ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೆಂಡ್ತಿ ನತಾಶಾ ಬಿಕಿನಿ ಪಿಕ್ಸ್ ವೈರಲ್..!

First Published May 25, 2024, 2:34 PM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ನಡುವಿನ ದಾಂಪತ್ಯ ಜೀವನ ಬಿರುಕುಬಿಟ್ಟಿದೆ ಎನ್ನುವಂತ ಸುದ್ದಿ ವರದಿಯಾಗುತ್ತಲೇ ಇದೆ. ಇದರ ಬೆನ್ನಲ್ಲೇ ಪಾಂಡ್ಯ ಪತ್ನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಕೆಲವು ಬಿಕಿನಿ ಫೋಟೋಗಳು ಇದೀಗ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

ನತಾಶಾ ಸ್ಟ್ಯಾಂಕೋವಿಚ್ ಓರ್ವ ಸರ್ಬಿಯನ್ ಮಾಡೆಲ್ ಆಗಿದ್ದು, ಆಕೆಗೆ ತನ್ನ ತವರು ದೇಶಕ್ಕಿಂತ ಭಾರತದಲ್ಲೇ ಹೆಚ್ಚು ಫಾಲೋವರ್ಸ್ ಇದ್ದಾರೆ. ಹಾರ್ದಿಕ್ ಪಾಂಡ್ಯ ಪತ್ನಿಯಾಗಿರುವ ನತಾಶಾ ಮಾಡೆಲ್ ಮಾತ್ರವಲ್ಲದೇ ನಟಿ ಹಾಗೂ ಒಳ್ಳೆಯ ಡಾನ್ಸರ್ ಕೂಡಾ ಹೌದು.

ಸಾಕಷ್ಟು ಸಮಯದಿಂದ ಡೇಟಿಂಗ್ ನಡಸಿದ್ದ ನತಾಶಾ ಸ್ಟ್ಯಾಂಕೋವಿಚ್ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ 2020ರ ಜನವರಿ 01ರಂದು ಅಚ್ಚರಿಯ ರೀತಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ಇನ್ನು ಎಂಗೇಜ್‌ಮೆಂಟ್ ಘೋಷಿಸಿಕೊಂಡ ಕೆಲವೇ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ ತಾವು ತಂದೆಯಾಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇನ್ನು ಅದೇ ವರ್ಷದ ಜುಲೈನಲ್ಲಿ ನತಾಶಾ-ಪಾಂಡ್ಯ ದಂಪತಿ ತಮ್ಮ ಕುಟುಂಬಕ್ಕೆ ಅಗಸ್ತ್ಯ ಎನ್ನುವ ಮುದ್ದಾದ ಗಂಡು ಮಗುವನ್ನು ಸ್ವಾಗತಿಸಿದ್ದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಸುಂದರ ದಾಂಪತ್ಯ ನಡೆಸಿದ್ದ ಈ ಜೋಡಿಯ ನಡುವೆ ವೈಮನಸ್ಸು ಮೂಡಿದೆ. ಸದ್ಯದಲ್ಲಿಯೇ ಈ ಜೋಡಿ ಬೇರೆ ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

ಇನ್ನು ನತಾಶಾ ಅವರ ಹಿನ್ನೆಲೆಯನ್ನು ನೋಡುವುದಾದರೇ, ನತಾಶಾ ಮಾರ್ಚ್ 04, 1992ರಲ್ಲಿ ಸರ್ಬಿಯಾದಲ್ಲಿ ಜನಿಸಿದರು. ಭಾರತದ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮುನ್ನ ನತಾಶಾ, ಸರ್ಬಿಯಾದಲ್ಲಿ ಮಾಡೆಲ್ ಆಗಿದ್ದರು.

ನತಾಶಾ ಸ್ಟ್ಯಾಂಕೋವಿಚ್ 2013ರಲ್ಲಿ ಪ್ರಕಾಶ್ ಝಾ ನಿರ್ದೇಶನದ 'ಸತ್ಯಾಗ್ರಹ' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ನತಾಶ ಪಾತ್ರ ಚಿಕ್ಕದಾಗಿದ್ದರೂ, ತಮ್ಮ ನಟನೆಯ ಮೂಲಕವೇ ತಮ್ಮ ಹೆಜ್ಜೆಗುರುತು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಇದಾದ ಬಳಿಕ ಟೆವಿವಿಷನ್‌ ಇಂಡಸ್ಟ್ರಿಗೆ ಕಾಲಿಟ್ಟ ನತಾಶಾ, ಭಾರತದಾದ್ಯಂತ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾದರು. 'ಬಿಗ್ ಬಾಸ್ ಸೀಸನ್ 8' ರಿಯಾಲಿಟಿ ಶೋನಲ್ಲಿ ಸ್ಪರ್ಧಾಳುವಾಗಿ ಪಾಲ್ಗೊಂಡಿದ್ದರು.

ನತಾಶಾ ಸ್ಟ್ಯಾಂಕೋವಿಚ್ ಅವರಿಗೆ ಡ್ಯಾನ್ಸಿಂಗ್ ಅಂದರೆ ಪಂಚಪ್ರಾಣ. ತಮ್ಮ ಈ ಕಲೆಯನ್ನು ಹಲವು ವೇದಿಕೆಗಳಲ್ಲಿ ಪ್ರತಿನಿಧಿಸಿ ವ್ಯಾಪಕ ಜನ ಮೆಚ್ಚುಗೆಯನ್ನು ಗಳಿಸಿದ್ದರು. ಆಗಲೇ ಹಾರ್ದಿಕ್ ಪಾಂಡ್ಯ ಕಣ್ಣಿಗೆ ನತಾಶಾ ಬಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ನತಾಶಾ ಸ್ಟ್ಯಾಂಕೋವಿಚ್ ಬಾಳಿನಲ್ಲಿ ಇದೀಗ ಬಿರುಗಾಳಿ ಎದ್ದಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಆಕೆಯೇ ಹಂಚಿಕೊಂಡಿರುವ ಬಿಕಿನಿ ಫೋಟೋಗಳು ವೈರಲ್ ಆಗುತ್ತಿವೆ.

ಇನ್ನು ನತಾಶಾ ಸ್ಟ್ಯಾಂಕೋವಿಚ್ ಇತ್ತೀಚೆಗಿನ ದಿನಗಳಲ್ಲಿ ಒಬ್ಬಂಟಿಯಾಗಿರುವ ಫೋಟೋಗಳನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನು ನತಾಶಾ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿರಲಿಲ್ಲ.

ಇನ್ನು 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರೂ ನತಾಶಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೆಲ್ಲ ಗಮನಿಸಿದರೆ ಪಾಂಡ್ಯ-ನತಾಶಾ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಮಾತಿಗೆ ಬಲ ಬರುವಂತೆ ಆಗಿದೆ.

Latest Videos

click me!