ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಎರಡನೇ ಮದುವೆ (Meghana Raj Sarja Second Marriage) ಕುರಿತ ಸುದ್ದಿ ಹಲವು ಬಾರಿ ಮುನ್ನಲೆಗೆ ಬರುತ್ತಿರುತ್ತದೆ. ಮುದ್ದಾದ ಮಗುವಿನ ತಾಯಿಯಾಗಿರೋ ಮೇಘನಾ ಮದುವೆ ಬಗ್ಗೆ ಅವರ ತಾಯಿಯೇ ಮಾತನಾಡಿದ್ದಾರೆ. ಮಗಳ ಜೀವನದ ಬಗ್ಗೆ ತಮಗಿರೋ ಕನಸುಗಳನ್ನು ಪ್ರಮೀಳಾ ಹೇಳಿಕೊಂಡಿದ್ದಾರೆ.
ನಟಿ ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ಖಾಸಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪುತ್ರಿಯ ಜೀವನದ ಕುರಿತು ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಮಗಳು ಮೇಘನಾ ಮದುವೆ ಬಗ್ಗೆ ಪ್ರಮೀಳಾ ಜೋಷಾಯಿ ಏನು ಹೇಳಿದ್ದಾರೆ ಗೊತ್ತಾ?
Meghana Raj
ಸಂದರ್ಶನದಲ್ಲಿ ಮಾತನಾಡಿರುವ ಪ್ರಮೀಳಾ ಜೋಷಾಯಿ, ಮಗಳು ಮೇಘನಾ ಎರಡನೇ ಮದುವೆ ಆಗಲಿ ಅನ್ನೋದು ನನ್ನ ಆಸೆಯೂ ಆಗಿದೆ ಎಂದಿದ್ದಾರೆ. ನಮಗೆ ಮಗಳ ಸಂತೋಷ ಮುಖ್ಯ ಅಂತ ಹೇಳುವ ಪ್ರಮೀಳಾ, ಆಕೆಯ ಇಷ್ಟದಂತೆ ಇರಲು ನಾವು ಎಲ್ಲಾ ಅವಕಾಶಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
Meghana Raj
ಮೇಘನಾಳ ಫ್ರೆಂಡ್ಸ್ ಮನೆಗೆ ಬಂದ್ರೆ ಅವರ ಜೊತೆ ಹೋಗಲು ಹೇಳುತ್ತೇವೆ. ಮಗನನ್ನು ನಾವು ನೋಡಿಕೊಳ್ಳುತ್ತೇವೆ. ಮಗನ ಬಗ್ಗೆ ಯೋಚನೆ ಮಾಡದೇ ಸಂತೋಷದಿಂದ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡು ಅಂತಾನೂ ಹೇಳುತ್ತೇವೆ ಎಂದಿದ್ದಾರೆ ಪ್ರಮೀಳಾ ಜೋಷಾಯಿ.
ಕೆಲವೊಮ್ಮೆ ಸೋದರಿಯರ ಮನೆಗೆ ಹೋಗ್ತಾಳೆ. ಅತ್ತೆಯ ಮನೆಗೂ ಹೋಗಿ ಅಲ್ಲೇ ಇಡೀ ದಿನ ಕಳೆದು ಬರುತ್ತಾಳೆ. ಅವಳ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಯಾವ ಕೆಲಸ ಅಥವಾ ನಿರ್ಧಾರಕ್ಕೂ ನಾವು ಅಡ್ಡಿಯುಂಟು ಮಾಡಲ್ಲ. ಮಗಳ ನಿರ್ಧಾರವನ್ನು ಬೆಂಬಲಸುತ್ತೇವೆ ಮತ್ತು ನಮ್ಮಿಂದ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದ್ದಾರೆ.
Meghana Raj Raayan Raj Sarja
ಇಂದಿನವರೆಗ ತನಗೆ ಒಬ್ಬ ಸಂಗಾತಿ ಬೇಕು ಎಂದು ಒಮ್ಮೆಯೂ ಹೇಳಿಕೊಂಡಿಲ್ಲ. ನಾವೇ ಹಲವು ಬಾರಿ ಆಕೆಯ ಫ್ರೆಂಡ್ಸ್ ಕಡೆಯಿಂದ ಮದುವೆ ವಿಚಾರ ಪ್ರಸ್ತಾಪಿಸುವಂತೆ ಹೇಳಿದ್ದೇವೆ ಎಂಬ ವಿಷಯವನ್ನು ಹಂಚಿಕೊಂಡರು. ಮಗಳು ಮಗನ ಜೊತೆ ಖುಷಿ ಖುಷಿಯಾಗಿದ್ದಾಳೆ ಎಂದು ಹೇಳಿದ್ದಾರೆ.
ಆದರೆ ಆಕೆಯ ಗೆಳಯರು ಯಾರೂ ಮೇಘನಾ ಜೊತೆ ಎರಡನೇ ಮದುವೆ ಬಗ್ಗೆ ಮಾತನಾಡಲು ಮುಂದಾಗಿಲ್ಲ. ಮೇಘನಾ ಜೊತೆ ಈ ವಿಷಯದ ಬಗ್ಗೆ ಮಾತನಾಡಲು ಭಯಪಡ್ತಾರೆ.ಸಂಬಂಧಿಕರು, ಆಪ್ತರು ಮಗಳಿಗೆ ಎರಡನೇ ಮದುವೆ ಮಾಡಿಸುವಂತೆ ಸಲಹೆ ಕೊಡ್ತಾರೆ. ಆದ್ರೆ ಮೇಘನಾ ಒಮ್ಮೆಯೂ ಮದುವೆ ಆಸೆಯನ್ನು ನೇರವಾಗಲಿ ಅಥವಾ ಪರೋಕ್ಷವಾಗಿಯೂ ಹೇಳಿಕೊಂಡಿಲ್ಲ ಎಂದರು.
ಮೇಘನಾ ತನ್ನಲ್ಲಿರುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಲು. ತನ್ನ ಕಷ್ಟ ನೋವನ್ನು ಸಹ ಯಾರೊಂದಿಗೆ ಶೇರ್ ಮಾಡಿಕೊಳ್ಳಲ್ಲ. ಮಗಳಿಗೆ ತನ್ನನ್ನು ಸಮಾಧಾನ ಮಾಡಿಕೊಳ್ಳುವಮ ಸಾಮಾರ್ಥ್ಯ ಆಕೆಗಿದೆ ಎಂದು ಹೇಳಿದರು. ನಾವಾದ್ರೆ ಸಣ್ಣ ಕಷ್ಟ ಬಂದ್ರೆ ಆಪ್ತರ ಜೊತೆ ಹಂಚಿಕೊಳ್ಳುತ್ತೇವೆ. ಆದರೆ ಮಗಳು ಹಾಗಲ್ಲ. ಆಕೆ ತುಂಬಾ ಭಿನ್ನ ಎಂದರು.
ಮಕ್ಕಳು ಜೀವನದಲ್ಲಿ ಸೆಟಲ್ ಆಗಬೇಕು ಅನ್ನೋದು ಎಲ್ಲರ ಆಸೆ ಆಗಿರುತ್ತದೆ. ನಮ್ಮ ಮನೆಯವರಿಗೂ ಇದೇ ಆಸೆ ಇದೆ. ಮಗಳಿಗೆ ಎಲ್ಲರ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ. ದೇವರು ಇದ್ದಾನೆ ಆತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ.ಆಗ ಮಗಳಿಗೆ ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಮೀಳಾ ಜೋಷಾಯಿ ವಿಶ್ವಾಸ ವ್ಯಕ್ತಪಡಿಸಿದರು.
10 ವರ್ಷ ಪ್ರೀತಿಸಿದ ಬಳಿಕ ನಟ ಚಿರಂಜೀವಿ ಸರ್ಜಾರನ್ನು ಮೇಘನಾ ರಾಜ್ (Chiranjeevi Sarja Meghana Raj) 2ನೇ ಮೇ 2018ರಲ್ಲಿ ಮದುವೆಯಾಗಿದ್ದರು.7ನೇ ಜೂನ್ 2020ರಲ್ಲಿ ಚಿರಂಜೀವಿ ಸರ್ಜಾ ನಿಧನರಾದರು. 22ನೇ ಅಕ್ಟೋಬರ್ 2020ರಂದು ಮೇಘನಾ ರಾಜ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ರಾಯನ್ ರಾಜ್ ಸರ್ಜಾ (, Raayan Raj Sarja) ಎಂದು ಹೆಸರಿಟ್ಟಿದ್ದಾರೆ.