ಭಗವಾನ್ ರಾಮನನ್ನು (Shri Rama) ಮರ್ಯಾದಾ ಪುರುಷೋತ್ತಮ ಎನ್ನಲಾಗುತ್ತೆ, ಆದರೆ ಶ್ರೀ ರಾಮನು ಲೋಕದ ಹಿತಕ್ಕಾಗಿ ಕೆಲವು ಕೆಲಸಗಳನ್ನು ಮಾಡಲೇಬೇಕಾಯಿತು, ಇದನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡ್ತಾರೆ.ಆದರೆ ಅದೆಲ್ಲವನ್ನು ಮಾಡೋದಕ್ಕೂ ಒಂದು ಕಾರಣ ಇದೆ. ದೇವರು ಎಂದಿಗೂ ಸಾಯುವುದಿಲ್ಲ ಎಂಬುದು ನಿಜ, ಬದಲಾಗಿ ದೇವರು ವೈಕುಂಠಕ್ಕೆ ಪ್ರಯಾಣಿಸುತ್ತಾನೆ, ಆದರೆ ದೇವರು ಮಾನವ ರೂಪದಲ್ಲಿ ಭೂಮಿಯ ಮೇಲೆ ಜನ್ಮ ಪಡೆದಾಗ, ಅವನು ಸೃಷ್ಟಿಯ ನಿಯಮಗಳ ಪ್ರಕಾರ ನಡೆಯಬೇಕು ಮತ್ತು ಜೀವನ ಮತ್ತು ಸಾವಿನ ಚಕ್ರದ ಮೂಲಕ ಹೋಗಬೇಕಾಗುತ್ತದೆ. ದ್ವಾಪರಯುಗದಲ್ಲಿ ಶ್ರೀ ಕೃಷ್ಣನ ಸಾವಿಗೆ ರಾಮಾಯಣ ಕಾಲದಲ್ಲಿ ಶ್ರೀ ರಾಮ ಅಂದು ಮಾಡಿದಂತಹ ಕೆಲಸ ಹೇಗೆ ಕಾರಣವಾಯಿತು ಎಂಬುದನ್ನು ತಿಳಿದುಕೊಳ್ಳೋಣ.
ಸೀತಾ ಮಾತೆಯ ಹುಡುಕಾಟದ ಸಮಯದಲ್ಲಿ, ಶ್ರೀ ರಾಮನಿಗೆ ಹನುಮಂತ ಸುಗ್ರೀವರೊಂದಿಗೆ ಸ್ನೇಹ
ಶ್ರೀ ರಾಮನು ಲಕ್ಷ್ಮಣನೊಂದಿಗೆ ಸೀತಾ ಮಾತೆಯನ್ನು ಹುಡುಕುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಾಗ, ಹನುಮಂತ ವೇಷ ಮರೆಸಿ ಶ್ರೀ ರಾಮನನ್ನು ಭೇಟಿಯಾದರು. ಆಂಜನೇಯನ ಬುದ್ಧಿವಂತಿಕೆ ಮತ್ತು ಮಾತನಾಡುವ ಕೌಶಲ್ಯವನ್ನು ನೋಡಿದ ಶ್ರೀ ರಾಮನು ಅವನು ಜ್ಞಾನಿ ಯೋಧನಾಗಿರಬೇಕು ಎಂದು ಅರ್ಥಮಾಡಿಕೊಂಡನು. ಶ್ರೀ ರಾಮನು ಲಕ್ಷ್ಮಣನಿಗೆ (Lakshmana) ಇವನು ಯಾರೋ ಜ್ಞಾನಿ ಯೋಧ, ಅವನು ನಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ ಎಂದು ಹೇಳಿದನು. ಇದರ ನಂತರ, ಹನುಮಂತ ತನ್ನ ನಿಜವಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಸುಗ್ರೀವ ಮತ್ತು ಅವನ ಇತರ ವಾನರ ಸೈನ್ಯದೊಂದಿಗೆ ಶ್ರೀ ರಾಮ ಮತ್ತು ಲಕ್ಷ್ಮಣರೊಂದಿಗೆ ಸ್ನೇಹ ಬೆಳೆಸುತ್ತಾನೆ.
ಸುಗ್ರೀವನ ಅಣ್ಣ ವಾಲಿಯನ್ನು ಕೊಂದ ಶ್ರೀರಾಮ
ಸ್ನೇಹಿತರಾದ ನಂತರ, ಸುಗ್ರೀವನು ತನ್ನ ಕಥೆಯನ್ನು ಶ್ರೀ ರಾಮನಿಗೆ ಹೇಳಿದನು. ಸುಗ್ರೀವ ಮತ್ತು ವಾಲಿ ಇಬ್ಬರೂ ಸಹೋದರರಾಗಿದ್ದರು. ಆದರೆ ವಾಲಿ ತನ್ನ ಶಕ್ತಿಗಳ ಬಗ್ಗೆ ತುಂಬಾ ಅಹಂಕಾರಿಯಾಗಿದ್ದನು. ಅವನು ತನ್ನ ಸಹೋದರ ಸುಗ್ರೀವನಿಂದ (Sugreeva) ಇಡೀ ರಾಜ್ಯವನ್ನು ಮತ್ತು ಹೆಂಡತಿಯನ್ನು ಕಸಿದುಕೊಂಡಿದ್ದನು. ವಾಲಿ ತನ್ನ ಹೆಸರಿಗೆ ತಕ್ಕಂತೆ ಬಹಳ ಶಕ್ತಿಶಾಲಿಯಾಗಿದ್ದನು ವಾಲಿ ಎಷ್ಟು ಶಕ್ತಿಶಾಲಿಯಾಗಿದ್ದ ಎಂದರೆ ಸೂರ್ಯ ಉದಯಿಸುವ ಮೊದಲು ದಣಿವಿಲ್ಲದೇ ಭೂಮಿಯನ್ನು ಸುತ್ತುತ್ತಿದ್ದನಂತೆ. ಈ ಶಕ್ತಿಯುತವಾದ ವಾಲಿಯನ್ನು ಸುಲಭವಾಗಿ ಮುಖಾಮುಖಿಯಾಗಿ ಸೋಲಿಸೋದು ತುಂಬಾನೆ ಕಷ್ಟ.
ಶ್ರೀ ರಾಮನು ಮಾನವ ರೂಪದಲ್ಲಿದ್ದನು, ಆದ್ದರಿಂದ ಅವನು ಪ್ರಕೃತಿಯ ಮಿತಿಗಳಿಗೆ ಬದ್ಧನಾಗಿದ್ದನು, ಆದ್ದರಿಂದ ವಾಲಿಯನ್ನು ಮೋಸದಿಂದ ಕೊಲ್ಲುವುದು ಶ್ರೀ ರಾಮನಿಗೆ ಅನಿವಾರ್ಯವಾಗಿತ್ತು. ಯಾವ ಯೋಧನು ತನ್ನೊಂದಿಗೆ ಹೋರಾಡಿದರೂ, ಅವನ ಅರ್ಧದಷ್ಟು ಶಕ್ತಿ ವಾಲಿಗೆ ಹೋಗುತ್ತದೆ ಎಂಬ ವರವನ್ನು ವಾಲಿ ಪಡೆದಿದ್ದನು. ವಾಲಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗದೇ ಇರೋದಕ್ಕೆ ಇದು ಕಾರಣವಾಗಿದೆ.
ವಾಲಿಯ ಶಕ್ತಿ ಮತ್ತು ವರದ ಬಗ್ಗೆ ಸುಗ್ರೀವನು ಶ್ರೀ ರಾಮನಿಗೆ ಹೇಳಿದಾಗ, ಯುದ್ಧದಲ್ಲಿ ಬಾಲಿಯನ್ನು ಸೋಲಿಸುವುದು ಅಸಾಧ್ಯವೆಂದು ಶ್ರೀರಾಮನು ಅರ್ಥಮಾಡಿಕೊಂಡನು. ಈ ಕಾರಣಕ್ಕಾಗಿ, ಸುಗ್ರೀವ, ಶ್ರೀ ರಾಮ ಮತ್ತು ಹನುಮಂತ ಸೇರಿದಂತೆ ಉಳಿದ ವಾನರ ಸೈನ್ಯ ಸೇರಿ ಬಾಲಿಯನ್ನು ರಹಸ್ಯವಾಗಿ ಮತ್ತು ಮೋಸವಾಗಿ ಕೊಲ್ಲಬೇಕೆಂದು ನಿರ್ಧರಿಸಿದರು. ವಾಲಿಯನ್ನು ಕೊಲ್ಲಲು ಒಂದು ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಯ ಪ್ರಕಾರ, ಸುಗ್ರೀವನು ವಾಲಿಗೆ ಯುದ್ಧ ಮಾಡುವಂತೆ ಸವಾಲು ಹಾಕಿದನು. ವಾಲಿ ಮತ್ತು ಸುಗ್ರೀವನ ಯುದ್ಧ ಪ್ರಾರಂಭವಾದಾಗ, ಶ್ರೀರಾಮನು ಮರದ ಹಿಂದೆ ಅಡಗಿಕೊಂಡು ವಾಲಿಯ ಮೇಲೆ ಬಾಣ ಬಿಟ್ಟನು. ಇದರಿಂದಾಗಿ ವಾಲಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದನು. ವಾಲಿ ನೆಲಕ್ಕೆ ಬಿದ್ದ ಕೂಡಲೇ, ಸುಗ್ರೀವ, ಶ್ರೀರಾಮ ಮತ್ತು ಎಲ್ಲಾ ಜನರು ವಾಲಿಯ ಬಳಿ ಬಂದರು.
ತನ್ನನ್ನು ಕೊಲ್ಲಲು ಶ್ರೀ ರಾಮನು ಮರದ ಹಿಂದೆ ಅಡಗಿಕೊಂಡು ತನ್ನ ಮೇಲೆ ದಾಳಿ ಮಾಡಿದ್ದಾನೆ ಎಂದು ವಾಲಿಗೆ ತಿಳಿದಾಗ, ಬಾಲಿಗೆ ತುಂಬಾ ನೋವಾಯಿತು. ಸಾಯುವಾಗ, ಬಾಲಿ ಶ್ರೀ ರಾಮನಿಗೆ ಕೇಳುತ್ತಾನೆ, "ಪ್ರಭು! ನನಗೆ ನಿಮ್ಮ ಮೇಲೆ ಯಾವುದೇ ದ್ವೇಷವಿರಲಿಲ್ಲ, ಆದರೆ ನೀವು ನನಗೆ ಇದನ್ನು ಏಕೆ ಮಾಡಿದ್ದೀರಿ? ನಿಮಗೆ ಸಹಾಯ ಬೇಕಾದರೆ, ನೀವು ನೇರವಾಗಿ ನನ್ನೊಂದಿಗೆ ಮಾತನಾಡಬೇಕಿತ್ತು. ಇಬ್ಬರು ಸಹೋದರರ ನಡುವಿನ ವಿವಾದವನ್ನು ನಿರ್ಧರಿಸುವಲ್ಲಿ ನೀವು ಬಂದಿದ್ದು ಸರಿಯಲ್ಲ, ಎಂದು ಹೇಳುತ್ತಲೇ ವಾಲಿ (Vaali) ಪ್ರಾಣ ಬಿಟ್ಟನು.
ಹಿಂದಿನ ಜನ್ಮದ ಕರ್ಮವನ್ನು ಶ್ರೀ ಕೃಷ್ಣ ಹೇಗೆ ಅನುಭವಿಸಿದನು?
ದ್ವಾಪರಯುಗದಲ್ಲಿ ಶ್ರೀ ರಾಮನು ಕೃಷ್ಣನಾಗಿ ಜನಿಸಿದನು. ಕುರುಕ್ಷೇತ್ರ ಯುದ್ಧದ ನಂತರ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿತ್ತು. ಅಂತಹ ರಕ್ತಸಿಕ್ತ ಯುದ್ಧವು ಜನರ ಆತ್ಮಸಾಕ್ಷಿಯನ್ನು ಕಸಿದುಕೊಂಡಿತ್ತು ಮತ್ತು ಜನರ ಮನಸ್ಸನ್ನು ನಕಾರಾತ್ಮಕ ಭಾವನೆಗಳಿಂದ (negative feeling) ತುಂಬಿತ್ತು. ದ್ವಾರಕಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಹಳ ಪ್ರಕ್ಷುಬ್ಧ ವಾತಾವರಣವಿತ್ತು. ಇದೆಲ್ಲವನ್ನೂ ನೋಡಿದ ಶ್ರೀ ಕೃಷ್ಣನು ಕಲಿಯುಗವು ಮುಂದೆ ಬರಲಿದೆ ಎಂದು ತಿಳಿದಿದ್ದರಿಂದ ವಿಚಲಿತನಾದನು.
ಶ್ರೀ ಕೃಷ್ಣನು ಪ್ರಭಾಸ ನದಿಯ ದಡಕ್ಕೆ ಹೋಗಿ ವಿಶ್ರಾಂತಿ ಪಡೆಯಲು ಪ್ರಾರಂಭಿಸಿದನು. ಶ್ರೀ ಕೃಷ್ಣನು ಒಂದು ದಿನ ಮರದ ಬುಡದಲ್ಲಿ ಮಲಗಿದ್ದನು, ಶ್ರೀಕೃಷ್ಣನ ಕಾಲುಗಳನ್ನು ಜಿಂಕೆಯ ಕಿವಿ ಎಂದು ಭಾವಿಸಿದ್ದ ಬೇಡನೊಬ್ಬ ಬಾಣ ಬಿಟ್ಟನು. ಕಬ್ಬಿಣದ ರಾಡ್ ಇದ್ದಂತಹ ಹರಿತ ಬಾಣವು ಶ್ರೀಕೃಷ್ಣನ ಪಾದಕ್ಕೆ ತಾಕಿ, ವಿಷ ದೇಹಪೂರ್ತಿ ಹರಡುತ್ತದೆ. ತ್ರೇತಾಯುಗದಲ್ಲಿ ಶ್ರೀರಾಮನು ಮೋಸದಿಂದ ವಾಲಿಯನ್ನು ಕೊಂದಂತೆ, ಜಿಂಕೆ ಎಂದು ತಿಳಿದು ಬೇಡ ಬಿಟ್ಟ ಬಾಣದಿಂದಾಗಿ ಶ್ರೀಕೃಷ್ಣನು ಸಾವನಪ್ಪಿದನು.
ಶ್ರೀಕೃಷ್ಣನು ಪಂಚತತ್ವದಲ್ಲಿ ವಿಲೀನವಾದ ತಾಣ ಎಲ್ಲಿದೆ ಗೊತ್ತಾ?
ಬೇಡನ ಬಾಣದಿಂದ ಗಾಯಗೊಂಡ, ಕೃಷ್ಣನು ಭಾಲ್ಕಾ ತೀರ್ಥದಿಂದ ಸ್ವಲ್ಪ ದೂರದಲ್ಲಿರುವ ಜಿಂಕೆ ನದಿಯ ದಡವನ್ನು ತಲುಪಿದನು. ಕೃಷ್ಣನ ದೇಹವು ಈ ನದಿಯಲ್ಲಿ ವಿಲೀನಗೊಂಡಿತು ಎಂದು ನಂಬಲಾಗಿದೆ. ಶ್ರೀ ಕೃಷ್ಣನ ಭಕ್ತರು ಅವನನ್ನು ಹುಡುಕಿಕೊಂಡು ಬಂದಾಗ, ಶ್ರೀ ಕೃಷ್ಣನ ದೇಹವು ನದಿಯಲ್ಲಿ ತೇಲುತ್ತಿರುವುದನ್ನು ಕಂಡರು. ಶ್ರೀ ಕೃಷ್ಣನ ದೇಹವು ಪಂಚಭೂತಗಳಲ್ಲಿ ವಿಲೀನಗೊಂಡಿತು ಎಂದು ನಂಬಲಾಗಿದೆ ಆದರೆ ಅವನ ಹೃದಯದಿಂದ ಬೆಳಕು ಹೊರಹೊಮ್ಮುತ್ತಲೇ ಇತ್ತು ಎನ್ನಲಾಗಿದೆ. ನಂತರ ಅವರ ಹೃದಯವನ್ನು ಜಗನ್ನಾಥಪುರಿಯಲ್ಲಿರುವ ಶ್ರೀ ಕೃಷ್ಣನ ಪ್ರತಿಮೆಯೊಳಗೆ ಪ್ರತಿಷ್ಠಾಪಿಸಲಾಯಿತಂತೆ. ಪ್ರಸ್ತುತ ಸಮಯದ ಬಗ್ಗೆ ಹೇಳೋದಾದರೆ, ಜಿಂಕೆ ನದಿ ಸೋಮನಾಥದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಇನ್ನೂ ಶ್ರೀಕೃಷ್ಣನ ಪಾದಗಳ ಗುರುತುಗಳಿವೆ ಎನ್ನುವ ನಂಬಿಕೆಯೂ ಇದೆ. ಈ ಸ್ಥಳವನ್ನು ದೆಹೋತ್ಸರ್ಗ ತೀರ್ಥ ಎಂದೂ ಕರೆಯುತ್ತಾರೆ.