ಬಿಬ್ಬೂಜಾನ್‌ಗೆ ಹೇರ್‌ಸ್ಟೈಲ್ ಮ್ಯಾಚ್ ಆಗ್ತಿಲ್ಲ ಎಂದ ಫ್ಯಾನ್ಸ್‌; ಫೋಟೋ ವೈರಲ್

First Published | May 18, 2024, 3:33 PM IST

ಹೀರಾಮಂಡಿಯಲ್ಲಿ ತಮ್ಮ ಮಾರ್ಜಲ್ ನಡಿಗೆಯ ಮೂಲಕ ಪಡ್ಡೆಗಳ ನಿದ್ದೆಗೆ ಕೊಳ್ಳಿ ಇಟ್ಟಿರೋ ಚೆಲುವೆ ಅದಿತಿ ರಾವ್ ಹೈದರಿ. ಇದೀಗ ಅದಿತಿ  ರಾವ್ ಹೈದರಿ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ .

ಹೀರಾಮಂಡಿಯ ಸಕ್ಸಸ್‌ ಖುಷಿಯಲ್ಲಿರುವ ಅದಿತಿ ರಾವ್ ಹೈದರಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿರೋ ಫೋಟೋಗಳು ವೈರಲ್ ಆಗುತ್ತಿವೆ. ಬಿಬ್ಬೂಜಾನ್ ಪಾತ್ರದಲ್ಲಿ ಗಮನ ಸೆಳೆದಿರುವ ಆದಿತಿ ರಾವ್  ಹೈದರಿಯವರ ಮಾರ್ಜಲ್ ನಡಿಗೆಗೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

ಇಂದು ಶ್ವೇತ ವರ್ಣದ ಶಲ್ವಾರ್ ಕಮೀಜ್  ಧರಿಸಿ, ಓಪರ್ ಹೇರ್ ಬಿಟ್ಕೊಂಡು ಅದತಿ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಶ್ವೇತ ಶಲ್ವಾರ್ ಮೇಲೆ ಬಣ್ಣ ಬಣ್ಣದ ಹೂಗಳು ಇರೋದನ್ನು ಗಮನಿಸಬಹುದಾಗಿದೆ. ಇಂದು ಒಟ್ಟು ಐದು ಫೋಟೋ  ಶೇರ್ ಮಾಡಿಕೊಂಡಿದ್ದಾರೆ.

Tap to resize

ಈ ಫೋಟೋಗಳು ಭರಪೂರ ಕಮೆಂಟ್‌ಗಳು ಬರುತ್ತಿದ್ದು, ಓರ್ವ ಅಭಿಮಾನಿಯ ಈ ಡ್ರೆಸ್‌ಗೆ ನಿಮ್ಮ ಹೇರ್‌ಸ್ಟೈಲ್ ಮ್ಯಾಚ್‌ ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಹೀರಾಮಂಡಿ ನೋಡಿದ ಕ್ಷಣದಿಂದ ನನಗೆ ನಿಮ್ಮ ಮೇಲೆ ಕ್ರಶ್ ಆಗಿದೆ ಅಂತ ಕೆಲವರು ಬರೆದುಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಹೀರಾಮಂಡಿ ಮೂಡಿ ಬಂದಿದೆ. ಹೀರಾಮಂಡಿ ಮೂಲಕ ಸಂಜಯ್ ಲೀಲಾ ಬನ್ಸಾಲಿ ಓಟಿಟಿ  ಪ್ಲಾಟ್‌ಫಾರಂಗೆ ಪಾದಾರ್ಪಣೆ ಮಾಡಿದ್ದಾರೆ. ಹೀರಾಮಂಡಿಯಲ್ಲಿ ಮನಿಷಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ ಸೇರಿದಂತೆ ದೊಡ್ಡ ತಾರಾ ಬಳಗವನ್ನೇ ಹೊಂದಿದೆ.

ಹೀರಾಮಂಡಿ ಮಹಿಳಾ ಪ್ರಧಾನ ವೆಬ್‌ ಸಿರೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವರ್ಷದ ಕೇನ್ಸ್‌ ಫಿಲಂ ಫೆಸ್ಟಿವಲ್‌ನಲ್ಲಿಯೂ ಅದಿತಿ ರಾವ್ ಹೈದರಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ರೆಡ್‌ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟ, ನಿರ್ಮಾಪಕ ಸಿದ್ಧಾರ್ಥ ಮತ್ತು ಅದಿತಿ ರಾವ್ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ತಾವಿಬ್ಬರು ಎಂಗೇಜ್ ಆಗಿರೋ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ತೆಲುಗಿನ ಮಂಗಳವಾರಂ ಸಿನಿಮಾ ವೇಳೆ ಅದಿತಿ ಮತ್ತು ಸಿದ್ಧಾರ್ಥ ಮೊದಲ ಬಾರಿ ಭೇಟಿಯಾಗಿದ್ದರು.

ಅದಿತಿ ರಾವ್ ಮತ್ತು ಸಿದ್ಧಾರ್ಥ್‌ ಇಬ್ಬರಿಗೂ ಇದು ಎರಡನೇ ಮದುವೆಯಾಗಲಿದೆ. ನಟ ಸತ್ಯದೀಪ್ ಮಿಶ್ರಾ ಅವರಿಗೆ 2012ರಲ್ಲಿ ಅದಿತಿ ವಿಚ್ಛೇದನ ನೀಡಿದ್ದರು. 2003ರಲ್ಲಿ ಮೇಘನಾ ಎಂಬವರನ್ನು ಸಿದ್ಧಾರ್ಥ್ ಮದುವೆಯಾಗಿದ್ದರು. 2007ರಿಂದ ಇಬ್ರು ದೂರ ದೂರವಾಗಿದ್ದಾರೆ.

ಅದಿತಿ ರಾವ್ ಹೈದರಿ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ತೆಲುಗು, ತಮಿಳು, ಹಿಂದಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದಿತಿ ರಾವ್ ಹೈದರಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 11.2 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿರುತ್ತಾರೆ.
 

Latest Videos

click me!