ಕೆಂಪಾಗುತ್ತಿದೆ ಎಂದ ತುಪ್ಪದ ಬೆಡಗಿ ರಾಗಿಣಿ; ಫೋಟೋ ನೋಡಿ

First Published | May 29, 2024, 7:23 PM IST

Actress Ragini Dwivedi new Photos: ಚಂದನವನದ ತುಪ್ಪದ ಬೆಡಗಿ ಅಂತಾನೇ ಫೇಮಸ್ ಆಗಿರುವ ನಟಿ ರಾಗಿಣಿ ದ್ವಿವೇದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಗಿರುವ ನಟಿ. 

ಕೆಲ ದಿನಗಳ ಹಿಂದೆಯಷ್ಟೇ ಡಾನ್ಸರ್ ಕಿಶನ್ ಬಿಳಗಲಿ (Dancer Kishen Bilagali) ಜೊತೆ ಮಳೆಯಲ್ಲಿಯೂ ಬೆಂಕಿ ಹಚ್ಚಿದ್ದ ಚೆಲುವೆ ರಾಗಿಣಿ ದ್ವಿವೇದಿ (Sandalwood Actress Ragini Dwivedi) ಇಂದು ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ರೆಡ್ ಹಾರ್ಟ್ ಎಮೋಜಿ ಹಾಕಿರುವ ರಾಗಿಣಿ ಕೆಂಪಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಡಾನ್ಸರ್ ಕಿಶನ್‌ ಬಿಳಗಲಿ ಜೊತೆ ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಮಳೆಯಲ್ಲಿ ರಾಗಿಣಿ ಹಾಕಿದ ಒಂದೊಂದು ಹೆಜ್ಜೆಯೂ ಪಡ್ಡೆ ಹುಡುಗರ ಮನದಾಳದಲ್ಲಿ ಪ್ರಣಯದ ತಕಧಿಮಿತಾ ಸೃಷ್ಟಿಸುತ್ತದೆ. ಕಿಶನ್ ಬಿಳಗಲಿಗೆ ನೀನೇ ಅದೃಷ್ಟವಂತಪ್ಪ ಅಂತ ಹೇಳಿ ಅಸೂಯೆ ಪಟ್ಟು ಕೈ ಬೆರಳುಗಳನ್ನು ಹಿಚುಕಿಕೊಂಡಿದ್ದರು.

Tap to resize

ಕೆಲ ದಿನಗಳ ಹಿಂದೆ ಶೋಲ್ಡರ್ ಲೆಸ್ ಬ್ಲಾಕ್ ಡ್ರೆಸ್ ಧರಿಸಿ ಅದಕ್ಕೆ ಹೊಂದಾಣಿಕೆ ಆಗುವಂತಹ ದೊಡ್ಡದಾದ ನೆಕ್ಲೇಸ್ ಹಾಕಿಕೊಂಡು ಕ್ಲಿಕ್ಕಿಸಿಕೊಂಡಿದ್ದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ರಾಗಿಣಿಯ ಮಾದಕ ಕಣ್ಣುಗಳು ಯುವಕರ ಹೃದಯಕ್ಕೆ ದಾಂಗುಡಿ ಇಟ್ಟು ಪ್ರೇಮದ ಚಿತ್ತಾರವನ್ನು ಅರಳಿಸಿತ್ತು.

Ragini Dwivedi

ಮುಖದ ತುಂಬಾ ನಗುವಿನ ಅಲೆಯನ್ನು ತುಂಬಿಕೊಂಡು, ಕೂದಲುಗಳನ್ನು ಮೊಗದ ಮೇಲೆ ಹರಿಬಿಟ್ಕೊಂಡು ರಾಗಿಣಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ರಾಗಿಣಿ ನಗು ಅಭಿಮಾನಿ ಹೃದಯದಲ್ಲಿ ಪುಳಕ ಸೃಷ್ಟಿಸಿರೋದಂತೂ ನಿಜ. ರಾಗಿಣಿಯ ಮೋಹಕ ನಗುವಿಗೆ ಅಭಿಮಾನಿಗಳು ಪೆನ್ನು-ಪೇಪರ್ ಹಿಡಿದು ಕವನ ಗೀಚುತ್ತಿದ್ದಾರೆ.

ಹೆಣ್ಣಿನ ಸೌಂದರ್ಯ ಬೇರೆಲ್ಲೂ ಇಲ್ಲ ಆದರೆ ಅವಳ ಮುಖದ ನಗುದಲ್ಲಿದೆ. ಎಂತಹ ನಿಧಿಯೂ (ವಜ್ರ ಮತ್ತು ಬಂಗಾರದ ಆಭರಣಗಳು) ಅವಳ ಸೌಂದರ್ಯವನ್ನು ಹೆಚ್ಚಿಸುವುದಿಲ್ಲ. ಅವಳ ನಗುವೇ ಆಕೆಯ ಸಂಗಾತಿ. ಅವಳ ನಗು ಒಂದು ಸೌಂದರ್ಯ ಎಂದು ನಾಗರಾಜ್ ಎಂಬವರು ಕಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನು ಕಾವ್ಯಮಯವಾಗಿ ಹೊಗಳಿದ್ದಾರೆ.

ಓರ್ವ ಅಭಿಮಾನಿ ನನಗೆ ನಿಮ್ಮ ಮೂಗು ಇಷ್ಟ ಎಂದು ಬರೆದು ಹಾರ್ಟ್ ಎಮೋಜಿ ಹಾಕಿಕೊಂಡಿದ್ದಾರೆ. ಬಹುತೇಕ ಅಭಿಮಾನಿಗಳು ದೇವರು ನಿಮಗೆ ಒಳ್ಳೆಯದು ಮಾಡಲಿ, ನೀವು ನ್ಯಾಚೂರಲ್ ಬ್ಯೂಟಿ, ಲವ್ ಯು, ಕ್ಯೂಟಿ ಎಂದು ಮನ ತುಂಬಿ ರಾಗಿಣಿ ದ್ವಿವೇದಿಗೆ ಹಾರೈಸಿದ್ದಾರೆ.

ಇದೆಲ್ಲದರ ಜೊತೆಗೆ ರಾಗಿಣಿ ಸಮಯ ಸಿಕ್ಕಾಗೆಲ್ಲಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುವ ರಾಗಿಣಿ ಹೊಸ ರುಚಿಗಳನ್ನು ಪ್ರಯತ್ನಿಸುತ್ತಿರುತ್ತಾರೆ. ರಾಗಿಣಿ ಅಡುಗೆ ಮಾಡುವ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ.

Latest Videos

click me!