ವಜ್ರಲೇಪಿತ ಟಾಪ್‌ಲೆಸ್ ಗೌನ್ ಧರಿಸಿ ಪೋಸ್ ಕೊಟ್ಟ ಜಾಹ್ನವಿ ಕಪೂರ್; ನಿನ್ನಂದಕೆ ನಿನ್ನಮ್ಮನೇ ಸರಿಸಾಟಿ ಎಂದ ಫ್ಯಾನ್ಸ್

First Published | Jul 14, 2024, 4:53 PM IST

ನವದೆಹಲಿ (ಜು.14): ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವಲ್ಲಿ ಪಾಲ್ಕೊಂಡಿರುವ ನಟಿ ಜಾಹ್ನವಿ ಕಪೂರ್ ಮದುಮಗಳನ್ನೂ ಮೀರಿಸುವಂತಹ ಹೊಳಪುಳ್ಳ ಉಡುಗೆಗಳನ್ನು ತೊಟ್ಟು ಎಲ್ಲರ ಕಣ್ಮನ ಸೆಳೆದಿದ್ದಾಳೆ. ಇವಳ ಸೌಂದರ್ಯವನ್ನು ನೋಡಿ ನಿನ್ನಂದಕ್ಕೆ ನಿಮ್ಮಮ್ಮನೇ ಸರಿಸಾಟಿ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ..

ಅಂಬಾನಿ ಮದುವೆಯ ನಿಮಿತ್ತ ದೇಶ ವಿದೇಶಗಳ ದೊಡ್ಡ ದೊಡ್ಡ ಗಣ್ಯರ ದಂಡೇ ಹರಿದುಬಂದಿದೆ. ಇನ್ನು ಗಣ್ಯರನ್ನು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳನ್ನು ನೋಡಲು ಎರಡು ಕಣ್ಣುಗಳು ಕೂಡ ಸಾಲುವುದಿಲ್ಲ. ಮದುವೆ ದಿಬ್ಬಣಕ್ಕೆ ಎನ್ನುವುದಕ್ಕಿಂದ ಸೆಲೆಬ್ರಿಟಿಗಳ ಕೂಟವೆಂದರೂ ತಪ್ಪಾಗಲಾರದು.

ಅನಂತ್ ಅಂಬಾನಿ ಮದುವೆಗೆ ಬರುವ ಎಲ್ಲ ಸೆಲೆಬ್ರಿಟಿಗಳು ಕೂಡ ವೇದಿಕೆಗೆ ಬರುವ ಮುನ್ನವೇ ಫೋಟೋಗೆ ಪೋಸ್ ಕೊಡಲು ವೇದಿಕೆ ನಿರ್ಮಿಸಿದ್ದಾರೆ. ಅಲ್ಲಿ ಎಲ್ಲರೂ ಕುಟುಂಬ ಸಮೆತರಾಗಿ ಬಂದು ಫೊಟೋ ಪೋಸ್ ಕೊಟ್ಟು ತಮ್ಮ ಉಪಸ್ಥಿತಿಯ ಬಗ್ಗೆ ಖಾತರಿಪಡಿಸುತ್ತಿದ್ದಾರೆ.

Tap to resize

ಅದೇ ರೀತಿ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಕೂಡ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಬಂದಿದ್ದು, ತನ್ನ ವಿಭಿನ್ನ ಶೈಲಿಯ ಉಡುಗೆಗಳಿಂದ ಮದುವೆಯಲ್ಲಿ ಎಲ್ಲರ ಕಣ್ಮನ ತನ್ನತ್ತ ಸೆಳೆದುಕೊಂಡಿದ್ದಾಳೆ.

ನಿನ್ನೆ ಚಿನ್ನದ ಬಣ್ಣದ ಲೆಹೆಂಗಾ ಧರಿಸಿದ್ದ ಜಾಹ್ನವಿ ಕಪೂರ್ ಮದುವೆ ಮನೆಯಲ್ಲಿ ತಾನೇ ವಧು ಎಂಬಂತೆ ಫೋಟೋ ಪೋಸ್ ಕೊಟ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಳು. ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ವಜ್ರದ ಹರಳುಗಳುಳ್ಳ ಉಡುಗೆಯನ್ನು ಧರಿಸಿದ್ದಾಳೆ.

ವಜ್ರದ ಹರಳುಗಳುಳ್ಳ ಟಾಪ್‌ಲೆಸ್ ಗೌನ್ ಧರಿಸಿದ ಜಾಹ್ನವಿ ಕಪೂರ್ ಎದೆಯುಬ್ಬಿಸಿ ಮಾದಕವಾಗಿ ಫೋಟೋ ಪೋಸ್ ಕೊಟ್ಟಿದ್ದಾಳೆ. ಜೊತೆಗೆ, ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದು, ನಿನ್ನೆ ಚಿನ್ನ, ಇಂದು ವಜ್ರ' (ek din sona, ek din heera 💎) ಎಂದು ಕ್ಯಾಪ್ಶನ್ ಕೊಟ್ಟುಕೊಂಡಿದ್ದಾಳೆ.

ಬಾಲಿವುಡ್‌ನ ಬೆಡಗಿಯರಲ್ಲಿ ಒಬ್ಬರಿಗಿಂತ ಒಬ್ಬರು ಮಿರಿಮಿರಿ ಮಿನುಗೋ ಬಟ್ಟೆಯನ್ನು ಹಾಕಿದ್ದರು. ಆದರೆ, ಅಷ್ಟೊಂದು ಸೆಲೆಬ್ರಿಟಿಗಳ ನಡುವೆ ಎಲ್ಲರ ಮೆಚ್ಚುಗೆ ಪಡೆದು ಗಮನ ಸೆಳೆದಿದ್ದು ಮಾತ್ರ ಮಿನುಗುವ ಹರಳುಗಳುಳ್ಳ ಗೌನ್ ಧರಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್.

ಜಾಹ್ನವಿ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಂದ ತಕ್ಷಣ, ಅವರ ಅಭಿಮಾನಿಗಳು ಅವರ ನೋಟವನ್ನು ಎಲ್ಲರೂ ಸತ್ತೇ ಹೋಗುತ್ತಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಮತ್ತೊಬ್ಬ 'ಅವಳು ರಾಣಿ' ಎಂದು ಬರೆದರೆ, ಮತ್ತೊಬ್ಬರು ನೀವು 'ಅತ್ಯುತ್ತಮ ಉಡುಗೆ ತೊಟ್ಟಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಬೆಂಕಿ ಮತ್ತು ಹೃದಯದ ಇಮೋಜಿಗಳನ್ನು ಕಾಮೆಂಟ್‌ನಲ್ಲಿ ನೀಡಿದ್ದಾರೆ. 

ಇನ್ನು ಮತ್ತೊಬ್ಬ ನೆಟ್ಟಿಗ ನನ್ನ ಹೃದಯ ಮತ್ತು ನನ್ನ ಮನಸ್ಸು ಯಾವಾಗಲೂ ನಿನ್ನ ಸೌಂದರ್ಯವನ್ನು ನೋಡಲು ಹಾತೊರೆಯುತ್ತದೆ ಎಂದು ಕಾಮೆಂಟ್ ಮಾಡಿದ್ದಾನೆ. ಹಲವು ನೆಟ್ಟಿಗರು ಜಾಹ್ನವಿ ಅಂದವನ್ನು ಹಾಡಿ ಹೊಗಳಿದ್ದಾರೆ. ಇನ್ನು ಜಾಹ್ನವಿ ಫೋಟೋ ಶೇರ್ ಮಾಡಿ 2 ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳನ್ನು ಪಡೆದಿದ್ದಾರೆ.

ಬಾಲಿವುಡ್‌ನ ಸುಂದರಿ ಜಾಹ್ನವಿ ಕಪೂರ್ ತಮ್ಮ ಸ್ಟೈಲ್ ಮತ್ತು ನಡವಳಿಕೆಯಿಂದಲೇ ಹೆಸರು ಮಾಡಿದವರು. ಅಮ್ಮನಂತೆ ಹೊಳೆಯುವ ಮೈಬಣ್ಣ ಹೊಂದಿರುವ ಜಾಹ್ನವಿ ಕಪೂರ್ ಯಾವುದಕ್ಕೂ ಹೆದರೋದಿಲ್ಲ.  ಬೋಲ್ಡ್ ನಟಿಯರಲ್ಲಿ ಒಬ್ಬರಾಗಿರುವ ಜಾಹ್ನವಿ, ಎಲ್ಲ ವಿಷ್ಯವನ್ನು ಅಭಿಮಾನಿಗಳ ಮುಂದಿಡುತ್ತಾರೆ. ಹೀಗಾಗಿ, ನಿನ್ನಂದಕೆ ನಿನ್ನಮ್ಮನೇ ಸರಿಸಾರಿ ಎಂದು ಫ್ಯಾನ್ಸ್ ಹೊಗಳಿದ್ದಾರೆ.

ಜಾಹ್ನವಿ ಕಪೂರ್‌ಗೆ ಕೆಟ್ಟ ದೃಷ್ಟಿ ಬೀಳುತ್ತಂತೆ: ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡಿದ್ದ ಜಾಹ್ನವಿ ಕಪೂರ್ ನನಗೂ ಕೆಟ್ಟ ದೃಷ್ಟಿ ಬೀಳುತ್ತದೆ. ನನಗೆ ಕೆಟ್ಟ ದೃಷ್ಟಿ ಬಿದ್ದಾಗ ಜ್ವರ ಬರುತ್ತದೆ. ಅದು ಕೆಟ್ಟ ದೃಷ್ಟಿಯಂದ್ಲೋ ಅಥವಾ ಬೇರೆ ಕಾರಣಕ್ಕೋ ತಿಳಿದಿಲ್ಲ. ಆದ್ರೆ ನನಗೆ ಅದು ದೃಷ್ಟಿ ಎನ್ನುವ ಭ್ರಮೆ ಇದೆ ಎಂದು ಹೇಳಿಕೊಂಡಿದ್ದಳು. ಹಾಗಾದರೆ, ಇಂದೂ ಜಾಹ್ನವಿಗೆ ಜ್ವರ ಬರಬಹುದೇ ಎಂಬುದು ಕಾದು ನೋಡಬೇಕಿದೆ.

Latest Videos

click me!