ಇಂದು ಮಧುಮೇಹ, ಬಿಪಿ ಅಂತಹ ರೋಗಗಳ ಜನರ ಜೀವನದ ಒಂದು ಭಾಗವಾಗಿದೆ. ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ತೆಗೆದುಕೊಳ್ಳಬೇಕು. ಸೆಲೆಬ್ರಿಟಿಗಳಷ್ಟು ಬೇರೆ ಯಾರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳಲ್ಲ. ಅದರಲ್ಲಿ ಸಿನಿಮಾ ತಾರೆಯರಂತು ಒಂದು ಗ್ರಾಂ ತೂಕ ಹೆಚ್ಚಾದ್ರು, ಒಂದು ಕಪ್ಪು ಕಲೆಯಾದರೂ ತೀವ್ರ ಚಿಂತೆಗೆ ಒಳಗಾಗುತ್ತಾರೆ.
ಇಷ್ಟೆಲ್ಲಾ ಆರೋಗ್ಯದ ಬಗ್ಗೆ ಮುತುವರ್ಜಿ ತೆಗೆದುಕೊಳ್ಳುತ್ತಿದ್ದರೂ ಕೆಲ ತಾರೆಯರು ಅಕಾಲಿಕ ಮರಣಕ್ಕೆ ತುತ್ತಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಬಾಲಿವುಡ್ ಭಾಯಿಜಾನ್‌ನಿಂದ ಹಿಡಿದು ರಣ್‌ಬೀರ್ ಕಪೂರ್‌ವರೆಗೂ ಕೆಲ ಕಲಾವಿದರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಯಾವ ಸ್ಟಾರ್? ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ವಯಸ್ಸು 58 ಆದ್ರೂ 38ರಂತೆ ಕಾಣುವ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ (Actor Salman Khan) ಸಹ ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಸಲ್ಮಾನ್ ಖಾನ್ Trigeminal Neuralgia ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಮುಖದಲ್ಲಿನ ಟ್ರೈಜಿಮಿನಲ್ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದೊಂದು ದೀರ್ಘಕಾಲದ ಕಾಯಿಲೆಯಾಗಿದ್ದು, ರೋಗಿಗೆ ನೋವು ಉಂಟು ಮಾಡುತ್ತದೆ.
ಏಷ್ಯಾದ ಸೆಕ್ಸಿ ಮ್ಯಾನ್ ಎಂದೇ ಗುರುತಿಸಿಕೊಳ್ಳುವ ರಬ್ಬರ್‌ನಂತೆ ದೇಹ ಮಣಿಸುವ ನಟ ಅಂದ್ರೆ ಅದು ಹೃತಿಕ್ ರೋಷನ್ (Actor Hritik Roshan). ಇವರು Subdural Hematoma ಸಮಸ್ಯೆಗೆ ತುತ್ತಾಗಿದ್ದರು. ಬ್ರೈನ್ ಸರ್ಜರಿಗೆ ಒಳಗಾಗಿ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿ,ನಟಿ ಅನುಷ್ಕಾ ಶರ್ಮಾ (Actress Anushka Sharma) Bulging Disc ಸಮಸ್ಯೆಗೆ ತುತ್ತಾಗಿದ್ದರು. ಇದು ಬೆನ್ನುಮೂಳೆಗೆ (spinal bones) ಸಂಬಂಧಿಸಿದ ರೋಗವಾಗಿದೆ. ಅನುಷ್ಕಾ ಶರ್ಮಾ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದು, ಮಕ್ಕಳಿಗೆ ಮೊದಲ ಅದ್ಯತೆ ನೀಡಿದ್ದಾರೆ.
ನಟಿ ಯಾಮಿ ಗೌತಮಿ (Actress Yami Gauthami) Keratosis Pilaris ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೊಂದು ಚರ್ಮಕ್ಕೆ (Skin Disease) ಸಂಬಂಧಿಸಿದ ಕಾಯಿಲೆಯಾಗಿದೆ. ಈ ಕಾಯಿಲೆಗೆ ತುತ್ತಾದವರ ಚರ್ಮ ಪದೇ ಪದೇ ಡ್ರೈ ಆಗುತ್ತಿರುತ್ತದೆ. ಚರ್ಮದ ಮೇಲೆ ಕೆಂಪು ಉಬ್ಬುಗಳು (tiny red bumps) ಕಾಣಿಸಿಕೊಳ್ಳುತ್ತಿರುತ್ತವೆ.
ಅನಿಮಲ್ ಸಿನಿಮಾದ ಸಕ್ಸಸ್‌ನಲ್ಲಿರೋ ಬಾಲಿವುಡ್‌ನ ಚಾಕ್ಲೆಟ್ ಹೀರೋ ಎಂದೇ ಕರೆಸಿಕೊಳ್ಳುವ ರಣ್‌ಬೀರ್ ಕಪೂರ್ (Ranbeer Kapopr), Nasal septumನಿಂದ ಬಳಲಿದ್ದಾರ. ಇದು ಮೂಗಿನ ಭಾಗದಲ್ಲಿ ಮೂಳೆಗಳ ಉಳುಕು ಎಂದು ಕರೆಯಲಾಗುತ್ತದೆ. (Sideways displacement of the septum).
ನಟಿ ಇಲಿಯಾನಾ ಡಿಕ್ರೂಜ್ (Illeana D'croz) ಸಹ Body Dysmorphiaಗೆ ತುತ್ತಾಗಿದ್ದರು. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಕಣ್ಮುಂದೆ ಕಾಲ್ಪನಿಕ ದೃಶ್ಯಗಳು ಕಂಡಂತೆ ಕಾಣುತ್ತವೆ. ಇಲಿಯಾನಾ ಡಿ ಕ್ರೂಜ್ ತೆಲಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸ್ಟುಡೆಂಟ್ ಆಫ್ ದಿ ಇಯರ್ ಖ್ಯಾತಿಯ ನಟ ವರುಣ್ ಧವನ್ (Actor Varun Dhavan), Vestibular Hypofunction ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕಿವಿಗೆ ಸಂಬಂಧಿಸಿ ರೋಗವಾಗಿದೆ. ಕಿವಿಯೊಳಗಿನ ಒಂದು ಭಾಗ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದಾಗ ಈ ಸಮಸ್ಯೆ ಬರುತ್ತದೆ.
ಬಾಲಿವುಡ್ ಬಿಗ್‌ಬಿ, ಸಿನಿ ಲೋಕದ ದಿಗ್ಗಜ ಅಮಿತಾಬ್ ಬಚ್ಚನ್ (Amitabh Bachchan), Myasthenia Gravis ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೊಂದು ಆಟೋಇಮ್ಯೂನ್ ಕಾಯಿಲೆಯಾಗಿದ್ದು, ಈ ಸಮಸ್ಯೆ ಅಸ್ಥಿಪಂಜರದ ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕೂಲಿ ಸಿನಿಮಾ ಚಿತ್ರೀಕರಣದಲ್ಲಾದ ಗಾಯದಿಂದ ಅಮಿತಾಬ್ ಇಂದೂ ಸಹ ಸಮಸ್ಯೆ ಎದುರಿಸುತ್ತಿದ್ದಾರೆ.