ಬೆಡ್‌ ಮೇಲೆ ಬಿದ್ದ ಬೋಲ್ಡ್‌ ಚಿತ್ರಗಳನ್ನು ಹಂಚಿಕೊಂಡ ಬಿಗ್‌ ಬಾಸ್‌ ನಟಿ!

First Published | Oct 24, 2023, 5:08 PM IST

ಸೋಶಿಯಲ್‌ ಮೀಡಿಯಾಗಳಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿ ಸಿನಿಮಾ ರಂಗದಲ್ಲಿ ಅವಕಾಶ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಹಂತದಲ್ಲಿ ಹವಾ ಸೃಷ್ಟಿಸಿ ಈಗ ನಾಪತ್ತೆಯಾಗಿರುವ ಡಬ್‌ಸ್ಮ್ಯಾಶ್‌ನಲ್ಲಿ ವೈರಲ್‌ ವಿಡಿಯೋಗಳನ್ನು ಪೋಸ್ಟ್‌ ಮಾಡಿ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿಯ ಹೊಸ ಚಿತ್ರಗಳು ಇನ್ಸ್‌ಟಾಗ್ರಾಮ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಆಕರ್ಷಕ ವಿಡಿಯೋಗಳನ್ನು ಪೋಸ್ಟ್‌ ಮಾಡುವ ಮೂಲಕವೇ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡ ಸಾಕಷ್ಟು ಮಂದಿಯಿದ್ದಾರೆ.


ಆ ನಿಟ್ಟಿನಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರೋದು ದೀಪ್ತಿ ಸುನೈನಾ. ಟಾಲಿವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿರುವ ನಟಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೀರೆಯುಟ್ಟ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದು ಸಖತ್‌ ವೈರಲ್‌ ಆಗಿದೆ.

Tap to resize

ಅಕ್ಟೋಬರ್‌ ಆರಂಭದಲ್ಲಿ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಚಿತ್ರಕ್ಕೆ ಈಗಾಗಲೇ 80 ಸಾವಿರಕ್ಕೂ ಅಧಿಕ ವೀವ್ಸ್‌ ದಾಖಲಾಗಿದೆ. 

ಅಷ್ಟೇ ಪ್ರಮಾಣದ ಕಾಮೆಂಟ್ಸ್‌ಗಳು ಬಂದಿದ್ದು, ಸರಳ ಶೈಲಿಯಲ್ಲಿ ಸೀರೆಯುಟ್ಟು ತೆಗೆಸಿರುವ ಚಿತ್ರಗಳಲ್ಲಿ ಬಹಳ ಅದ್ಭುತವಾಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್‌ ಮಾಡಿದ್ದಾರೆ.

ಟಾಲಿವುಡ್‌ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ತೆಲುಗು ಬಿಗ್‌ಬಾಸ್‌ನಲ್ಲಿ ದೀಪ್ತಿ ಸುನೈನಾ ಸ್ಪರ್ಧಿಯೂ ಆಗಿದ್ದರು. ಇನ್ಸ್‌ಟಾಗ್ರಾಮ್‌ನಲ್ಲಿ ಇವರಿಗೆ 4.2 ಮಿಲಿಯನ್‌ ಫಾಲೋವರ್ಸ್‌ಗಳಿದ್ದಾರೆ.

1998 ನವೆಂಬರ್‌ 10 ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ದೀಪ್ತಿ ಸುನೈನಾ, ಪ್ರಸ್ತುತ ಕಲಾ ವಿಭಾಗದಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.


ದೀಪ್ತಿ ಸುನೈನಾ ಅವರ ಮೂಲ ಹೆಸರು ದೀಪ್ತಿ ರೆಡ್ಡಿ. ತೆಲುಗು ಸಿನಿಮಾ ರಂಗದಲ್ಲಿ ದೊಡ್ಡ ಹೀರೋಯಿನ್‌ ಆಗಬೇಕು ಅನ್ನೋದೇ ದೀಪ್ತಿ ಅವರ ಮೊದಲ ಆಸೆ ಆಗಿತ್ತಂತೆ.


ಸಾಮಾನ್ಯವಾಗಿ 25 ವರ್ಷದ ಸೋಶಿಯಲ್‌ ಮೀಡಿಯಾ ಹೊಸ ಹೊಸ ಟ್ರೆಂಡ್‌ನಲ್ಲಿ ಫೋಟೋಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಈ ಬಾರಿ ಸೀರೆಯಲ್ಲಿ ಅವರು ಪೋಸ್ಟ್‌ ಮಾಡಿರುವ ಚಿತ್ರಗಳು ಪಡಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಸಿನಿಮಾ ರಂಗಕ್ಕೂ ಬರುವ ಮುನ್ನ ಯೂಟ್ಯೂಬ್‌ನಲ್ಲಿ ತಮ್ಮ ಶಾರ್ಟ್‌ ಫಿಲ್ಮ್‌ಗಳು ಹಾಗೂ ವಿಡಿಯೋ ಸಾಂಗ್ಸ್‌ಗಳಲ್ಲಿ ದೀಪ್ತಿ ಸುನೈನಾ ಹಂಚಿಕೊಳ್ಳುತ್ತಿದ್ದರು. ಅಲ್ಲಿಂದಲೂ ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ.

ಕಾಲೇಜ್‌ ಗರ್ಲ್‌ ರೀತಿ ಕಾಣುವ ದೀಪ್ತಿ ಸುನೈನಾ, ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿದರೂ ಅದಕ್ಕೆ ದೊಡ್ಡ ಮಟ್ಟದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತದೆ.

ದೀಪ್ತಿ ಸುನೈನಾ ಇತ್ತೀಚೆಗೆ ಹಂಚಿಕೊಂಡ ಫೋಟೋಗಳಿಗೆ ನೆಟಿಜನ್‌ಗಳು ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರುವ ಮುದ್ದುಗಮ್ಮ ಸುಂದರಿ ಎಂದು ಲವ್ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹಿಂದು ಕುಟುಂಬದಲ್ಲಿ ಜನಿಸಿರುವ ದೀಪ್ತಿ ಸುನೈನಾ, ತನ್ನ ತಂದೆ ತಾಯಿ ಸಹೋದರಿ ಹಾಗೂ ಸಹೋದರನೊಂದಿಗೆ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ.

ಈ ಬಿಗ್ ಬಾಸ್ ಬೆಡಗಿ ಚಿತ್ರರಂಗಕ್ಕೆ ಎಂಟ್ರಿ ಕೊಡದೆ ಸ್ಟಾರ್ ಸ್ಟೇಟಸ್ ಪಡೆದುಕೊಂಡಿದ್ದರು. ದೀಪ್ತಿ ಸುನೈನಾ ಫೋಟೋಶೂಟ್‌ಗಳ ಮೂಲಕ ತನ್ನ ಸೌಂದರ್ಯದ ರುಚಿಯನ್ನು ತೋರಿಸಿದ್ದಾರೆ.
 

ಯೂಟ್ಯೂಬರ್‌ ಷಣ್ಮುಖ್‌ ಜಸ್ವಂತ್‌ ಜೊತೆ ಐದು ವರ್ಷಗಳ ಕಾಲ ದೀಪ್ತಿ ಸುನೈನಾ ರಿಲೇಷನ್‌ಷಿಪ್‌ನಲ್ಲಿದ್ದರು. ಇವರಿಬ್ಬರ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದವು.

2022ರ ಜನವರಿ 1 ರಂದು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕವೇ ಷಣ್ಮುಖ್‌ ಜಸ್ವಂತ್‌ ಜೊತೆ ಬ್ರೇಕ್‌ಅಪ್‌ ಮಾಡಿಕೊಂಡಿರುವುದಾಗಿ ದೀಪ್ತಿ ಸುನೈನಾ ಘೋಷಣೆ ಮಾಡಿದ್ದರು.

2018ರಲ್ಲಿ ದೀಪ್ತಿ ಸುನೈನಾ ಕನ್ನಡ ಚಿತ್ರ ಕಿರಿಕ್‌ ಪಾರ್ಟಿಯ ತೆಲುಗು ರಿಮೇಕ್‌, ಕಿರ್ರಾಕ್‌ ಪಾರ್ಟಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.

2ನೇ ಆವೃತ್ತಿಯ ಬಿಗ್‌ ಬಾಸ್‌ ತೆಲುಗು ಕಾರ್ಯಕ್ರಮದಲ್ಲಿ ಸ್ಪರ್ಧೆ ಮಾಡಿದ್ದ ಅತ್ಯಂತ ಕಿರಿಯ ಸ್ಪರ್ಧಿ ಎನ್ನುವ ಖ್ಯಾತಿಗೆ ದೀಪ್ತಿ ಸುನೈನಾ ಪಾತ್ರರಾಗಿದ್ದರು.


ಸೆಲ್ಫಿಗಳನ್ನು ತೆಗೆದುಕೊಳ್ಳೋದಕ್ಕೆ ಇಷ್ಟಪಡುವ ದೀಪ್ತಿ ಸುನೈನಾ ಅವರ ವಿಡಿಯೋಗಳನ್ನು ನೋಡಲು ನಾನು ಇಷ್ಟಪಡೋದಾಗಿ ನಟಿ ಸಮಂತಾ ಹಿಂದೊಮ್ಮೆ ಹೇಳಿದ್ದರು.

ನೃತ್ಯ ಮತ್ತು ಗಾಯನದಲ್ಲೂ ಆಸಕ್ತಿ ಹೊಂದಿರುವ ದೀಪ್ತಿ ಸುನೈನಾ, ತನ್ನ ಬಲಗೈ, ಎಡಗೈ ಹಾಗೂ ಬೆನ್ನಿನ ಮೇಲೆ ಆಕರ್ಷಕ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

Latest Videos

click me!