ಮೌನಿ ರಾಯ್ ಬಿಕಿನಿ ಫೋಟೋಗಳಿಗೆ ಅವರೆಲ್ಲಿ ಎಂದು ಕೇಳಿದ ಅಭಿಮಾನಿಗಳು!

First Published May 26, 2024, 2:52 PM IST

ಬಾಲಿವುಡ್ ಹಾಟ್ ಬೆಡಗಿ ಅಂತಾನೇ ಗುರುತಿಸಿಕೊಂಡಿರುವ ನಟಿ ಮೌನಿ ರಾಯ್ ಬೀಚ್‌ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ಕಿರುತೆರೆಯ ನಾಗಿಣಿ ಧಾರಾವಾಹಿ ಮೂಲಕ ಮನೆಮಾತಾದ ನಟಿ ಮೌನಿ ರಾಯ್ ಸದ್ಯ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದು, ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂದು ಬೀಚ್‌ನಲ್ಲಿ ಹಾಟ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದು, ಇದಕ್ಕೆ ಮತ್ತೋರ್ವ ನಟಿ ಕಮೆಂಟ್ ಮಾಡಿದ್ದಾರೆ.

Mouni Roy

ಮೌನಿರಾಯ್ ಇಂಡೋನೇಷಿಯಾ ಪ್ರವಾಸದಲ್ಲಿದ್ದು, ಅಲ್ಲಿಯ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬಾಲಿಗೆ ಭೇಟಿ ನೀಡಿದ್ದ ಮೌನಿ ರಾಯ್ ಸುಂದರ ಜಲಪಾತದ ಫೋಟೋ ಪೋಸ್ಟ್ ಮಾಡಿದ್ದರು. ಜಲಾಪತದಲ್ಲಿ ಮಿಂದೆದ್ದ ವಿಡಿಯೋ ಹಂಚಿಕೊಂಡಿದ್ದಕ್ಕೆ ನೀರು ಬಿಸಿ ಆಗಿರುತ್ತೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು.

Mouni Roy

ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಮೌನಿರಾಯ್‌ಗೆ ನಿಮ್ಮ ಜೊತೆ ದಿಶಾ ಪಠಾಣಿ ಇರಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ದಿಶಾ ಮತ್ತು ಮೌನಿ ನಡುವೆ ಸ್ಪರ್ಧೆಯಾದ್ರೆ ಯಾರಿಗೆ ನಿಮ್ಮ ಮತ ಎಂದು ಕೇಳುತ್ತಿದ್ದಾರೆ. ಮೌನಿ ರಾಯ್ ಫೋಟೋಗೆ ಕ್ಯೂಟ್ ಎಂದು ದಿಶಾ ಪಠಾಣಿ ಕಮೆಂಟ್ ಸಹ ಮಾಡಿದ್ದಾರೆ.

ಈ ಹಿಂದೆ ಬೀಚ್‌ನಲ್ಲಿ ಮೌನಿರಾಯ್ ಮತ್ತು ದಿಶಾ ಪಠಾಣಿ ಜೊತೆಯಾಗಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ಫೋಟೋ ನೋಡಿದ ನೆಟ್ಟಿಗರು ನೀವಿಬ್ಬರು ಸಲಿಂಗಿಗಳಾ ಎಂದು ಪ್ರಶ್ನೆ ಮಾಡಿದ್ದರು.ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಇಬ್ಬರೂ ಒಂದೇ ಜಿಮ್‌ಗೆ ಒಂದೇ ಸಮಯಕ್ಕೆ ಹೋಗುತ್ತಾರೆ.

ಜೂನ್ 7ರಂದು ಮೌನಿ ರಾಯ್ ನಟನೆಯ ಬ್ಲಾಕ್ ಔಟ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.ಈ ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ, ಸುನಿಲ್ ಗ್ರೋವರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 7ರಂದು ಜಿಯೋ ಸಿನಿಮಾ ಪ್ರೀಮಿಯರ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದಾಗಿದೆ.

2006ರಲ್ಲಿ ತೆರೆ ಕಾಣುತ್ತಿದ್ದ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ಮೂಲಕ ಮೌನಿರಾಯ್ ತಮ್ಮ ವೃತ್ತಿಜೀವನ ಆರಂಭಿಸಿದ್ದರು. 2015-16ರ ಅವಧಿಯಲ್ಲಿ ಪ್ರಸಾರವಾಗಿದ್ದ ನಾಗಿನ್ ಧಾರಾವಾಹಿ ಮೌನಿರಾಯ್‌ಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಕೆಜಿಎಫ್-2ರ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೌನಿ ರಾಯ್ ಸಖತ್ ಆಗಿ ಹೆಜ್ಜೆ ಹಾಕಿದ್ದರು.

ಮೌನಿರಾಯ್ ಮೂಲತಃ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು,ನಟಿಯ ಪೋಷಕರು ಸಹ ರಂಗಭೂಮಿ ಕಲಾವಿದರಾಗಿದ್ದರು. ಧಾರಾವಾಹಿ ಬಳಿಕ ಅಕ್ಷಯ್ ಕುಮಾರ್ ನಟನೆಯ ಗೋಲ್ಡ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಮೌನಿರಾಯ್ ನಟಿಸಿದ್ದಾರೆ. ಇದರ ಜೊತೆಗೆ ವೆವ್‌ಸಿರೀಸ್ ನಲ್ಲಿಯೂ ಮೌನಿರಾಯ್ ಕಾಣಿಸಿಕೊಂಡಿದ್ದಾರೆ. 

ದುಬೈ ಮೂಲದ ಮಲಯಾಳಿ ಉದ್ಯಮಿ ಸೂರಜ್ ನಂಬಿಯಾರ್‌ ಅವರನ್ನು 2022ರಲ್ಲಿ ಮದುವೆಯಾಗಿದ್ದಾರೆ.ಇಬ್ಬರ ಮದುವೆ ಗೋವಾ ರಾಜಧಾನಿ ಪಣಜಿಯಲ್ಲಿ ಬಂಗಾಳಿ ಮತ್ತು ಕೇರಳ ಪದ್ಧತಿಯಲ್ಲಿ ನಡೆದಿತ್ತು. ಮದುವೆಗೆ ಕುಟುಂಬಸ್ಥರು ಮತ್ತು ಆಪ್ತರಿಗೆ ಆಹ್ವಾನ ನೀಡಲಾಗಿತ್ತು.

Latest Videos

click me!