ಐಪಿಎಲ್‌ ಮ್ಯಾಚ್‌ ವೇಳೆ ಸ್ಟ್ಯಾಂಡ್‌ನಲ್ಲಿ ಕಂಡ ಈ ಬೆಂಗಾಳಿ ಬ್ಯೂಟಿ ಫೋಟೋ ವೈರಲ್‌!

First Published | May 16, 2024, 5:20 PM IST

ಪ್ರತಿ ಐಪಿಎಲ್‌ ಮ್ಯಾಚ್‌ನಲ್ಲಿ ಕ್ಯಾಮೆರಾಮೆನ್‌ ಕೈಚಳಕವೋ ಎನ್ನುವಂತೆ ಹೊಸ ಹೊಸ ಬ್ಯೂಟಿಗಳ ಚಿತ್ರ ವೈರಲ್‌ ಆಗುತ್ತಲೇ ಇರುತ್ತದೆ. ಆದರೆ, ಕೆಕೆಆರ್‌ ಪಂದ್ಯದ ವೇಳೆ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡ ಈ ಬ್ಯೂಟಿ ಯಾರು ಅನ್ನೋದರ ಬಗ್ಗೆ ಹುಡುಕಾಟ ಜೋರಾಗಿದೆ.

ಇತ್ತೀಚಿನ ದಿನಗಳು ಹೇಗಾಗಿದೆ ಎಂದರೆ, ಐಪಿಎಲ್‌ ಮ್ಯಾಚ್‌ ಅಂದ್ರ ಪ್ಲೇಯರ್ಸ್‌ಗಳಿಗೆ ಮಾತ್ರವಲ್ಲ, ಐಪಿಎಲ್ ಕ್ಯಾಮೆರಾಮನ್‌ಗಳಿಗೂ ಜನರು ಕರತಾಡನ ಮಾಡ್ತಾರೆ.

ಯಾಕಂದ್ರೆ ಈ ಕ್ಯಾಮೆರಾಮೆನ್‌ಗಳು ಕೇವಲ ಪ್ಲೇಯರ್‌ಗಳ ಮೇಲೆ ಮಾತ್ರ ಫೋಕಸ್‌ ಮಾಡೋದಿಲ್ಲ. ಸ್ಟ್ಯಾಂಡ್‌ಗಳಲ್ಲಿರುವ ಬ್ಯೂಟಿಗಳ ಮೇಲೂ ಜೂಮ್‌ ಮಾಡ್ತಾರೆ.

Tap to resize

ಐಪಿಎಲ್‌ ಕ್ಯಾಮೆರಾಮೆನ್‌ ಕಣ್ಣಿಗೆ ಬಿದ್ದ ಈ ಬ್ಯೂಟಿಗಳು ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ವೈರಲ್‌ ಆಗುತ್ತಾರೆ. ಅವರ ಸೋಶಿಯಲ್‌ ಮೀಡಿಯಾ ಪೇಜ್‌ಗಳ ಫಾಲೋವರ್ಸ್‌ ಕೂಡ ಜಾಸ್ತಿ ಆಗ್ತಾರೆ.

ಕಳೆದ ವರ್ಷ ಗುಜರಾತ್‌ ಟೈಟಾನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದ ವೇಳೆ ಇಬ್ಬರು ಅಪರಿಚಿತ ಹುಡುಗಿಯರ ಫೋಟೋಗಳು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು.

ಸಾಕಷ್ಟು ಸರ್ಚ್‌ ಬಳಿಕ ಈ ಇಬ್ಬರು ಹುಡುಗಿಯರನ್ನು ಸಾಹಿಭಾ ಶೆರ್ನಿ ಹಾಗೂ ಆದಿತಾ ಹುಂಡಿಯಾ ಎಂದು ಸೋಶಿಯಲ್‌ ಮೀಡಿಯಾ ಮಂದಿಯೇ ಗುರುತಿಸಿದ್ದರು.

ಈಗ ಅದೇ ರೀತಿಯ ಇನ್ನೊಂದು ಹುಡುಗಿಯ ಫೋಟೋ ಇನ್ಸ್‌ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಕೆಕೆಆರ್‌ ಪಂದ್ಯದ ವೇಳೆ ಇವರು ಖಾಯಂ ಆಗಿ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗಂತ ಈ ಹುಡುಗಿಯ ಫೋಟೋವನ್ನು ಕ್ಯಾಮೆರಾಮೆನ್‌ ತೆಗೆದಿದ್ದಲ್ಲ. ಸ್ಟೇಡಿಯಂನಲ್ಲಿ ಐಪಿಎಲ್‌ ಪಂದ್ಯ ನೋಡುವ ಚಿತ್ರಗಳನ್ನು ಆಕೆಯೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಕೆಯ ಹಾಟ್‌ ಫೋಟೋಗಳನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ನೀವು ಐಪಿಎಲ್‌ ಕ್ಯಾಮೆರಾಮೆನ್‌ ಕಣ್ಣಿಗೆ ಯಾಕೆ ಇನ್ನೂ ಸಿಕ್ಕಿರಲಿಲ್ಲ ಎಂದೂ ಕೇಳಿದ್ದಾರೆ.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಪಂದ್ಯ ನೋಡುತ್ತಿರುವ ಫೋಟೋವನ್ನು ಆಕೆ ಹಂಚಿಕೊಂಡಿದ್ದಾರೆ. ಕ್ರಾಪ್ಡ್‌ ಟಾಪ್‌ನಲ್ಲಿ ನೀಡಿರುವ ಪೋಸ್‌ಗಳು ವೈರಲ್‌ ಆಗಿವೆ.


ತಕ್ಷಣವೇ ಈಕೆಯ ಮಾಹಿತಿ ಕಲೆಹಾಕಿದ ಸೋಶಿಯಲ್‌ ಮೀಡಿಯಾ ಮಂದಿ ಈಕೆ ಬಂಗಾಳಿ ನಟಿ ಹಾಗೂ ರೂಪದರ್ಶಿ ಶಿಕ್ಷಾ ದಾಸ್‌ ಎಂದು ಗುರುತಿಸಿದ್ದಾರೆ.


ಪ್ರಸ್ತುತ, ಶಿಕ್ಷಾ ದಾಸ್ ಅವರ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ ಮತ್ತು ಅನೇಕರಿಗೆ ಈಕೆಯ  ಹೆಸರು ತಿಳಿದಿಲ್ಲ ಆದರೆ, ಅವರ ಹಾಟ್‌ ಫೋಟೋಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದಾರೆ.


ಶಿಕ್ಷಾದಾಸ್‌ ರೂಪದರ್ಶಿ ಮಾತ್ರವಲ್ಲ ಸಾಕಷ್ಟು ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದು, ಕೊಂಚ ಮಟ್ಟಿಗೆ ಪಶ್ಚಿಮ ಬಂಗಾಳದಲ್ಲಿ ಹೆಸರನ್ನೂ ಸಂಪಾದಿಸಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದ ವೇಳೆ ಇವರು ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದರು.

ಐಪಿಎಲ್‌ನಲ್ಲಿ ಕೆಕೆಆರ್‌ ತಂಡ ಪ್ಲೇ ಆಫ್‌ ಹಂತಕ್ಕೆ ಲಗ್ಗೆ ಇಟ್ಟಿದ್ದರೆ, ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಲೀಗ್‌ ಹಂತದಲ್ಲೇ ನಿರ್ಗಮನ ಕಂಡಿದೆ.

Latest Videos

click me!