ಪೂಜೆಯ ನಡುವೆ ನೀರು ಕುಡಿಯೋದು ಎಷ್ಟು ಸರಿ?

First Published | Jun 3, 2023, 4:51 PM IST

ಆರಾಧನೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ, ಆದರೆ ಪೂಜೆಯ ಮಧ್ಯದಲ್ಲಿ ನೀರು ಕುಡಿಯೋದು ಎಷ್ಟು ಸರಿ ಅಥವಾ ತಪ್ಪು ಎಂದು ಕೆಲವೇ ಜನರಿಗೆ ತಿಳಿದಿದೆ. ಈ ವಿಷಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪ್ರತಿಯೊಬ್ಬರ ಮನೆಯಲ್ಲೂ ಪೂಜೆ(Pooja) ನಡೆಯುತ್ತೆ. ಆರಾಧನೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇಲ್ಲಿ ಜ್ಯೋತಿಷ್ಯ ತಜ್ಞರಿಂದ ಪೂಜೆ ಮಾಡುವಾಗ ಬಾಯಾರಿಕೆಯಾದ್ರೆ ನೀರು ಕುಡಿಯೋದು ಸರಿಯೇ ಅಥವಾ ತಪ್ಪೇ ಮತ್ತು ಅದರ ಹಿಂದಿನ ತರ್ಕವೇನು ಎಂಬುದನ್ನು ಇಲ್ಲಿ ತಿಳಿಯೋಣ.

ಹಿಂದೂ ಧರ್ಮಗ್ರಂಥಗಳಲ್ಲಿ, ಪೂಜೆಯ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಿವರವಾಗಿ ವಿವರಿಸಲಾಗಿದೆ. ಪೂಜೆ ಮಾಡುವಾಗ ಅಥವಾ ಮಂತ್ರಗಳನ್ನು(Mantra) ಹೇಳುವಾಗ ಬಾಯಾರಿಕೆಯಾದಾಗ ನೀರು ಕುಡಿಯಲು ಸಂಬಂಧಿಸಿದ ಮುನ್ನೆಚ್ಚರಿಕೆಗಳು ಇವುಗಳಲ್ಲಿ ಒಂದು. ಈ ವಿಷಯದಲ್ಲಿ ಧಾರ್ಮಿಕ ಮಾತ್ರವಲ್ಲದೆ ಜ್ಯೋತಿಷ್ಯ ವಾದಗಳೂ ಇವೆ.

Tap to resize

ಪೂಜೆಯ ಮಧ್ಯದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಧಾರ್ಮಿಕ ವಾದಗಳು
ಮಂತ್ರಗಳನ್ನು, ಶ್ಲೋಕಗಳನ್ನು(Shloka) ಪಠಿಸೋದು, ಆರತಿಯನ್ನು ಮಾಡೋದು, ಮಾಲೆಗಳನ್ನು ಮಾಡೋದು, ನಿಯಮಿತವಾಗಿ ಪೂಜೆ ಮಾಡೋದು ಅಥವಾ ವಿಶೇಷ ಆಚರಣೆ ಮುಂತಾದ ಪೂಜೆಗಳನ್ನು ಮಾಡುವಾಗ, ನಮ್ಮ ದೇಹವು ದೈವಿಕ ಶಕ್ತಿಯಿಂದ ಬಂಧಿಸಲ್ಪಟ್ಟಿದೆ ಎಂದು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.

ಆ ಸಮಯದಲ್ಲಿ ನೀರನ್ನು ಮುಟ್ಟಿದರೂ, ಆ ಶಕ್ತಿಯ ಸಂವಹನ ಮಧ್ಯದಲ್ಲಿ ಮುರಿದು ಹೋಗುತ್ತೆ ಮತ್ತು ಪೂಜೆಯ ಶುದ್ಧೀಕರಣವು ತೊಂದರೆಗೊಳಗಾಗುತ್ತೆ. ಆದ್ದರಿಂದ, ಧಾರ್ಮಿಕ ಗ್ರಂಥಗಳಲ್ಲಿ, ಪೂಜೆಯ ನಡುವೆ ನೀರು(Water) ಕುಡಿಯೋದನ್ನು ನಿಷೇಧಿಸಲಾಗಿದೆ, ಇದರಿಂದ ಆರಾಧನೆಯ ಪರಿಶುದ್ಧತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಬಹುದು.

ಜ್ಯೋತಿಷ್ಯ ತರ್ಕ
ಜ್ಯೋತಿಷ್ಯದ ಪ್ರಕಾರ, ಪೂಜೆಯ ಸಮಯದಲ್ಲಿ ಬಾಯಾರಿಕೆಯಾದಾಗ ನೀರು ಕುಡಿದರೆ, ಅದು ನಮ್ಮ ಗ್ರಹಗಳನ್ನು ದುರ್ಬಲಗೊಳಿಸುತ್ತೆ. ಪೂಜೆಯ ಮಧ್ಯದಲ್ಲಿ ನೀರಿನ ಸ್ಪರ್ಶವು ಚಂದ್ರ(Moon) ಗ್ರಹವನ್ನು ದುರ್ಬಲಗೊಳಿಸುತ್ತೆ ಮತ್ತು ಪೂಜಾ ಸ್ಥಳದ ಪಾವಿತ್ರ್ಯತೆಯ ಉಲ್ಲಂಘನೆಯು ರಾಹುವಿನ ಅಡ್ಡಪರಿಣಾಮಗಳನ್ನು ಹೆಚ್ಚಿಸುತ್ತೆ.

ಪೂಜೆಯ ಸಮಯದಲ್ಲಿ ಮಂತ್ರಗಳನ್ನು ನಿಲ್ಲಿಸೋದು ಮಂತ್ರ ದೋಷವಾಗಿದೆ (Dosha), ಅದು ಪೂಜೆಯ ಪೂರ್ಣ ಫಲವನ್ನು ನೀಡೋದಿಲ್ಲ. ಆದರೆ, ಮಂತ್ರಗಳನ್ನು ಪಠಿಸುವಾಗ ಗಂಟಲು ಒಣಗಿದ್ದರೆ, ನೀರು ಕುಡಿಯೋದು ತಪ್ಪಲ್ಲ ಎಂದು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ.

ನೀರನ್ನು ಹೇಗೆ ಕುಡಿಯಬೇಕು ಎಂಬುದರ ವಿವರಣೆಯೂ ಇದೆ. ಪೂಜೆಯ ಮಧ್ಯದಲ್ಲಿ ನಿಮಗೆ ಬಾಯಾರಿಕೆಯಾದರೆ, ಅದಕ್ಕಾಗಿ ಪ್ರತ್ಯೇಕ ನೀರಿನ ಪಾತ್ರೆಯನ್ನು ಇರಿಸಿ ಮತ್ತು ಆ ಪಾತ್ರೆಯಿಂದ ಒಂದು ಅಥವಾ ಎರಡು ಗುಟುಕು ನೀರನ್ನು ಮಾತ್ರ ಕುಡಿಯಿರಿ. ನೀರನ್ನು ಕುಡಿದ ನಂತರ, ಆ ಪಾತ್ರೆಯನ್ನು ದೂರವಿಡಿ ಮತ್ತು ಅದನ್ನು ಮತ್ತೆ ಶುದ್ಧೀಕರಿಸುವ(Purification) ಮೂಲಕ ಪೂಜೆಯನ್ನು ಪ್ರಾರಂಭಿಸಿ.
 

Latest Videos

click me!