ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್‌ ಒದ್ದೆ ಸೀರೆಯ ಹಾಟ್‌ ಫೋಟೋಸ್‌!

First Published | Oct 26, 2023, 8:28 PM IST

ಕನ್ನಡದಲ್ಲಿ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿ ವರಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದ ಮಾಳವಿಕಾ ಮೋಹನನ್‌ಗೆ ಜನಪ್ರಿಯತೆ ತಂದುಕೊಟ್ಟಿದ್ದು ತಮಿಳಿನ ಮಾಸ್ಟರ್‌ ಚಿತ್ರ. ತಮ್ಮ ಹಾಟ್‌ ಅವತಾರದಿಂದಲೇ ಇವರು ಜನಪ್ರಿಯರಾಗಿದ್ದಾರೆ.

ನಟಿ ಮಾಳವಿಕಾ ಮೋಹನನ್‌ ಸಖತ್‌ ಹಾಟ್‌ ಆಗಿದ್ದಾರೆ. ಅವರ ಹೊಸ ಫೋಟೋಶೂಟ್‌ನಲ್ಲಿ ಮತ್ತೊಮ್ಮೆ ಬೋಲ್ಡ್‌ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.

30 ವರ್ಷದ ಮಾಳವಿಕಾ ಮೋಹನನ್‌ ಅವರ ಗ್ಲಾಮರಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಹೊಳೆಯಲ್ಲಿ ಒದ್ದೆ ಸೀರೆಯಲ್ಲಿ ಅವರು ಕೊಟ್ಟಿರುವ ಪೋಸ್‌ಗಳು ವೈರಲ್‌ ಆಗಿವೆ.

Tap to resize

ಹಿಂದೆಯೂ ಸಾಕಷ್ಟು ಬಾರಿ ತಮ್ಮ ಹಾಟ್‌ ಫೋಟೋಸ್‌ಗಳನ್ನು ಹಂಚಿಕೊಂಡು ಜನಪ್ರಿಯರಾಗಿದ್ದ ಮಾಳವಿಕಾ ಮೋಹನನ್‌, ಮಲಯಾಳಂ ಚಿತ್ರರಂಗದ ಮೂಲದವರು.

ಆರಂಭಿಕ ಎರಡು ಸಿನಿಮಾವನ್ನು ಮಲಯಾಳಂ ಭಾಷೆಯಲ್ಲಿ ಮಾಡಿದ್ದ ಮಾಳವಿಕಾ ಮೋಹನನ್‌ 2016ರಲ್ಲಿ ಕನ್ನಡದ ನಾನು ಮತ್ತು ವರಲಕ್ಷ್ಮೀ ಸಿನಿಮಾದಲ್ಲಿ ನಾಯಕಿಯಾಗಿದ್ದರು.

ಹೊಸ ನಟ ಪೃಥ್ವಿ ಅವರಿಗೆ ಜೋಡಿಯಾಗಿದ್ದ ಅವರು ವರಲಕ್ಷ್ಮೀ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಸಿನಿಮಾ ಇದಾಗಿತ್ತು.

ಹೊಸ ಫೋಟೋಶೂಟ್‌ನಲ್ಲಿ ನದಿಯಲ್ಲಿ ಮಿಂದೆದ್ದ ಅಪ್ಸರೆಯಂತೆ ಅವರು ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಬಿಳಿ ಬಣ್ಣದ ಸೀರೆಯುಟ್ಟು ಸಖತ್‌ ಬೋಲ್ಡ್‌ ಆಗಿ ಫೋಟೋ ಶೂಟ್‌ಗೆ ಪೋಸ್‌ ನೀಡಿದ್ದು, ಇದರ ಸಾಕಷ್ಟು ಚಿತ್ರಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಾಕಿದ್ದಾರೆ. 

ಮಾಳವಿಕಾ ಮೋಹನನ್‌ ಈಗ ಮಲಯಾಳಂ ಮಾತ್ರವಲ್ಲ ದಕ್ಷಿಣ ಭಾರತದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಪ್ರಸಿದ್ಧ ನಟಿಯಾಗಿದ್ದಾರೆ. 

2021ರಲ್ಲಿ ಇಳಯದಳಪತಿ ವಿಜಯ್‌ ಅವರ ಮಾಸ್ಟರ್‌ ಚಿತ್ರದಲ್ಲಿ ಚಾರುಲತಾ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ಅವರು ಇನ್ನಷ್ಟು ಜನಪ್ರಿಯರಾಗಿದ್ದರು.

ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲೂ ಜನಪ್ರಿಯರಾಗಿರುವ ಈಕೆ ಈಗ ಬಾಲಿವುಡ್‌ನಲ್ಲೂ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲಿಯೇ ಅವರ ಬಾಲಿವುಡ್‌ ಚಿತ್ರ ಬಿಡುಗಡೆಯಾಗಲಿದೆ.

ಸದಾ ಗ್ಲಾಮರಸ್‌ ಫೋಟೋಶೂಟ್‌ನಿಂದಲೇ ಸುದ್ದಿಯಾಗುವ ನಟಿ ಮಾಳವಿಕಾ ಮೋಹನನ್‌ ಹೊಸ ಶೂಟ್‌ನಲ್ಲಿ ಮಾದಕವಾಗಿ ಕಾಣುತ್ತಿದ್ದಾರೆ. 

ಪ್ರಖ್ಯಾತ ಛಾಯಾಗ್ರಾಹಕ ಮೋಹನನ್‌ ಅವರ ಪುತ್ರಿಯಾಗಿರುವ ಮಾಳವಿಕಾ ಅವರ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿವೆ.

ಈ ವರ್ಷ ಅವರು ಅಭಿನಯಿಸಿರುವ ಕ್ರಿಸ್ಟಿ ಸಿನಿಮಾ ಬಿಡುಗಡೆಯಾಗಿದ್ದು, ತಮಿಳಿನ ತಂಗಾಲನ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. 

ಡಿಫರೆಂಟ್‌ ಆದ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಇತ್ತೀಚೆಗೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಅವರು ಪ್ರಭಾಸ್ ಮತ್ತು ಮಾರುತಿ ಚಿತ್ರದ ಶೂಟಿಂಗ್‌ಗೆ ಸೇರಲಿದ್ದಾರೆ.

ಒಂದು ದಿನದ ಹಿಂದೆ ಮಾಳವಿಕಾ ಮೋಹನನ್‌ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ಈಗಾಗಲೇ ದೊಡ್ಡ ಮಟ್ಟದ ಪ್ರತಿಕ್ರಿಯೆಗಳು ಬಂದಿವೆ.

ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಈಕೆ 3.9 ಮಿಲಿಯನ್‌ ಫಾಲೋವರ್ಸ್‌ಗಳನ್ನು ಇನ್ಸ್‌ಟಾಗ್ರಾಮ್‌ ಒಂದರಲ್ಲಿಯೇ ಹೊಂದಿದ್ದಾರೆ. 

'ಮುಂದಿನ ಬಾರಿ ನೀವು ಇಂಥ ಫೋಟೋಗೆ ಪೋಸ್‌ ನೀಡುವಾಗ ಚಿನ್ನದ ಬಣ್ಣದ ಸೊಂಟದ ಚೈನನ್ನು ಧರಿಸಿ ಚೆನ್ನಾಗಿ ಕಾಣುತ್ತದೆ..' ಎಂದು ಅಭಿಮಾನಿಯೊಬ್ಬರು ಅವರಿಗೆ ಸಲಹೆಯನ್ನು ನೀಡಿದ್ದಾರೆ.

2013 ರಲ್ಲಿ ಮಲಯಾಳಂನ 'ಪೆಟ್ಟಂ ಪೋಲ್' ಚಿತ್ರದ ಮೂಲಕ ಮಾಳವಿಕಾ ಮೋಹನನ್‌ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಮಾಳವಿಕಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.

Latest Videos

click me!