ದಿವ್ಯಾ ದುರೈಸಾಮಿ ಪ್ರತಿ ಫೋಟೋಗೂ 'ಟೆಸ್ಲಾ' ಕಾಮೆಂಟ್‌ ಮಾಡೋದ್ಯಾಕೆ ಪಡ್ಡೆ ಹುಡುಗ್ರು!

First Published | Dec 26, 2023, 10:03 PM IST

2019ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ದಿವ್ಯಾ ದುರೈಸ್ವಾಮಿ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿದ್ರೂ ಅದಕ್ಕೆ ಟೆಸ್ಲಾ ಎನ್ನುವ ಕಾಮೆಂಟ್‌ ಖಂಡಿತವಾಗಿಯೂ ಬಂದಿರುತ್ತದೆ. ತಮಿಳುನಾಡಿನಲ್ಲಿ ಈಕೆಯನ್ನು ಟೆಸ್ಲಾ ಕ್ವೀನ್‌ ಎಂದೇ ಕರೆಯುತ್ತಾರೆ.

ನ್ಯೂಸ್‌ ಚಾನೆಲ್‌ನ ನಿರೂಪಕಿಯಾಗಿದ್ದ ದಿವ್ಯಾ ದೊರೆಸ್ವಾಮಿ ಸಿನಿಮಾ ರಂಗಕ್ಕೆ ಇಳಿದು ಸಾಕಷ್ಟು ವರ್ಷಗಳೇ ಆಗಿವೆ. ತಮಿಳಿನ ಪ್ರಸಿದ್ಧ ಚಾನೆಲ್‌ಗಳಿಗೆ ನ್ಯೂಸ್‌ ಪ್ರೆಸೆಂಟರ್‌ ಕೂಡ ಆಗಿದ್ದರು.

dhivya duraisamy

2019ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ದಿವ್ಯಾ ದೊರೈಸ್ವಾಮಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷ ಈಕೆ ನಟಿಸಿದ್ದ ವಾಝೈ ಸಿನಿಮಾ ರಿಲೀಸ್‌ ಆಗಿತ್ತು.

Tap to resize

ಅದರೊಂದಿಗೆ ಸೋಶಿಯಲ್‌ ಮೀಡಿಯಾದಲ್ಲೂ ದಿವ್ಯಾ ದೊರೈಸ್ವಾಮಿ ಸಕ್ರಿಯರಾಗಿದ್ದಾರೆ. ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಹೊಸ ಹೊಸ ಫೋಟೋಗಳನ್ನು ಅವರು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

dhivya duraisamy

ನಟಿ ದಿವ್ಯಾ ದೊರೈಸ್ವಾಮಿ ಹಂಚಿಕೊಳ್ಳುವ ಪ್ರತಿಫೋಟೋಗೂ ಸೋಶಿಯಲ್‌ ಮೀಡಿಯಾದಲ್ಲಿ 'ಟೆಸ್ಲಾ' ಎನ್ನುವ ಕಾಮೆಂಟ್‌ ಮಾಡುತ್ತಾರೆ. 

ಟೆಸ್ಲಾ ಕ್ವೀನ್‌, ಟೆಸ್ಲಾ ಅಂತಾ ಅವರ ಪ್ರತಿ ಪೋಸ್ಟ್‌ಗಳಲ್ಲೂ ಕಾಮೆಂಟ್‌ ಇರುತ್ತದೆ. ಹಾಗೇನೂ ದಿವ್ಯಾ ದೊರೈಸ್ವಾಮಿಗೂ ಟೆಸ್ಲಾಗೂ ಯಾವುದೇ ಸಂಬಂಧವಿಲ್ಲ. 

ಅಥವಾ ಈ ಹಿಂದೆ ದಿವ್ಯಾ ದೊರೈಸ್ವಾಮಿ ಟೆಸ್ಲಾ ಕಂಪನಿಯಲ್ಲಿ ಕೆಲಸ ಮಾಡಿದ, ಟೆಸ್ಲಾ ಕಾರಿನ ಮಾಲೀಕರಾಗಿರುವ ವ್ಯಕ್ತಿಯೂ ಅಲ್ಲ. ಹಾಗಿದ್ದರೂ ಅವರ ಹೆಚ್ಚಿನ ಪೋಸ್ಟ್‌ಗಳಲ್ಲಿ ಅಭಿಮಾನಿಗಳು ಪಡ್ಡೆ ಹುಡುಗರು ಟೆಸ್ಲಾ ಎಂದು ಕಾಮೆಂಟ್‌ ಮಾಡುತ್ತಾರೆ.

dhivya duraisamy

ಆದರೆ, ಫ್ಯಾನ್ಸ್‌ಗಳು  ಟೆಸ್ಲಾ ಎಂದು ಕಾಮೆಂಟ್‌ ಮಾಡುವ ಹಿಂದೆ ಒಂದು ರಹಸ್ಯ ಕೂಡ ಇದೆ. ಇದನ್ನು ಕೆಲವು ಫ್ಯಾನ್ಸ್‌ಗಳು ಅವರ ಪೋಸ್ಟ್‌ನಲ್ಲಿಯೇ ತಿಳಿಸಿದ್ದಾರೆ.

ಹೌದು ಕೆಲ ತಿಂಗಳ ಹಿಂದೆ ದಿವ್ಯಾ ದೊರೈಸ್ವಾಮಿ ಇನ್ಸ್‌ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡರು. ಅಲ್ಲಿಂದಲೇ ಅವರಿಗೆ ಟೆಸ್ಲಾ ಟ್ರೋಲ್‌ ಆರಂಭವಾಗಿದೆ.

dhivya duraisamy

ಅವರು ಪೋಸ್ಟ್‌ ಮಾಡಿದ ಎಲ್ಲಾ ಚಿತ್ರಗಳಲ್ಲಿ, ತಮ್ಮ ಹೊಕ್ಕಳನ್ನು ತೋರಿಸುತ್ತಾ ಪೋಸ್‌ ನೀಡಿದ್ದರು. ಈ ಚಿತ್ರಗಳನ್ನು ನೋಡಿದವರೇ ಈಕೆಗೆ ಟೆಸ್ಲಾ ಎಂದು ಬಿರುದು ನೀಡಿದ್ದಾರೆ.

ದಿವ್ಯಾ ದೊರೈಸ್ವಾಮಿ ಅವರ ಹೊಕ್ಕಳು ಟೆಸ್ಲಾ ಲೋಗೋ ರೀತಿ ಕಾಣುತ್ತಿದೆ ಎನ್ನುವ ಕಾರಣಕ್ಕೆ, ಆಕೆಯ ಎಲ್ಲಾ ಫೋಟೋಗೆ ಟೆಸ್ಲಾ ಎನ್ನುವ ಕಾಮೆಂಟ್‌ ಹಾಕುತ್ತಿದ್ದಾರೆ.

dhivya duraisamy

ಇನ್ನು ಕೆಲ ಸಂದರ್ಶನಗಳಲ್ಲಿ ದಿವ್ಯಾ ದೊರೈಸ್ವಾಮಿ ಅವರಿಗೆ ಈ ಬಗ್ಗೆ ಪ್ರಶ್ನೆಯನ್ನೂ ಕೇಳಲಾಗಿದೆ. ನಿಮ್ಮ ಎಲ್ಲಾ ಫೋಟೋಗಳಿಗೆ ಟೆಸ್ಲಾ ಅಂತಾ ಯಾಕೆ ಇರುತ್ತೆ ಎಂದು ಕೇಳಲಾಗಿದೆ.

ಇದಕ್ಕೆ ದಿವ್ಯಾ ದೊರೈಸ್ವಾಮಿ ಜಾಣ್ಮೆಯ ಉತ್ತರ ನೀಡಿದ್ದು, ಯಾಕೆ ಟೆಸ್ಲಾ ಅಂತಾ ಕರೆಯುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ, ಬರುವ ಕೆಟ್ಟ ಕಾಮೆಂಟ್‌ಗಳ ಬಗ್ಗೆ ತಾವು ತಲೆ ಕೆಡಿಸಿಕೊಳ್ಳೋದಿಲ್ಲ ಎಂದಿದ್ದಾರೆ.

dhivya duraisamy

ಇನ್ನು ದಿವ್ಯಾ ದೊರೈಸ್ವಾಮಿ ಅವರ ಅಭಿಮಾನಿಗಳು ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ಗೂ ಮನವಿ ಮಾಡಿದ್ದು, ದಿವ್ಯಾ ಅವರನ್ನು ಭಾರತದಲ್ಲಿ ಟೆಸ್ಲಾ ಬ್ರ್ಯಾಂಡ್‌ ಅಂಬಾಸಿಡರ್‌ ಮಾಡಿ ಎಂದಿದ್ದಾರೆ.

ಅದಲ್ಲದೆ, ಭಾರತದಲ್ಲಿ ಬಿಡುಗಡೆಯಾಗುವ ಎಲ್ಲಾ ಟೆಸ್ಲಾ ಕಾರ್‌ಗಳಿಗೂ ದಿವ್ಯಾ ದೊರೈಸ್ವಾಮಿ ಅವರನ್ನೇ ಮಾಡೆಲ್‌ ಆಗಿ ಬಳಸಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ.

ಇನ್ನು ದಿವ್ಯಾ ದೊರೈಸ್ವಾಮಿಗೆ ಟ್ವಿಟರ್‌ನಲ್ಲೂ ಸಾಕಷ್ಟು ಫಾಲೋವರ್‌ಗಳಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ 753 ಕೆ ಫಾಲೋವರ್‌ಗಳನ್ನು ಇವರು ಹೊಂದಿದ್ದಾರೆ.

Latest Videos

click me!