ಉಯಿರ್ & ಉಲಗ್ ಜೊತೆ ಗ್ರೀಸ್‌ನಲ್ಲಿ ಸುಂದರ ಕ್ಷಣ ಕಳೆದ ನಯನತಾರಾ: ಫೋಟೋಸ್

First Published | Sep 22, 2024, 7:14 PM IST

ಲೇಡಿ ಸೂಪರ್‌ ಸ್ಟಾರ್ ತಮಿಳು ನಟಿ ನಯನತಾರಾ ಪತಿ ಮಕ್ಕಳೊಂದಿಗೆ ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದು, ಅಭಿಮಾನಿಗಳಿಗೆ ಫೋಟೋಗಳ ರಸದೌತಣ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ರೀಸ್ ಪ್ರವಾಸದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಅವಳಿ ಮಕ್ಕಳಾದ ಉಯಿರ್ ಹಾಗೂ ಉಲಗ್ ಜೊತೆ ನಟಿ ಸಮಯ ಕಳೆಯುತ್ತಿದ್ದಾರೆ. 

ಮಕ್ಕಳು ಹಾಗೂ ತಾಯಿಯ ಸುಂದರವಾದ ಬಾಂಡಿಂಗ್ ಅನ್ನು ಮೊದಲ ಫೋಟೋ ತೋರಿಸುತ್ತಿದೆ. ಎರಡನೇ ಫೋಟೋದಲ್ಲಿ ನಟಿ ಮಗನ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ಫೋಟೋಗಳಿಗೆ ನಟಿ 'ನನ್ನ ಹೃದಯ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಎಲ್ಲಾ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವೈರಲ್ ಆಗಿದ್ದು  ಒಬ್ಬರು ವಾವ್ ನೀವು ಹೃದಯವನ್ನು ಗೆದ್ದಿದ್ದೀರಿ ಖುಷಿಯಾಗಿರಿ, ನಿಮಗೆ ದೇವರು ಸದಾ ಆಶೀರ್ವದಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ.  

Tap to resize

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು 2022ರ ಜೂನ್‌ನಲ್ಲಿ ಮದುವೆಯಾಗಿದ್ದರು. ಈ ಮದುವೆಯಲ್ಲಿ ಶಾರುಖ್ ಖಾನ್‌ ಎ.ಆರ್ ರೆಹಮಾನ್, ಸೂರ್ಯ ಹಾಗೂ ರಜನಿಕಾಂತ್  ಸೇರಿದಂತೆ  ಜೋಡಿಗೆ ಆತ್ಮೀಯರಾದ ಕೆಲ ಅತಿಥಿಗಳು, ಕೇವಲ ಆತ್ಮೀಯ ಸ್ನೇಹಿತರು ಕುಟುಂಬದವರು ಮಾತ್ರ ಭಾಗವಹಿಸಿದ್ದರು.

ಇದಾದ ನಂತರ ಬಾಡಿಗೆ ತಾಯ್ತನದ ಮೂಲಕ ಈ ಜೋಡಿ 2022ರಲ್ಲಿ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದರು. ವಿಘ್ನೇಶ್ ಶಿವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಘೋಷಣೆ ಮಾಡಿದ್ದರು. ಉಯಿರ್ ಹಾಗೂ ಉಲ್ಗಮ್ ಕಾಲುಗಳಿಗೆ ಇಬ್ಬರು ಮುತ್ತಿಕ್ಕುವ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಪೋಷಕರಾದ ಸಂತಸವನ್ನು ಜೋಡಿ ಹಂಚಿಕೊಂಡಿತ್ತು. 

ನಯನಾ ಹಾಗೂ ನಾನು ಅಪ್ಪ ಅಮ್ಮ ಆಗಿದ್ದೇವೆ, ನಮಗೆ ಅವಳಿ ಗಂಡು ಮಕ್ಕಳು ಜನಿಸಿವೆ, ನಮ್ಮೆಲ್ಲಾ ಪ್ರಾರ್ಥನೆಗಳು ಹಾಗೂ ನಮ್ಮ ಪೂರ್ವಜರ ಆಶೀರ್ವಾದಗಳು ಜೊತೆಯಾಗಿ ನಮ್ಮ ಮಕ್ಕಳ ರೂಪದಲ್ಲಿ ಬಂದು ನಮ್ಮ ಒಳ್ಳೆಯ ಮನದಾಸೆಯನ್ನು ಪೂರೈಸಿವೆ. ಈ ಸಂದರ್ಭದಲ್ಲಿ ನಿಮ್ಮ ಎಲ್ಲಾ ಆಶೀರ್ವಾದಗಳು ನಮ್ಮ ಹಾಗೂ ಮಕ್ಕಳಾದ ಉಯಿರ್ ಹಾಗೂ ಉಲಗ್ ಮೇಲಿರಲಿ  ಜೀವನ ತುಂಬಾ ಸುಂದರ ಹಾಗೂ ಪ್ರಕಾಶಮಾನವಾಗಿ ಕಾಣುತ್ತಿವೆ ದೇವರು ತುಂಬಾ ಶ್ರೇಷ್ಠನು ಎಂದು ಬರೆದುಕೊಂಡಿದ್ದಾರೆ.


ಈ ಜೋಡಿಯ ಸಿನಿಮಾಗಳ ಬಗ್ಗೆ ಹೇಳುವುದಾದರೆ, ನಯನತಾರಾ ಅವರು ಕೊನೆಯದಾಗಿ ಮಲೆಯಾಳಂ ಸಿನಿಮಾ ಗೋಲ್ಡ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್‌ ಜೊತೆ ಕಾಣಿಸಿಕೊಂಡಿದ್ದಾರೆ.  ಹಾಗೆಯೇ ಕಳೆದ ವರ್ಷ ನಯನತಾರಾ ತಮ್ಮ ಚೊಚ್ಚಲ ಬಾಲಿವುಡ್ ಸಿನಿಮಾ ಜವಾನ್‌ನಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದರು, ಇದರ ಜೊತೆಗೆ ತಮಿಳು ಸಿನಿಮಾಗಳಾದ  ಇರ್ವಿಯನ್ & ಅನ್ನಪೂರ್ಣಿ: ದಿ ಗಾಡೆಸ್ ಆಫ್ ಫುಡ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. 

Latest Videos

click me!