ಎದೆ ಸೀಳು ಕಾಣುವಂತೆ ಬಟ್ಟೆ ಹಾಕ್ಕೊಂಡು ಮೊಬೈಲ್ ಫೋನ್‌ನಿಂದ ಮಾನ ಮುಚ್ಚಿಕೊಳ್ಳೋದೇಕೆ ಅನನ್ಯಾ?

First Published | Oct 14, 2023, 5:02 PM IST

ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದರು. ಕಪ್ಪು ಬಣ್ಣದ ಸ್ಟ್ರ್ಯಾಪ್‌ಲೆಸ್‌ ಗೌನ್‌ ಧರಿಸಿದ್ದ ಆಕೆ, ಕುತ್ತಿಗೆಗೆ ಸರಳ ನೆಕ್ಲೇಸ್‌ ಒಂದನ್ನು ಧರಿಸಿ ಬಂದಿದ್ದರು.

ನಟಿ ಅನನ್ಯಾ ಪಾಂಡೆ ಹೇಗಿದ್ದರೂ ಸುದ್ದಿಯಲ್ಲಿ ಇರುತ್ತಾರೆ. ಬಾಲಿವುಡ್‌ನಲ್ಲಿ ನೆಪೋಟಿಸಂ ಎನ್ನುವ ಶಬ್ದ ಕೇಳಿದಾಗ ಮೊದಲು ಬರುವ ಹೆಸರೇ ಅನನ್ಯಾ ಪಾಂಡೆ ಅವರದ್ದು.

ನಟ ಶಕ್ತಿ ಕಪೂರ್‌ ಅವರ ಪುತ್ರಿಯಾಗಿರುವ ಅನನ್ಯಾ ಪಾಂಡೆ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಪ್ಪು ಬಣ್ಣದ ಸ್ಟ್ರ್ಯಾಪ್‌ಲೆಸ್‌ ಗೌನ್‌ ಧರಿಸಿ ಅವರು ಬಂದಿದ್ದರು.

Tap to resize

ಕುತ್ತಿಗೆಯಲ್ಲಿ ಸರಳವಾಗಿ ಇಳಿಬಿಟ್ಟ ಸಣ್ಣ ಸೆಕ್ಲೇಸ್‌ ಧರಿಸಿದ್ದ ಅವರು ಹೋಟೆಲ್‌ನಿಂದ ಹೊರಬರುವ ವೇಳೆ ಪುರುಷ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಅವರಲ್ಲಿ ಮನವಿ ಮಾಡಿದ್ದಾನೆ.

ಈ ವೇಳೆ ಅನನ್ಯಾ ಪಾಂಡೆ ಅವರ ಮೈಮುಟ್ಟುವ ಆತ ಒಂದು ಸೆಲ್ಫಿ ನೀಡುವಂತೆ ಕೇಳುತ್ತಾನೆ. ಆದರೆ, ಆತ ಮೈಮುಟ್ಟಿದ್ದರಿಂದ ಅನನ್ಯಾ ಪಾಂಡೆ ಇರುಸುಮುರಿಸಿಗೆ ಒಳಗಾಗುತ್ತಾರೆ.

ಆತನನ್ನು ಒಮ್ಮೆಲೆ ದಿಟ್ಟಿಸಿ ನೋಡು ಮುಂದೆ ಹೋಗುವ ಆತ, ಸೆಲ್ಫಿಗೂ ಕೂಡ ನಿಲ್ಲೋದಿಲ್ಲ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರು ಆಯುಷ್ಮಾನ್ ಖುರಾನಾ ಅವರೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಡ್ರೀಮ್ ಗರ್ಲ್ 2 ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. 100 ಕೋಟಿ ಕ್ಲಬ್ ಸೇರಿದ ಅನನ್ಯಾ ಅವರ ಮೊದಲ ಚಿತ್ರ ಇದಾಗಿದೆ.


ಅಕ್ಟೋಬರ್‌ 12 ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಅನನ್ಯಾ ಪಾಂಡೆ ಅವರ ಸೌಂದರ್ಯ ಯಾವುದೇ ಡಿಸ್ನಿ ರಾಜಕುಮಾರಿಗಿಂತ ಕಡಿಮೆ ಇದ್ದಿರಲಿಲ್ಲ.


ಕಪ್ಪು ಬಣ್ಣದ ಗೌನ್‌ ಹಾಗೂ ಆಕರ್ಷಕ ನೆಕ್ಲೇಸ್‌ನಿಂದ ಅವರು ಕಂಫರ್ಟಬಲ್‌ ಆಗಿ ಕಾಣುತ್ತಿರಲಿಲ್ಲ ಎನ್ನುವುದು ವೈರಲ್‌ ಆಗಿರುವ ವಿಡಿಯೋದಿಂದ ಗೊತ್ತಾಗಿದೆ.

ತಮ್ಮ ಎದೆ ಸೀಳು ಕಾಣಬಾರದು ಎನ್ನುವಂತೆ ಅವರು ತಮ್ಮ ಮೊಬೈಲ್‌ಅನ್ನು ಅಡ್ಡ ಹಿಡಿದುಕೊಂಡಿದ್ದು ನಡೆದುಕೊಂಡು ಬಂದಿರುವುದು ವೈರಲ್‌ ಆಗಿದೆ.

ಈ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಅನ್‌ಕಂಫರ್ಟಬಲ್‌ ಆಗಿದ್ದರು ಎನ್ನುವಂಥ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ, ಒಬ್ಬ ವ್ಯಕ್ತಿ ತನ್ನ ಒಪ್ಪಿಗೆಯಿಲ್ಲದೆ ಸ್ಪರ್ಶಿಸಿದಾಗ ಅನನ್ಯಾ ಕಿರಿಕಿರಿಗೆ ಒಳಗಾಗಿದ್ದರು. ಬಳಿಕ ತಮ್ಮ ಎದೆಸೀಳು ಕಾಣದೇ ಇರಲು ಮೊಬೈಲ್‌ನಿಂದ ಮುಚ್ಚಿಕೊಂಡಿದ್ದರು.


ಪ್ರಸ್ತುತ ಇರುವ ಬಾಲಿವುಡ್‌ ಹೀರೋಯಿನ್‌ಗಳ ಪೈಕಿ ಇಷ್ಟು ಗ್ಲಾಮರಸ್‌ ಆಗಿರುವ ಡ್ರೆಸ್‌ಅನ್ನು ಬಹಳವಾಗಿ ಯಾರೂ ಧರಿಸೋದಿಲ್ಲ. ಆದರೆ, ಅನನ್ಯಾ ಪಾಂಡೆ ಇದರಲ್ಲಿ ಬಹಳ ಅನ್‌ ಕಂಫರ್ಟಬಲ್‌ ಆಗಿದ್ದರು ಎನ್ನುವುದು ನೋಡಿದರೆ ಗೊತ್ತಾಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಗ್ಲಾಮರ್‌ ತೋರಿಸಲೇಬೇಕು ಎನ್ನುವ ಕಾರಣಕ್ಕೆ ಇಂಥ ಡ್ರೆಸ್‌ ಹಾಕಿರುವಾಗ ಅದನ್ನು ಮುಚ್ಚಿಕೊಂಡಿರುವುದರಲ್ಲಿ ಅರ್ಥವೇನಿದೆ. ನಿಮಗೆ ಬಹಳ ಇದು ಅನ್‌ ಕಂಫರ್ಟಬಲ್‌ ಆಗಿದೆ ಇದು ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಎದೆಸೀಳು ಕಾಣಲೂಬೇಕು ಹಾಗೂ ಕಾಣಲೂಬಾರದು ಎನ್ನುವ ಗೊಂದಲದಲ್ಲಿದ್ದಾಗ ಮಾತ್ರವೇ ಇಂಥ ಅವಾಂತರಗಳು ಆಗುತ್ತವೆ ಎಂದು ಒನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕಾರ್ಯಕ್ರಮದ ಬಳಿಕ ಅನನ್ಯಾ ಪಾಂಡೆ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಅದೇ ಗೌನ್‌ನಲ್ಲಿ ತೆಗೆಸಿಕೊಂಡ ಸ್ಟನ್ನಿಂಗ್ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.

ನಟ ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಅವರೊಂದಿಗೆ ಖೋ ಗಯೇ ಹಮ್ ಕಹಾಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನನ್ಯಾ ಅಮೆಜಾನ್ ಪ್ರೈಮ್ ವೀಡಿಯೋಗಳ ಕಾಲ್ ಮಿ ಬೇ ಅಲ್ಲೂ ನಟಿಸುತ್ತಿದ್ದಾರೆ. ಆ ಮೂಲಕ ವೆಬ್‌ ಸಿರೀಸ್‌ಗೂ ಅವರು ಪಾದಾರ್ಪಣೆ ಮಾಡುತ್ತಿದ್ದಾರೆ.

Latest Videos

click me!