ಮತ್ತೆ ಬೋಲ್ಡ್ ಅವತಾರದಲ್ಲಿ ನಟಿ ಜ್ಯೋತಿ ರೈ, ಒಳಗೆ ಹಾಕಿರೋ ಚಡ್ಡಿನೂ ಕಾಣಿಸ್ತಿದ್ಯಲ್ಲಮ್ಮಾ ಎಂದ ನೆಟ್ಟಿಗರು!

First Published Nov 22, 2023, 2:08 PM IST

ಕನ್ನಡ ಸೀರಿಯಲ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್‌ ಸಿರೀಸ್‌ಗಳಲ್ಲಿ ನಟಿಸೋದ್ರಲ್ಲಿ ಬಿಝಿಯಾಗಿದ್ದಾರೆ. ಸದ್ಯ ಬ್ಲ್ಯಾಕ್‌ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ಹಾಕ್ಕೊಂಡಿರೋ ಹಾಟ್ ಲುಕ್‌ ಫೋಟೋ ಶೇರ್ ಮಾಡಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ.

ಕನ್ನಡ ಸೀರಿಯಲ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್‌ ಸಿರೀಸ್‌ಗಳಲ್ಲಿ ನಟಿಸೋದ್ರಲ್ಲಿ ಬಿಝಿಯಾಗಿದ್ದಾರೆ. ನಟಿ ತಮ್ಮ ಬೋಲ್ಡ್‌ ಫೋಟೋಶೂಟ್‌ಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸದ್ಯ ಬ್ಲ್ಯಾಕ್‌ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ಹಾಕ್ಕೊಂಡಿರೋ ಹಾಟ್ ಲುಕ್‌ ಫೋಟೋ ಶೇರ್ ಮಾಡಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ.

ಜ್ಯೋತಿ ರೈ ಲೇಸ್ ವರ್ಕ್‌ನ ಬ್ಲ್ಯಾಕ್‌ ಡ್ರೆಸ್ ಧರಿಸಿದ್ದು, ಮಿರರ್ ಮುಂದೆ ನಿಂತು ಸ್ಮೈಲ್ ಕೊಟ್ಟಿದ್ದಾರೆ. ಈ ಬಟ್ಟೆ ತುಂಬಾ ಟ್ರಾನ್ಸ್‌ಪರೆಂಟ್ ಆಗಿದ್ದು, ಒಳಗೆ ಹಾಕಿರೋ ಚಡ್ಡಿನೂ ಕಾಣಿಸ್ತಿದ್ಯಲ್ಲಾ ಮೇಡಂ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ. ಜೊತೆಗೆ ಸಖತ್ ಹಾಟ್ ಮಗಾ ಅಂತಿದ್ದಾರೆ.

Latest Videos


ಜ್ಯೋತಿ ರೈ  ಹೆಸರು ಕಳೆದ ಕೆಲವು ಸಮಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸುತ್ತಿದ್ದ ಜ್ಯೋತಿ ರೈ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. .

ತಮ್ಮ ಬೋಲ್ಡ್ ಅವತಾರದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾರ್ಟ್‌ ಡ್ರೆಸ್ ಆಗಿ ಸ್ಟೈಲಿಶ್ ವಾಕ್‌, ಹಾಟ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ

ಇತ್ತೀಚಿಗೆ ಬ್ಲ್ಯಾಕ್ ಟಾಪ್‌ ಹಾಕ್ಕೊಂಡು ಹೊಕ್ಕುಳ ತೋರಿವ ಹಾಟ್ ಫೋಟೋ ಪೋಸ್ಟ್ ಮಾಡಿದ್ದರು. ಮತ್ತೊಮ್ಮೆ ರೆಡ್‌ ಡ್ರೆಸ್‌ನಲ್ಲಿರೋ ಫೋಟೋವನ್ನು ಹಂಚಿಕೊಂಡಿದ್ದರು. ಕೆಲವೊಂದು ಫೋಟೋಗಳಿಗೆ ಅವರು ಕಮೆಂಟ್ ಸೆಕ್ಷನ್ ಆಫ್ ಮಾಡುತ್ತಾರೆ. ಹೀಗಿದ್ದೂ ನಟಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತೆ. 

ತಮ್ಮ ಮೇಕ್ ಓವರ್ ಜೊತೆಗೆ ತಮ್ಮ ಪರ್ಸನಲ್ ಲೈಫ್‌ನಿಂದಾನೂ ನಟಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ನಟಿ ಜ್ಯೋತಿ ರೈ ಬಗ್ಗೆ ಹೇಳೋದಾದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಜ್ಯೋತಿ ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು. ತಮ್ಮ 21ನೇ ವರ್ಷಕ್ಕೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ ಸಿನಿಮಾ, ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. 

ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ,  ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. 

click me!