ಹಿಂದೂ ಧರ್ಮದಲ್ಲಿ ಜುಟ್ಟು ಬಿಡುವುದರ ಹಿಂದಿನ ಮಹತ್ವವೇನು?

First Published | Jun 15, 2023, 1:11 PM IST

ತಲೆಯ ಮೇಲೆ ಸಣ್ಣ ಜುಟ್ಟು ಅಥವಾ ಜಡೆ ಇಟ್ಟುಕೊಂಡಿರುವ ಅನೇಕ ಪುರುಷರನ್ನು ನೀವು ನೋಡಿರಬಹುದು. ಹಿಂದೂ ಧರ್ಮದಲ್ಲಿ ಈ ರೀತಿ ಜುಟ್ಟು ಇಟ್ಟುಕೊಳ್ಳೋದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಆದರೆ ಜುಟ್ಟು ಇಡುವ ಮೊದಲು ಕೆಲವು ನಿಯಮಗಳನ್ನು ಅನುಸರಿಸಲಾಗುತ್ತೆ. ಈ ಬಗ್ಗೆ ತಿಳಿಯೋಣ.. 

ಹಿಂದೂ ಧರ್ಮದಲ್ಲಿ (Hindu Religion) ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ಅನೇಕ ನಿಯಮಗಳಿವೆ. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿಯಮಗಳ ಬಗ್ಗೆ ಮಾತನಾಡುವುದಾದರೆ, ಅವು ವಿಜ್ಞಾನಕ್ಕೂ ಸಂಬಂಧಿಸಿವೆ. ಸನಾತನ ಧರ್ಮದಲ್ಲಿನ ಅಂತಹ ಒಂದು ನಿಯಮವೆಂದರೆ ಪುರುಷರು ತಲೆಯಲ್ಲಿ ಜುಟ್ಟು ಇಟ್ಟುಕೊಳ್ಳುವುದು. ಇದರ ಹಿಂದಿನ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳೋಣ.
 

ಜುಟ್ಟು ಅಥವಾ ಶಿಖೆ ಹೊಂದುವ ಮಹತ್ವವೇನು?
ಹಿಂದೂ ಧರ್ಮದಲ್ಲಿ, ಒಬ್ಬ ವ್ಯಕ್ತಿಯ ಜನನದಿಂದ ಸಾವಿನವರೆಗೆ 16 ರೀತಿಯ ಆಚರಣೆಗಳಿವೆ. ಅವು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಆಚರಣೆಗಳಲ್ಲಿ ಮುಂಡನ ಸಂಸ್ಕಾರವೂ ಒಂದು. ಮಗುವಿನ ಮೊದಲ, ಮೂರನೇ ಅಥವಾ ಐದನೇ ವರ್ಷದಲ್ಲಿ ಕೂದಲನ್ನು ಬೋಳಿಸಲಾಗುತ್ತದೆ. 

Tap to resize

ಮುಂಡನ ಸಮಾರಂಭದ (kesha mundana) ಸಮಯದಲ್ಲಿ, ಮಗುವಿನ ಸ್ವಲ್ಪ ಕೂದಲನ್ನು ಉಳಿಸಲಾಗುತ್ತೆ. ತಲೆಯ ಮೇಲೆ ಜುಟ್ಟು ಅಥವಾ ಶಿಖೆ ಇಡುವ ಆಚರಣೆಯನ್ನು ಯಜ್ಞೋಪವಿತ್ ಅಥವಾ ಉಪನಯನ ಸಂಸ್ಕಾರದಲ್ಲಿ ಸಹ ನಡೆಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಪೂಜೆಗಳು, ಆಚರಣೆಗಳು ಮತ್ತು ಯಜ್ಞ ಇತ್ಯಾದಿಗಳನ್ನು ಮಾಡಲು ಶಿಖೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪೌರೋಹಿತ್ಯ ಮಾಡುವವರು ಮಾತ್ರ ಇದನ್ನ ಶಿಖೆ ಇಟ್ಟುಕೊಳ್ಳುತ್ತಾರೆ.
 

ಶಿಖೆ ಎಷ್ಟು ದೊಡ್ಡದಾಗಿರಬೇಕು?
ಧಾರ್ಮಿಕ ಗ್ರಂಥಗಳ ಪ್ರಕಾರ, ಸಹಸ್ರಚಕ್ರದ ಆಕಾರವು ಹಸುವಿನ ಕೊಂಬುಗಳನ್ನು ಹೋಲುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಶಿಖೆಯನ್ನು ಹಸುವಿನ ಕೊಂಬುಗಳಿಗೆ ಸಮಾನವಾಗಿ ಇಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಹು ವ್ಯಕ್ತಿಯ ಜಾತಕದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ, ಅವನು ತಲೆಯ ಮೇಲೆ ಶಿಖೆ ಇಡಬೇಕು. ಇದು ರಾಹುವಿನ ಸ್ಥಿತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ.

ಶಿಖೆ ಹೊಂದಲು ವೈಜ್ಞಾನಿಕ ಕಾರಣಗಳು
ಶಿಖೆ ಉಳಿಸಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಮೆದುಳಿನ ಕೇಂದ್ರವು ಶಿಖೆ ಇರಿಸಿರುವ ಸ್ಥಳದಲ್ಲಿದೆ. ಈ ಸ್ಥಳದಿಂದ, ದೇಹದ ಭಾಗಗಳು, ಬುದ್ಧಿ ಮತ್ತು ಮನಸ್ಸನ್ನು ನಿಯಂತ್ರಿಸಲಾಗುತ್ತದೆ.

ಶಿಖೆ ಕಾಪಾಡಿಕೊಳ್ಳುವ ಮೂಲಕ, ಸಹಸ್ರ ಚಕ್ರವು ಎಚ್ಚರವಾಗಿರುತ್ತದೆ. ಶಿಖೆ ಇಟ್ಟುಕೊಳ್ಳುವುದು ಸಹಸ್ರ ಚಕ್ರವನ್ನು ಜಾಗೃತಗೊಳಿಸಲು ಮತ್ತು ಬುದ್ಧಿ, ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು (control on body) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
 

Latest Videos

click me!