ಮೇ 10 ರಂದು ಪರಶುರಾಮ ಜಯಂತಿ (Parashurama Jayanti). ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯದೊಂದಿಗೆ ಪರಶುರಾಮ ಜಯಂತಿಯನ್ನು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತ್ರಿತ್ಯ ತಿಥಿ ಮೇ 10, 2024 ರಂದು ಬೆಳಿಗ್ಗೆ 4:17 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಮೇ 11, 2024 ರಂದು ಮುಂಜಾನೆ 2:50 ಕ್ಕೆ ಕೊನೆಗೊಳ್ಳುತ್ತದೆ. ಪರಶುರಾಮ ಜಯಂತಿಯಂದು, ವಿವಿಧ ಸ್ಥಳಗಳಲ್ಲಿ ಅವರ ಹೆಸರಿನಲ್ಲಿ ಭಜನೆಗಳು, ಕೀರ್ತನೆಗಳು ಮತ್ತು ಪಠಣಗಳನ್ನು ಸಹ ಆಯೋಜಿಸಲಾಗುತ್ತದೆ.
ಪರಶುರಾಮ ಜಯಂತಿಯನ್ನು ಏಕೆ ಆಚರಿಸಲಾಗುತ್ತದೆ
ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯದ ದಿನದಂದು ಜನಿಸಿದನು. ಹುಟ್ಟಿದಾಗ ಅವನಿಗೆ ರಾಮ ಎಂದು ಹೆಸರಿಡಲಾಯಿತು. ಸ್ವಲ್ಪ ಸಮಯದ ನಂತರ, ಮಹಾದೇವನು ಪರಶು (Parashu) ಎಂಬ ಆಯುಧವನ್ನು ರಾಮನಿಗೆ ನೀಡಿದಾಗ, ರಾಮನನ್ನು ಪರಶುರಾಮ ಎಂದು ಕರೆಯಲಾಯಿತು. ಪರಶುರಾಮ ಜಯಂತಿಯನ್ನು ಪರಶುರಾಮರ ಜನ್ಮದಿನದಂದು ಆಚರಿಸಲಾಗುತ್ತದೆ.
ಭಗವಾನ್ ಪರಶುರಾಮ ಯಾರು?
ಭಗವಾನ್ ಪರಶುರಾಮನನ್ನು ಭಾರ್ಗವ ರಾಜವಂಶದಲ್ಲಿ ಜನಿಸಿದ ವಿಷ್ಣುವಿನ (Lord Vishnu) ಆರನೇ ಅವತಾರವೆಂದು ಪರಿಗಣಿಸಲಾಗಿದೆ. ಅವರು ತ್ರೇತಾಯುಗದಲ್ಲಿ ಜನಿಸಿದರು. ಭಗವಾನ್ ಪರಶುರಾಮನು ಅಕ್ಷಯ ತೃತೀಯದ ದಿನದಂದು ಜನಿಸಿದನೆಂದು ಹೇಳಲಾಗುತ್ತೆ. ಹಾಗಾಗಿಯೇ ಕ್ಷಯವಾಗದಂತಹ ಶಕ್ತಿಯನ್ನು ಹೊಂದಿರುವವನು ಪರಶುರಾಮ ಎನ್ನುವ ನಂಬಿಕೆ ಇದೆ.
ಪರಶುರಾಮ ಜನಿಸಿದಾಗ, ಅವನ ಹೆಸರು ರಾಮ, ಆದರೆ ನಂತರ ಅವನು ಶಿವನಿಂದ (Lord Shiva) ಅನೇಕ ವಿಶಿಷ್ಟ ಆಯುಧಗಳನ್ನು ಪಡೆದನು. ಮಹಾದೇವನು 'ರಾಮ'ನಿಗೆ ಕೊಡಲಿ ಎಂದೂ ಕರೆಯಲ್ಪಡುವ ಪರಶುವನ್ನು ಉಡುಗೊರೆಯಾಗಿ ನೀಡಿದನು. ಪರಶುವನ್ನು ಪಡೆದ ನಂತರ, ಅವನಿಗೆ ಪರಶುರಾಮ ಎಂದು ಹೆಸರಿಸಲಾಯಿತು, ಅಂದರೆ ಪರಶುವನ್ನು ಹಿಡಿದಿರುವ ರಾಮ. ಅಂದಿನಿಂದ ಅವನನ್ನು ಪರಶುರಾಮ ಎಂದು ಕರೆಯಲಾಯಿತು.
ಭಗವಾನ್ ವಿಷ್ಣು ಪರಶುರಾಮನಾಗಿ ಯಾಕೆ ಜನಿಸಿದನು ಎನ್ನುವ ಪ್ರಶ್ನೆ ನಿಮಗೂ ಕಾಡುತ್ತದೆ ಅಲ್ವಾ? ಇದಕ್ಕೆ ಉತ್ತರ ಇಲ್ಲಿದೆ. ಭೂಮಿ ಮೇಲಿನ ಸಂತರು ಮತ್ತು ಋಷಿಮುನಿಗಳನ್ನು ರಕ್ಷಿಸಲು ವಿಷ್ಣು ಪರಶುರಾಮನಾಗಿ ಜನಿಸಿದನೆಂದು ನಂಬಲಾಗಿದೆ. ಪ್ರಶುರಾಮ ತನ್ನ ಶಕ್ತಿಯಿಂದ ಸಂತರನ್ನು ರಕ್ಷಿಸುತ್ತಾ ಬಂದಿದ್ದಾನೆ.
ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಮಂತ್ರ ಪಠಿಸಿ
ಪರಶುರಾಮ ಜಯಂತಿಯಂದು ಭಗವಾನ್ ಪರಶುರಾಮನನ್ನು ಸ್ತುತಿಸಬಹುದು. ಭಗವಾನ್ ಪರಶುರಾಮನನ್ನು ಪೂಜಿಸುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಳಗೆ ಬರೆದಿರುವ ಮಂತ್ರವನ್ನು ಓದುವ ಮೂಲಕ ಭಗವಾನ್ ಪರಶುರಾಮನನ್ನು ನೆನೆಯಬಹುದು.
ಓಂ ಜಮದಗ್ನ್ಯಾಯ ವಿದ್ಮಾಹೆ ಮಹಾವೀರರಾಯ ಧೀಮಹಿ ತನ್ನೋ ರಾಮತ್ ಪ್ರಚೋದಾಯತ್.
ಓಂ ಪರಶುರಾಮಾಯ ನಮಃ
ಓಂ ಕ್ಲಿಮ್ ಪರಶುರಾಮಾಯ ನಮಃ
ಓಂ ಹ್ರೀಂ ಶ್ರೀಂ ಪರಶುರಾಮ ಧರಣೇಂದ್ರಾಯ ನಮಃ
ಓಂ ರಿನಾರ್ತಾಯ ಪರಶುರಾಮಾಯ ನಮಃ