ಸೋನು ಗೌಡ ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋ ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ.
ಗಣೇಶ ಹಬ್ಬದ ಪ್ರಯುಕ್ತ ಸೋನು ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು! ಹಸಿರು ಸೀರೆಯನ್ನುಟ್ಟು ವಿವಿಧ ಭಂಗಿಗಳಲ್ಲಿ ಮಿಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಹಂಚಿಕೊಂಡಿರುವ ಫೋಟೋಳಿಗೆ ನೆಟ್ಟಿಗರು ಸ್ವೀಟಿ, ಹಾಟ್, ಸೆಕ್ಸೀ, ಮೊದ್ಲು ನಿನ್ನ ಬ್ರಾ ಸರಿ ಮಾಡ್ಕೊಳ್ಳಮ್ಮ ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.
ಟಿಕ್ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.
ಕೆಲ ದಿನದ ಹಿಂದೆ ಸೋನು ತುಂಡುಡುಗೆ ತೊಟ್ಟ ಫೋಟೋವನ್ನು ಪೋಸ್ಟ್ ಮಾಡಿದ್ದರು. ನೀಲಿ ಸ್ಕರ್ಟ್ ತೊಟ್ಟು ಕೈಯಿಂದ ಮೈ ಮುಚ್ಚಿಕೊಂಡ ಫೋಟೋಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಿಕಿನಿ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಮತ್ತೆ ಬೆಡ್‌ರೂಮ್ ಫೋಟೋಸ್ ಪೋಸ್ಟ್ ಮಾಡಿದ್ದರು. ಬಿಕಿನಿ ಫೋಟೋ ಹಾಗೂ ಬೆಡ್‌ರೂಮ್ ಫೋಟೋಸ್ ಹಂಚಿಕೊಳ್ಳುವ ಸಿಕ್ಕಾಪಟ್ಟೆ ವೈರಲ್ ಹಾಗೂ ಟ್ರೋಲ್ ಆಗಿದ್ದರು.