ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.
ಅತ್ಯಾಚಾರದ ಬೆದರಿಕೆ ಕರೆಗಳು ಬಂದಿದ್ದು ಮನಸಿಗೆ ನೋವಾಗಿದೆ.
ಮೊದಲು ಈ ಸಂದೇಶಗಳನ್ನು ನೆಗ್ಲೆಟ್ ಮಾಡಿದೆ. ಒಂದೇ ಖಾತೆಯಿಂದ ಬರುತ್ತಿದ್ದು ಆ ಯೂಸರ್ ಬ್ಲಾಕ್ ಮಾಡಿದೆ. ಆದರೆ ಆ ವ್ಯಕ್ತಿ ಬೇರೆ ಬೇರೆ ಖಾತೆಯಿಂದ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ.
ಸುಮಾರು 30 ಕ್ಕೂ ಅಧಿಕ ಇಂಥ ಖಾತೆಗಳನ್ನು ಬ್ಲಾಕ್ ಮಾಡಿದರೂ ಕಿರುಕುಳ ತಪ್ಪಲಿಲ್ಲ.
ಇದೆಲ್ಲವೂ ಸಾಲದು ಎಂದು ನಿಮಗೆ ನಿಮ್ಮ ಕುಟುಂಬಲ್ಲೆ ಹಾನಿ ಮಾಡುತ್ತೇನೆ , ನಿಮ್ಮ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಇಸ್ಟಾಗ್ರ್ಯಾಮ್ ನಲ್ಲಿ ಇಂಥ ಸಂದೇಶಗಳು ಬಂದಿದ್ದು ನೊಂದ ನಟಿ ಪೊಲೀಸರ ಮೊರೆ ಹೋಗಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಮಾಹಿತಿ ನೀಡಲು ಇಸ್ಟಾ ಬಳಿಯೂ ಕೇಳಿಕೊಳ್ಳಲಾಗಿದೆ.
ಅಶ್ಲೀಲ ಸಂದೇಶಗಳಿಂದ ಬೇಸತ್ತ ನಟಿಯಿಂದ ಸೈಬರ್ ಮೊರೆ