಲಿಯ ಗಿಡಗಳನ್ನು ನೆಟ್ಟು ಹೂಗಳಿಂದ ಅಲಂಕಾರ ಮಾಡಿ ಪೂಜೆಗೆ ಸಿದ್ಧಮಾಡಲಾಗುತ್ತದೆ.
ದಿನ ಭಜನೆಗಳ ಮೂಲಕ ತುಳಸಿಗೆ ಸುತ್ತುಹಾಕುತ್ತಾರೆ. ಗೋವಿಂದ ಗೋವಿಂದ ರಾಮ ಗೋವಿಂದ ನಾರಾಯಣ , ಗೋವಿಂದ ಗೋಪಾಲ ಕೃಷ್ಣ ಗೋವಿಂದ ನಾರಾಯಣ ಎಂದು ಹೇಳುತ್ತಾ ತಾಳ ಹಾಕುತ್ತ ತುಳಸಿಗೆ ಸುತ್ತು ಬಂದು ನಮಸ್ಕಾರ ಮಾಡುತ್ತಾರೆ. ತುಳಸಿಗೆ ನೈವೇದ್ಯವಾಗಿ ಅವಲಕ್ಕಿ, ಬೆಲ್ಲ ಇಡಲಾಗುವುದು. ಇದು ಬಹಳ ವಿಶೇಷವೆಂದು ಹೇಳುತ್ತಾರೆ.
ತುಳಸಿ ಪೂಜೆಯು ವಿಜೃಂಭಣೆಯಿಂದ ಮನೆಗಳಲ್ಲಿ , ದೇವಾಲಯಗಳಲ್ಲಿ ಮಾಡುತ್ತಾರೆ. ಈ ಪೂಜೆಗೆ ಹತ್ತಿಯ ಮಾಲೆ ಬಹಳ ವಿಶೇಷ. ಪೂಜೆಯ ವಿಧಿ ವಿಧಾನಗಳು ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ಇವೆ. ಕೆಲವರು ಮಂಟಪದ ರೀತಿ ತುಳಸಿ ಕಟ್ಟೆ ಸುತ್ತ ಕಟ್ಟಿ ಅಲಂಕಾರ ಮಾಡುತ್ತಾರೆ. ಕೊನೆಯ ದಿನವಾದ ಉತ್ಥಾನ ದ್ವಾದೇಶಿಯಂದು ವಿಜೃಂಭಣೆಯಿಂದ ಈ ಪೂಜೆ ನಡೆಯುತ್ತದೆ.
ದಕ್ಷಿಣ ಭಾರತದಲ್ಲಿ ಇದು ಬಹಳ ವಿಶೇಷ. ತುಳಸಿ ಪೂಜೆ ಮಾಡುವಾಗ ಉತ್ತರ ದಿಕ್ಕು ಅಥವಾ ಈಶಾನ್ಯದಲ್ಲಿ ಇಟ್ಟು ಪೂಜೆಮಾಡಬೇಕು. ಇದು ಬಹಳ ಒಳ್ಳೆಯದು ಅಲ್ಲದೆ ಒಣಗಿದ ತುಳಸಿಗಿಡವನ್ನು ಎಂದು ಇಡಬಾರದು. ತುಳಸಿಗಿಡದ ಸುತ್ತ ಮುಳ್ಳಿನಂತ ಗಿಡಗಳು ಬೆಳೆಯಬಾರದು. ಇದು ಮನೆಗೆ ಒಳ್ಳೆಯದಲ್ಲ.
ಪ್ರಭು ಧಾಮದ ಸೌನ್ಜ ಎಂಬ ಹಳ್ಳಿ ಯಲ್ಲಿ ಮೂರುದಿನ ಅಂದರೆ ಏಕಾದಶಿಯಿಂದ ತ್ರಯೋದಶಿವರೆಗೆ ತುಳಸಿಪೂಜೆಯನ್ನು ವಿಭಿನ್ನ ರೀತಿ ಮಾಡುತ್ತಾರೆ. ಮೊದಲ ದಿನ ರಾಮಾಯಣ ಓದುತ್ತಾರೆ. ಎರಡನೇ ದಿನ ಶೋಭಾಯಾತ್ರ , ಮೂರನೇದಿನ ತಿಲಕೋತ್ಸವ ಮತ್ತು ವಿಷ್ಣು ಮತ್ತು ತುಳಸಿಯ ವಿವಾಹ ಮಹೋತ್ಸವ ನಡೆಯುತ್ತದೆ.
ತುಳಸಿ ಹೆಣ್ಣಿನ ಮನೋ ಅಭಿಲಾಷೆಗಳನ್ನು ಪೂರ್ಣಗೊಳಿಸುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ತುಳಸಿ ಪೂಜೆ ಮಹಿಳೆಯರು ಮಾಡಿದರೆ ಬಹಳ ಒಳ್ಳೆಯದು ಎಂಬ ನಂಬಿಕೆ ಇದೆ.