ಸಿನಿಮಾ ಸ್ಟಾರ್ಸ್ ಅಂದ್ರೆ ಅಭಿಮಾನಿಗಳು ಹುಚ್ಚರಂತಾಗಿ ಬಿಡುತ್ತಾರೆ. ನೀವು ಗಮನಿಸಿದರೆ, ತಾರೆಗಳ ಇಡೀ ಜೀವನವು ಅಭಿಮಾನಿಗಳ ಸುತ್ತ ಸುತ್ತುತ್ತದೆ. ಕೆಲವೊಮ್ಮೆ ಸೆಲಬ್ರೆಟಿಗಳು ಅಭಿಮಾನಿಗಳ ಪ್ರೀತಿಯಲ್ಲಿ ಮುಳುಗಿ ಎದ್ದರೆ, ಕೆಲವೊಮ್ಮೆ ಅಭಿಮಾನಿಗಳ ಕೋಪಕ್ಕೆ ಗುರಿಯಾಗುತ್ತಾರೆ. ಅದರಲ್ಲೂ ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕ ಭಾರಿ ಕಾಂಟ್ರೋವರ್ಸಿ (Controversy ) ಕ್ರಿಯೇಟ್ ಮಾಡಿದ ಬಾಲಿವುಡ್ ಸೆಲೆಬ್ರೆಟಿಗಳೇ ಹೆಚ್ಚು. ಬನ್ನಿ ಅವರ ಬಗ್ಗೆ ತಿಳಿಯೋಣ.
ಪೂಜಾ ಭಟ್ ಮತ್ತು ಮಹೇಶ್ ಭಟ್ (Pooja Bhatt and Mahesh Bhatt)
ಮಹೇಶ್ ಭಟ್ ಮತ್ತು ಮಗಳು ಪೂಜಾ ಭಟ್ ಕೂಡ ಲಿಪ್ ಲಾಕ್ ಮಾಡುವ ಮೂಲಕ ಕಾಂಟ್ರವರ್ಸಿಗೆ ಗುರಿಯಾಗಿದ್ದರು. ಪೂಜಾ 17ನೇ ವಯಸ್ಸಿನಲ್ಲಿ ಡ್ಯಾಡಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಕ್ಕಾಗಿ ನಟಿಯನ್ನು ಆಗಾಗ್ಗೆ ಟ್ರೋಲ್ ಮಾಡಲಾಯಿತು. ಮ್ಯಾಗಝಿನ್ ಒಂದರ ಮುಖಪುಟಕ್ಕಾಗಿ ಮಹೇಶ್ ಭಟ್ ಮತ್ತು ಪೂಜಾ ಭಟ್ ಕಿಸ್ ಮಾಡಿದ್ದರು ಇದು ಕಾಂಟ್ರವರ್ಸಿ ಹುಟ್ಟು ಹಾಕಿತ್ತು.
ಜಾಕಿಶ್ರಾಫ್- ಝೀನತ್ ಅಮನ್ (Jackie Shroff - Zeenat Aman)
1984 ರಲ್ಲಿ, ಜಾಕಿ ಶ್ರಾಫ್ ಮತ್ತು ಜೀನತ್ ಅಮನ್ ಒಂದು ಮ್ಯಾಗಝಿನ್ ಗಾಗಿ ಈ ಫೋಟೋಶೂಟ್ ಮಾಡಿಸಿದ್ದರು, ಅವರ ಪ್ಯಾಷನೇಟ್ ಲಿಪ್-ಲಾಕ್ ಫೋಟೋ ಶೂಟ್ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ರಣ್ವೀರ್ ಸಿಂಗ್ (Ranveer Singh)
ಬಾಲಿವುಡ್ ನ ಪವರ್ ಪ್ಯಾಕ್ ನಾಯಕ ರಣ್ವೀರ್ ಸಿಂಗ್ ತಮ್ಮ ನ್ಯೂಡ್ ಫೋಟೋ ಶೂಟ್ ಮಾಡಿಸಿದ್ದು, ಅದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದು ಅಶ್ಲೀಲತೆಯ ಪ್ರದರ್ಶನ, ಈ ರೀತಿ ಫೋಟೋ ಶೂಟ್ ಮಾಡೋದು ಸರಿಯಲ್ಲ್, ರಣ್ವೀರ್ ಅವರನ್ನು ಬಾಲಿವುಡ್ ನಿಂದ ಬ್ಯಾನ್ ಮಾಡಬೇಕು ಎಂದೆಲ್ಲಾ ಸುದ್ದಿಯಾಗಿತ್ತು.
ಕಿಯಾರಾ ಅಡ್ವಾಣಿ (Kiara Advani)
ಕೆಲವು ಸಮಯದ ಹಿಂದೆ, ಕಿಯಾರಾ ಅಡ್ವಾಣಿ ಪ್ರಸಿದ್ಧ ಛಾಯಾಗ್ರಾಹಕ ಡಬ್ಬೂ ರತ್ನಾನಿ ಅವರಿಗಾಗಿ ಫೋಟೋಶೂಟ್ ಮಾಡಿದರು. ಈ ಫೋಟೋದಲ್ಲಿ, ಕಿಯಾರಾ ಬಾಳೆ ಎಲೆಯ ಹಿಂದೆ ಟಾಪ್ ಲೆಸ್ ಆಗಿ ನಿಂತಿರುವುದನ್ನು ಕಾಣಬಹುದು. ಬಾಲಿವುಡ್ ಸೆಲೆಬ್ರಿಟಿಗಳು ಆಗಾಗ್ಗೆ ಇಂತಹ ಫೋಟೋಶೂಟ್ಗಳನ್ನು ಮಾಡುತ್ತಾರೆ, ಆದರೆ ಕಿಯಾರಾ ಅಡ್ವಾಣಿ ಈ ಫೋಟೋಗಾಗಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು.
ಮಂದಿರಾ ಬೇಡಿ (Mandira Bedi)
ಫೋಟೋಶೂಟ್ಗಾಗಿ ಮಂದಿರಾ ಬೇಡಿ ಅವರನ್ನು ಸಹ ಟ್ರೋಲ್ ಮಾಡಲಾಯಿತು.
ವರ್ಷಗಳ ಹಿಂದೆ, ನಟಿ ಮಂದಿರಾ ಬೇಡಿ ಕೂಡ ಮ್ಯಾಗಝಿನ್ ಮುಖಪುಟಕ್ಕಾಗಿ ಫೋಟೋಶೂಟ್ ಮಾಡಿಸಿ, ವಿವಾದಕ್ಕೆ ಗುರಿಯಾಗಿದ್ದರು. ಈ ಫೋಟೋಶೂಟ್‌ನಲ್ಲಿ ಮಂದಿರ ನಾಭಿಯ ಮೇಲೆ ಬೌದ್ಧ ಚಿಹ್ನೆಯ ಹಚ್ಚೆ ಕಂಡುಬರುತ್ತದೆ, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಕರಿಷ್ಮಾ ಕಪೂರ್ (Karishma Kapoor)
ಈ ಎಲ್ಲಾ ನಟಿಯರನ್ನು ಹೊರತುಪಡಿಸಿ, ಕರಿಷ್ಮಾ ಕಪೂರ್ ಮತ್ತು ಅಕ್ಷಯ್ ಖನ್ನಾ ಅವರ ಈ ಫೋಟೋ ಶೂಟ್ ಸಾಕಷ್ಟು ವಿವಾದಗಳಿಗೆ ಗುರಿಯಾಗಿತ್ತು. ಕರಿಷ್ಮಾ ಕಪೂರ್ ಮತ್ತು ಅಕ್ಷಯ್ ಖನ್ನಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಹ ಹರಡಿತ್ತು.