2017ನೇ ಸಾಲಿನ ಮಾನುಷಿ ಚಿಲ್ಲರ್ ಯಾರಿಗೆ ಗೊತ್ತಿಲ್ಲ ಹೇಳಿ. ಸೋಶಿಯಲ್ ಮೀಡಿಯಾದಲ್ಲಿ ಪಡ್ಡೆಹುಡುಗರ ಹಾಟ್ ಫೇವರೇಟ್ ಆಗಿರುವ ಮಾನುಷಿ ಚಿಲ್ಲರ್ ತುಂಡುಡುಗೆ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಸಿನಿಮಾಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ರೂ ಮಾನುಷಿ ಚಿಲ್ಲರ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸುಂದರ ದ್ವೀಪವೊಂದಕ್ಕೆ ಭೇಟಿ ನೀಡಿರುವ ಮಾನುಷಿ ಚಿಲ್ಲರ್ ಅಲ್ಲಿಯ ನಿಸರ್ಗದಲ್ಲಿ ಕ್ಲಿಕ್ಕಿಸಿಕೊಂಡ ಮಾದಕ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರೊಂದಿಗೆ ಇಲ್ಲಿಯ ರೋಮಾಂಚನದ ಅನುಭವವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಮಾನುಷಿ ಚಿಲ್ಲರ್ ಬರೆದುಕೊಂಡಿದ್ದಾರೆ.
ಸೂರ್ಯನ ಬೆಳಕಿಗೆ ಮಾದಕ ದೇಹವನ್ನು ಒಡ್ಡಿರುವ ಮಾನುಷಿ ಚಿಲ್ಲರ್ ಕೆಂಬಣ್ಣದಲ್ಲಿ ಮಿನುಗುತ್ತಿದ್ದಾರೆ. ಟು ಪೀಸ್ ನಲ್ಲಿ ಕ್ಲಿಕ್ಕಿಸಿಕೊಂಡಿರುವ ಈ ಫೋಟೋಗಳು ಸೋಶಿಯಲ್ ಮೀಡಿಯಾದ ತಾಪಮಾನವನ್ನು ಏರಿಕೆ ಮಾಡಿದೆ. ಈ ಫೋಟೋಗೆ 1.74 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು 1.4 ಸಾವಿರ ಕಮೆಂಟ್‌ಗಳು ಬಂದಿದೆ.
ಈ ಫೋಟೋಗೆ ಕಮೆಂಟ್ ಮಾಡಿರುವ ನಟಿ ಅಲಾಯಾ ಎಫ್, ನನಗೆ ನೀವು ಧರಿಸಿದ ಬಿಕಿನಿ ಬೇಕೆಂಬ ಬೇಡಿಕೆಯನ್ನು ಇರಿಸಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಮಾನುಷಿ, ಶೀಘ್ರದಲ್ಲಿಯೇ ತಲುಪಿಸಲಾಗುವುದು ಎಂದಿದ್ದಾರೆ. ಅಲಾಯಾ ಜವಾನಿ ಜಾನೇಮನ್, ಫ್ರೆಡ್ಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಈ ಫೋಟೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನೀವು ಸಹ ಬಟ್ಟೆ ಬಿಚ್ಚಲು ಸ್ಟಾರ್ಟ್ ಮಾಡಿದ್ದೀರಾ? ಈಗಾಗಲೇ ಬಿಸಿಗಾಳಿ ವಿಪರೀತವಾಗಿದ್ದು, ಮತ್ತಷ್ಟು ತಾಪಮಾನ ಹೆಚ್ಚಳ ಮಾಡಬೇಡಿ. ನೀವು ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದೀರಿ. ಲುಕ್ ಲವ್ಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಕೆಂಪು ಬಣ್ಣದ ಬಿಕಿನಿ ಧರಿಸಿದ್ದ ಫೋಟೋ ಮತ್ತು ವಿಡಿಯೋಗಳನ್ನು ಮಾನುಷಿ ಚಿಲ್ಲರ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ 60 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಮಾನುಷಿ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾನುಷಿ ಸದಾ ಸಕ್ರಿಯರಾಗಿರುತ್ತಾರೆ.
2017ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಮಾನುಷಿ ಚಿಲ್ಲರ್ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಕಿಲಾಡಿ ಅಕ್ಷಯ್ ಕುಮಾರ್ ಜೊತೆ ಮಾನುಷಿ ಚಿಲ್ಲರ್ ಮೊದಲು ತೆರೆಹಂಚಿಕೊಂಡಿದ್ದರು. ಮಾನುಷಿ ಚಿಲ್ಲರ್ ನಟನೆಯ ಮೊದಲ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಅಭಿಮಾನಿಗಳನ್ನು ತಲುಪುವಲ್ಲಿ ವಿಫಲವಾಗಿತ್ತು.
ಸಾಮ್ರಾಟ್ ಪೃಥ್ವಿರಾಜ್ ಬಳಿಕ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಕಾಮಿಡಿ ಸಿನಿಮಾದಲ್ಲಿಯೂ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್‌ಗೆ ಮಾನುಷಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತೆಲುಗಿನ ಆಪರೇಷನ್ ವ್ಯಾಲೆಂಟೈನ್‌ನಲ್ಲಿ ನಟಿಸಿದ್ದರು.